5 ವರ್ಷಗಳ ಕಾಲ ನಾನೇ ಸಿಎಂ: ಇರಲ್ಲ ಅನ್ನೋಕೆ ಅಶೋಕ್ ಏನು ಹೈಕಮಾಂಡಾ? ಸಿಎಂ
ನಂದಿಬೆಟ್ಟದಲ್ಲಿ ನಡೆದ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಐದು ವರ್ಷಗಳ ಅಧಿಕಾರಾವಧಿಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ನಿಂದ ವ್ಯಕ್ತವಾಗುತ್ತಿರುವ ಅನುಮಾನಗಳಿಗೆ ಪ್ರತಿಕ್ರಿಯಿಸಿದ ಅವರು, ಜಾತಿ ಸಮೀಕ್ಷೆ ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪಗಳನ್ನೂ ಉಲ್ಲೇಖಿಸಿದ್ದಾರೆ. ವಿಡಿಯೋ ನೋಡಿ.
ಬೆಂಗಳೂರು, ಜುಲೈ 02: ನಂದಿಬೆಟ್ಟದಲ್ಲಿ ನಡೆದ ಸಂಪುಟ ಸಭೆಗೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ (Siddaramaiah), 5 ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ. ಭಾರತೀಯ ಜನತಾ ಪಕ್ಷದವರು ಹಗಲುಗನಸು ಕಾಣುತ್ತಿದ್ದಾರೆ. ನಮ್ಮ ಸರ್ಕಾರ ಬಂಡೆ ರೀತಿ 5 ವರ್ಷಗಳ ಕಾಲ ಇರಲಿದೆ ಎಂದಿದ್ದಾರೆ. ಈ ವೇಳೆ ನೀವು ಐದು ವರ್ಷ ಸಿಎಂ ಇರಲ್ಲ ಅಂತ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ ಎಂದು ಮಾಧ್ಯಮದರು ಪ್ರಶ್ನಿಸಿದ್ದು, ಇರಲ್ಲ ಎನ್ನುವುದಕ್ಕೆ ಅಶೋಕ್ ಯಾರು? ಅವರು ನಮ್ಮ ಹೈಕಮಾಂಡ್ ಎಂದು ಸಿಎಂ ಪ್ರಶ್ನಿಸಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Jul 02, 2025 01:31 PM
Latest Videos