ಪ್ರಧಾನಿ ನರೇಂದ್ರ ಮೋದಿ ವಿಶ್ವದೆಲ್ಲೆಡೆ ಸುತ್ತಾಡಿ ಭಾರತದ ಶ್ರೇಷ್ಠತೆಯನ್ನು ಸಾರುತ್ತಿದ್ದಾರೆ: ಬಿಎಸ್ ಯಡಿಯೂರಪ್ಪ
ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಮೊದಲಾದ ನಾಯಕರೊಂದಿಗೆ ತಾನು ರಾಜ್ಯದ ಉದ್ದಗಲಕ್ಕೆ ತಿರುಗಾಡಿದ ಪರಿಣಾಮವಾಗೇ ಇಲ್ಲಿ ಬದಲಾವಣೆ ಗಾಳಿ ಬೀಸಿತು, ಮತ್ತು ತಾನು 4 ಸಲ ರಾಜ್ಯದ ಮುಖ್ಯಮಂತ್ರಿಯಾಗುವುದು ಸಾಧ್ಯವಾಯಿತು, ಚುನಾವಣೆಯಲ್ಲಿ ಏರಿಳಿತಗಳು ಸಹಜ, ಪುನಃ ರಾಜ್ಯಾದ್ಯಂತ ಸುತ್ತಾಡಿ ಬಿಜೆಪಿಯನ್ನು ಅಧಿಕಾರಕ್ಕೆ ಶಪಥವನ್ನು ಯಡಿಯೂರಪ್ಪ ತೊಟ್ಟರು.
ಶಿವಮೊಗ್ಗ, ಆಗಸ್ಟ್ 1: ನರೇಂದ್ರ ಮೋದಿ (Narendra Modi) ಅವರಂಥ ವ್ಯಕ್ತಿ ದೇಶದ ಪ್ರಧಾನ ಮಂತ್ರಿಯಾಗಿ ಸಿಕ್ಕಿರೋದು ನಮ್ಮೆಲ್ಲರ ಸೌಭಾಗ್ಯ, ಅವರು ವಿಶ್ವದ ಉದ್ದಗಲಕ್ಕೆ ಓಡಾಡಿ ಭಾರತದ ಶ್ರೇಷ್ಠತೆಯನ್ನು ಸಾರುತ್ತಿದ್ದಾರೆ, ಇಡೀ ವಿಶ್ವವೇ ಇವತ್ತು ಭಾರತದತ್ತ ಬೆರಗುಗಣ್ಣುಗಳಿಂದ ನೋಡುತ್ತಿದೆ ಎಂದು ಹಿರಿಯ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು. ಮೋದಿಯವರು ದೇಶವನ್ನು ಸುಭದ್ರಪಡಿಸುವುದಕ್ಕೋಸ್ಕರ ಹಾಕುತ್ತಿರುವ ಶ್ರಮವನ್ನು ಇಂದಿನ ಯುವ ಪೀಳಿಗೆ ಯಾವತ್ತೂ ಮರೆಯಬಾರದು ಎಂದು ಯಡಿಯೂರಪ್ಪ ಹೇಳಿದರು.
ಇದನ್ನೂ ಓದಿ: ಡಾ ಶ್ಯಾಮಾ ಪ್ರಸಾದ್ ಮುಖರ್ಜಿ ದೇಶದ ಐಕ್ಯತೆ ಮತ್ತು ಅಖಂಡತೆಗಾಗಿ ತಮ್ಮ ಬದುಕನ್ನೇ ಮುಡುಪಿಟ್ಟವರು: ಯಡಿಯೂರಪ್ಪ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
