ವಿಜಯ್ ರ‍್ಯಾಲಿಯಲ್ಲಿ ಕಾಲ್ತುಳಿತ: 10 ವರ್ಷದ ಬಾಲಕಿ ಸಾವನ್ನ ಕಣ್ಣಾರೆ ಕಂಡೆ ಎಂದ ಬೆಂಗಳೂರಿನ ವ್ಯಕ್ತಿ
ಕರೂರಿನಲ್ಲಿ ನಟ ವಿಜಯ್ ಚುನಾವಣಾ ರ್ಯಾಲಿಯ ವೇಳೆ ನಡೆದ ಕಾಲ್ತುಳಿತ ದುರಂತದ ಬಗ್ಗೆ ಪ್ರತ್ಯಕ್ಷದರ್ಶಿ ಮಾಂಗಿಲಾಲ್ ವಿವರಿಸಿದ್ದಾರೆ. 10 ವರ್ಷದ ಬಾಲಕಿ ಸಾವನ್ನಪ್ಪಿದ್ದನ್ನು ಕಣ್ಣಾರೆ ಕಂಡ ಅವರು, ವ್ಯವಸ್ಥೆಯ ವೈಫಲ್ಯದ ಬಗ್ಗೆ ಹೇಳಿದ್ದಾರೆ. ಬಾಲಕಿಯ ಮುಖ ಕಾಲ್ತುಳಿತದಿಂದ ಊದಿತ್ತು ಎಂದು ಅವರು ಹೇಳಿದ್ದಾರೆ.
ತಮಿಳುನಾಡು, ಸೆಪ್ಟೆಂಬರ್ 28: ಕರೂರಲ್ಲಿ ನಟ ದಳಪತಿ ವಿಜಯ್ ಚುನಾವಣಾ ರ‍್ಯಾಲಿ ಕಾಲ್ತುಳಿತ ದುರಂತ ಕಣ್ಣಾರೆ ಕಂಡ ಬೆಂಗಳೂರಿನ ಬನಶಂಕರಿ ನಿವಾಸಿ ಮಾಂಗೀಲಾಲ್ ಎಂಬುವವರು ಘಟನೆಯ ಭೀಕರತೆ ಬಿಚ್ಚಿಟ್ಟಿದ್ದಾರೆ. ಶನಿವಾರ ನಟ ವಿಜಯ್ ಚುನಾವಣಾ ರ‍್ಯಾಲಿ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದ ಮಾಂಗೀಲಾಲ್, 10 ವರ್ಷದ ಬಾಲಕಿ ಸಾವನ್ನ ಕಣ್ಣಾರೆ ಕಂಡೆ ಎಂದು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
