ಅಶೋಕಗೆ ತನ್ನ ಸ್ಥಾನದ ಬಗ್ಗೆ ಗ್ಯಾರಂಟಿ ಇಲ್ಲ, ಬೇರೆಯವರ ಸ್ಥಾನದ ಬಗ್ಗೆ ಮಾತಾಡುತ್ತಾರೆ: ಪ್ರದೀಪ್ ಈಶ್ವರ್, ಶಾಸಕ
ವಿರೋಧ ಪಕ್ಷದ ನಾಯಕ ಅರ್ ಅಶೋಕ ಜ್ಯೋತಿಷಾಲಯ ತೆರೆದಿರುವಂತಿದೆ, ಅವರಿಗೆ ತಮ್ಮ ಸ್ಥಾನ ಭದ್ರವಾಗಿರುವ ಖಚಿತ ಮಾಹಿತಿಯಿಲ್ಲ, ಬೇರೆಯವರ ಸ್ಥಾನದ ಬಗ್ಗೆ ಮಾತಾಡುತ್ತಾರೆ, ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸುನೀಲ ಕುಮಾರ್ ಈಗಾಗಲೇ ಟವೆಲ್ ಹಾಕಿದ್ದಾರೆ, ಅದು ಗೊತ್ತಿದ್ದೂ ಅಶೋಕ ಈ ಬಾರಿಯ ದಸರಾ ಮಹೋತ್ಸವದಲ್ಲಿ ಬೇರೆ ಮುಖ್ಯಮಂತ್ರಿ ಪೂಜೆ ಸಲ್ಲಿಸುತ್ತಾರೆ ಎಂದು ಹೇಳುತ್ತಾರೆ.
ಚಿಕ್ಕಬಳ್ಳಾಪುರ, ಜುಲೈ 2: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್ ತನ್ನೆರಡು ಕಣ್ಣುಗಳಿದ್ದಂತೆ ಅಂತ ಹೇಳಿದರು. ನಂದಿ ಗಿರಿಧಾಮದ ಕೆಳಭಾಗದಲ್ಲಿರುವ ಭೋಗ ನಂದೀಶ್ವರ ದೇವಸ್ಥಾನದ ಮುಂದೆ ನಮ್ಮ ವರದಿಗಾರನೊಂದಿಗೆ ಮಾತಾಡಿದ ಆವರು, ಮುಖ್ಯಮಂತ್ರಿ ಬದಲಾವಣೆ ವಿಷಯ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು, ಅದರ ಬಗ್ಗೆ ತಾವಾಡುವ ಮಾತು ಮಾನ್ಯವಾಗಲ್ಲ ಎಂದರು. ಇಕ್ಬಾಲ್ ಹುಸೇನ್ ಅನುಭವಿ ಶಾಸಕರು ಮತ್ತು ತನಗಿಂತ ಹಿರಿಯರು, ಅವರ ಬಗ್ಗೆ ತಾನು ಕಾಮೆಂಟ್ ಮಾಡಲಾರೆ ಎಂದು ಈಶ್ವರ್ ಹೇಳಿದರು. ಕೆಲ ಶಾಸಕರು ಪಕ್ಷಕ್ಕೆ ಮುಜುಗುರ ಉಂಟಾಗುವ ರೀತಿ ಮಾತಾಡುತ್ತಿರುವುದು ಸತ್ಯ, ಅದನ್ನೆಲ್ಲ ಪಕ್ಷದ ಹಿರಿಯರು ನೋಡಿಕೊಳ್ಳುತ್ತಾರೆ ಎಂದು ಪ್ರದೀಪ್ ಈಶ್ವರ್ ಹೇಳಿದರು.
ಇದನ್ನೂ ಓದಿ: ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಲಾಗದ ಪ್ರದೀಪ್ ಈಶ್ವರ್ ವಿಷಯಾಂತರ ಮಾಡುವ ಪ್ರಯತ್ನ ಮಾಡಿದರು
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ