Video: ಜಪಾನ್: ಏಕಾಏಕಿ 36 ಸಾವಿರ ಅಡಿ ಎತ್ತರದಿಂದ 26 ಸಾವಿರ ಅಡಿ ಕೆಳಗೆ ಬಂದ ವಿಮಾನ
ಜಪಾನ್ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಜಪಾನ್ ಏರ್ಲೈನ್ಸ್ ಬೋಯಿಂಗ್ 737 ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಪರಿಣಾಮ 36 ಸಾವಿರ ಅಡಿಯಿಂದ 26 ಸಾವಿರ ಅಡಿಗೆ ಇಳಿದ ಘಟನೆ ವರದಿಯಾಗಿದೆ. ಏಕಾಏಕಿ ವಿಮಾನ ಕೆಳಗಿಳಿದ ಹಿನ್ನೆಲೆ ಆಮ್ಲಜನಕ ಮಟ್ಟ ಏರುಪೇರಾದ್ದರಿಂದ ಪ್ರಯಾಣಿಕರು ಕೂಡಲೇ ಆಕ್ಸಿಜನ್ ಮಾಸ್ಕ್ ಧರಿಸಬೇಕಾಯಿತು. ಈ ಘಟನೆ ಜೂನ್ 30ರಂದು ನಡೆದಿದೆ.ಜಪಾನ್ ಏರ್ಲೈನ್ಸ್ ಮತ್ತು ಅದರ ಅಂಗಸಂಸ್ಥೆಯಾದ ಸ್ಪ್ರಿಂಗ್ ಜಪಾನ್ ನಡುವಿನ ಕೋಡ್‌ಶೇರ್ ಒಪ್ಪಂದದಡಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು.

ಅದು ಚೀನಾದ ಶಾಂಘೈ ಪುಡಾಂಗ್ ವಿಮಾನ ನಿಲ್ದಾಣದಿಂದ ಹೊರಟು ಜಪಾನ್‌ನ ಟೋಕಿಯೋ ನರಿಟಾ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು. ವಿಮಾನದಲ್ಲಿ 191 ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು, ಆಗಸದಲ್ಲಿ ಇದ್ದಕ್ಕಿದ್ದಂತೆ ಸಮಸ್ಯೆ ಕಾಣಿಸಿಕೊಂಡಿತ್ತು. ಸಂಜೆ 6.53 ಕ್ಕೆ 10 ನಿಮಿಷಗಳಲ್ಲಿ ಸುಮಾರು 36,000 ಅಡಿಗಳಿಂದ 26,000 ಅಡಿಗಳಿಗೆ ವಿಮಾನ ಇಳಿದಿತ್ತು. ಬಳಿಕ ತುರ್ತು ಭೂಸ್ಪರ್ಶ ಮಾಡಲಾಯಿತು.
ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ, ತಾವು ಬದುಕುವ ಭರವಸೆಯನ್ನೇ ಕಳೆದುಕೊಂಡಿದ್ದೆವು ಎಂದು ಪ್ರತಿಕ್ರಿಯಿಸಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚಿಕ್ಕಬಳ್ಳಾಪುರ: 1 ಕೋಟಿ 11 ಲಕ್ಷ ರೂ ಮೌಲ್ಯದ ಕುದುರೆಗೆ ಅದ್ದೂರಿ ಸ್ವಾಗತ

ಸಿಬ್ಬಂದಿಯನ್ನ ಹೆದರಿಸಿ ಮಸಾಜ್ ಮಾಡಿಸಿಕೊಂಡ ಮುಖ್ಯಶಿಕ್ಷಕಿ: ವಿಡಿಯೋ ವೈರಲ್

ಬೀದರ್ನ ಐತಿಹಾಸಿಕ ಗುರುದ್ವಾರಕ್ಕೆ ಮತ್ತೊಮ್ಮೆ ಬಾಂಬ್ ಬೆದರಿಕೆ

ಬೆಂಗಳೂರಿನ ಹಲವೆಡೆ ಮಳೆ: ಸಿಲಿಕಾನ್ ಸಿಟಿ ಮತ್ತಷ್ಟು ಕೂಲ್ ಕೂಲ್