ಗ್ಯಾರಂಟಿ ಯೋಜನೆ ಜಾರಿಯಲ್ಲಿಟ್ಟು ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳೋದು ದುಸ್ಸಾಧ್ಯ: ಬಸವರಾಜ ರಾಯರೆಡ್ಡಿ
ಬಸವರಾಜ ರಾಯರೆಡ್ಡಿ ಅವರು ಹೇಳಿದ್ದನ್ನೇ ವಿರೋಧ ಪಕ್ಷದ ನಾಯಕರು ಸಹ ಹೇಳುತ್ತಿದ್ದಾರೆ ಅದರೆ ಸರ್ಕಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಬೇರೆ ಸಚಿವರು ಈ ಮಾತನ್ನು ಅಂಗೀಕರಿಸುವುದಿಲ್ಲ. ರಾಯರೆಡ್ಡಿ ಹೇಳಿರುವುದಕ್ಕೆ ಮುಖ್ಯಮಂತ್ರಿ ಮತ್ತು ಡಿಸಿಎಂ ಹೇಗೆ ಪ್ರತಿಕ್ರಿಯಿಸುತ್ತಾರೆ ಅಂತ ಕಾದು ನೋಡಬೇಕು.
ಕೊಪ್ಪಳ: ಮುಖ್ಯಮಂತ್ರಿಯವರ ಅರ್ಥಿಕ ಸಲಹೆಗಾರ ಮತ್ತು ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ವಿವಾದಾಸ್ಪದ ಮತ್ತು ತಮ್ಮ ಪಕ್ಷದವರನ್ನೇ ಇಕ್ಕಟ್ಟಿಗೆ ಸಿಕ್ಕಿಸುವ ಹೇಳಿಕೆಗಳನ್ನು ನೀಡುವುದರಲ್ಲಿ ಸಿದ್ಧಹಸ್ತರು. ಇಂದು ತಮ್ಮ ಕ್ಷೇತ್ರದ ಮಂಗಳೂರು ಎಂಬ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಸಭೆಯೊಂದರಲ್ಲಿ ಮಾತಾಡಿದ ಅವರು ಗ್ಯಾರಂಟಿ ಯೋಜನೆಗಳನ್ನು ಜಾರಿಯಲ್ಲಿಟ್ಟು ರಾಜ್ಯದಲ್ಲಿ ಅಬಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದು ಸಾಧ್ಯವೇ ಇಲ್ಲ ಎಂದು ಹೇಳಿದರು. ₹65,000 ಕೋಟಿ ಹಣವನ್ನು ಆ ಯೋಜನೆಗಳಿಗಾಗಿ ಮೀಸಲಿಟ್ಟ ಬಳಿಕ ಅಭಿವೃದ್ಧಿ ಕಾರ್ಯಗಳಿಹೆ ಹಣ ಎಲ್ಲಿಂದ ಉಳಿಯುತ್ತದೆ? ಸಿಎಂ ಅವರ ಆರ್ಥಿಕ ಸಲಹೆಗಾರನಾಗಿರುವುದರಿಂದ ರಾಜ್ಯದ ಆರ್ಥಿಕ ಸ್ಥಿತಿ ತನಗೆ ಚೆನ್ನಾಗಿ ಗೊತ್ತಿದೆ ಮತ್ತು ಅದೇ ಕಾರಣಕ್ಕೆ ಕೇವಲ ತನ್ನ ಕ್ಷೇತ್ರಕ್ಕೆ ಮಾತ್ರ ಅನುದಾನ ಬಿಡುಗಡೆಯಾಗಿದೆ ಎಂದು ರಾಯರೆಡ್ಡಿ ಹೇಳಿದರು. ತಾನು ಆರ್ಥಿಕ ಸಲಹೆಗಾರನಾಗಿರದಿದ್ದರೆ ಯಲಬುರ್ಗಾಗೂ ಅನುದಾನ ಸಿಗುತ್ತಿರಲಿಲ್ಲ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: