AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video Viral: ರಾಮ ಮಂದಿರದಲ್ಲಿ ಹನುಮನ ಭಕ್ತಿ; ಮಂಗಳಾರತಿವರೆಗೂ ಕಾದು ಪ್ರಾರ್ಥನೆ ಸಲ್ಲಿಸಿದ ಕೋತಿ!

Video Viral: ರಾಮ ಮಂದಿರದಲ್ಲಿ ಹನುಮನ ಭಕ್ತಿ; ಮಂಗಳಾರತಿವರೆಗೂ ಕಾದು ಪ್ರಾರ್ಥನೆ ಸಲ್ಲಿಸಿದ ಕೋತಿ!

ಅಕ್ಷತಾ ವರ್ಕಾಡಿ
|

Updated on: Mar 29, 2026 | 3:26 PM

Share

ತೆಲಂಗಾಣದ ಕೊಮಾರಂಭಿಮ್ ಆಸಿಫಾಬಾದ್ ಜಿಲ್ಲೆಯ ರಾಮ ದೇವಾಲಯದಲ್ಲಿ ವಿಸ್ಮಯಕಾರಿ ಘಟನೆ ನಡೆದಿದೆ. ಹನುಮಾನ್ ವಿಗ್ರಹಕ್ಕೆ ಮಂಗಳಾರತಿ ವೇಳೆ ಕಾಣಿಸಿಕೊಂಡ ಕೋತಿಯೊಂದು ಪೂಜೆ ವೀಕ್ಷಿಸಿ, ನಂತರ ವಿಗ್ರಹದ ಬಳಿ ಭಕ್ತಿಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸಿತು. ಅರ್ಚಕರು ನೀಡಿದ ತೀರ್ಥ-ಪ್ರಸಾದ ಸ್ವೀಕರಿಸಿ ಹೊರಟುಹೋಯಿತು. ಇದು ಹನುಮಂತನೇ ಬಂದು ದರ್ಶನ ನೀಡಿದ ಪವಾಡ ಎಂದು ಭಕ್ತರು ಭಾವಿಸಿದ್ದು, ವಿಡಿಯೋ ವೈರಲ್ ಆಗಿದೆ.

ತೆಲಂಗಾಣದ ಕೊಮಾರಂಭಿಮ್ ಆಸಿಫಾಬಾದ್ ಜಿಲ್ಲೆಯ ರಾಮ ದೇವಾಲಯದಲ್ಲಿ ನಡೆದ ಅಪರೂಪದ ದೃಶ್ಯವೊಂದು ವೈರಲ್​ ಆಗಿದೆ. ದೇವಾಲಯದ ಅರ್ಚಕರು ಹನುಮಂತನ ವಿಗ್ರಹಕ್ಕೆ ಮಂಗಳಾರತಿ ಬೆಳಗುತ್ತಿದ್ದ ಕ್ಷಣದಲ್ಲಿ, ಎಲ್ಲಿಂದಲೋ ಬಂದ ಕೋತಿಯೊಂದು ಶಾಂತವಾಗಿ ನಿಂತು ಪೂಜೆಯನ್ನು ಕಣ್ತುಂಬಿಸಿಕೊಂಡಿದೆ. ಮಂಗಳಾರತಿ ಪೂರ್ಣಗೊಂಡ ನಂತರ, ಸಾಕ್ಷಾತ್ ಹನುಮಂತನ ಪ್ರತಿರೂಪದಂತಿದ್ದ ಆ ಕೋತಿ ನೇರವಾಗಿ ವಿಗ್ರಹದ ಬಳಿಗೆ ತೆರಳಿ ಭಕ್ತಿಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸಿದೆ. ಅಷ್ಟೇ ಅಲ್ಲದೆ, ಅರ್ಚಕರು ನೀಡಿದ ತೀರ್ಥ ಮತ್ತು ಪ್ರಸಾದವನ್ನು ಸ್ವೀಕರಿಸಿ, ನೆರೆದಿದ್ದ ಭಕ್ತರನ್ನು ಆಶ್ಚರ್ಯಚಕಿತಗೊಳಿಸಿ ಅಲ್ಲಿಂದ ನಿರ್ಗಮಿಸಿದೆ. ಈ ಅದ್ಭುತ ಘಟನೆಯನ್ನು ಕಂಡ ಅರ್ಚಕರು ಮತ್ತು ಭಕ್ತರು, ಹನುಮಂತನೇ ಸ್ವತಃ ಕೋತಿಯ ರೂಪದಲ್ಲಿ ಬಂದು ನಮಗೆ ದರ್ಶನ ನೀಡಿದ್ದಾನೆ ಎಂದು ಭಾವಿಸಿ ಪುಳಕಿತರಾಗಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿದೆ.

ಇದನ್ನೂ ಓದಿ: ತರಗತಿಯಲ್ಲೇ ಮಲಗಿ ವಿದ್ಯಾರ್ಥಿನಿಯಿಂದ ಮಸಾಜ್ ಮಾಡಿಸಿಕೊಂಡ ಶಿಕ್ಷಕಿ; ವಿಡಿಯೋ ವೈರಲ್

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us