ಶಂಕಿತ ಉಗ್ರ ಮಾಜ್​ನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಲಾಯಿತು!

ಬುಧವಾರದಂದು ಮಾಜ್ ಹೆಸರಿನ ಶಂಕಿತ ಉಗ್ರನನ್ನು ವೈದ್ಯಕೀಯ ಪರೀಕ್ಷೆಗೆ ಅಂತ ಶಿವಮೊಗ್ಗೆಯ ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಯಿತು. ಆಸ್ಪತ್ರೆಯಲ್ಲಿ ಅವನನ್ನು ವಿವಿಧ ಪರೀಕ್ಷೆಗಳಿಗೆ ಒಳಪಡಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

TV9kannada Web Team

| Edited By: Arun Belly

Sep 21, 2022 | 12:45 PM

ಶಿವಮೊಗ್ಗ: ಮಲೆನಾಡಿನ ಶಿವಮೊಗ್ಗದಲ್ಲಿ (Shivamogga) ಉಗ್ರರು ಬೀಡು ಬಿಡಲಾರಂಭಿಸಿದ್ದಾರೆಯೇ? ಪೊಲೀಸರ ಕಾರ್ಯಾಚರಣೆ ಈ ಅನುಮಾನವನ್ನು ಬಲಪಡಿಸುತ್ತದೆ ಮಾರಾಯ್ರೇ. ನಗರದ ಪೊಲೀಸರು ಒಬ್ಬ ಶಂಕಿತ ಉಗ್ರನನ್ನು (Terror Suspect) ವಶಕ್ಕೆ ಪಡೆದ ಬಗ್ಗೆ ನಾವು ಈಗಾಗಲೇ ವರದಿ ಮಾಡಿದ್ದೇವೆ. ಬುಧವಾರದಂದು ಮಾಜ್ (Maaz) ಹೆಸರಿನ ಶಂಕಿತ ಉಗ್ರನನ್ನು ವೈದ್ಯಕೀಯ ಪರೀಕ್ಷೆಗೆ ಅಂತ ಶಿವಮೊಗ್ಗೆಯ ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಯಿತು. ಆಸ್ಪತ್ರೆಯಲ್ಲಿ ಅವನನ್ನು ವಿವಿಧ ಪರೀಕ್ಷೆಗಳಿಗೆ ಒಳಪಡಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

Follow us on

Click on your DTH Provider to Add TV9 Kannada