ತರುಣ್ ಸುಧೀರ್-ಸೋನಲ್ ಆರತಕ್ಷತೆಗೆ 180 ಬಗೆಯ ಊಟ; ಸಿದ್ಧವಾಗಿದೆ ಭರ್ಜರಿ ಭೋಜನ
ಬಹಳ ಅದ್ದೂರಿಯಾಗಿ ಸೋನಲ್ ಮತ್ತು ತರುಣ್ ಸುಧೀರ್ ಅವರ ಆರತಕ್ಷತೆ ಸಮಾರಂಭ ನಡೆಯುತ್ತಿದೆ. 8 ಬಗೆಯ ದೋಸೆ, 22 ಬಗೆಯ ಸಿಹಿ ತಿಂಡಿ, 12 ಬಗೆಯ ಚಾಟ್ಸ್ ಸೇರಿದಂತೆ ಒಟ್ಟು 180 ಬಗೆಯ ಆಹಾರ ಪದಾರ್ಥವನ್ನು ಬಾಣಸಿಗರು ಸಿದ್ಧಪಡಿಸಿದ್ದಾರೆ. ಎಷ್ಟೇ ಜನರು ಬಂದರೂ ಕೊರತೆ ಆಗದ ರೀತಿಯಲ್ಲಿ ಅಡುಗೆ ವ್ಯವಸ್ಥೆ ಮಾಡಲಾಗಿದೆ.
ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಕಂಡಿರುವ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮಾಂಥೆರೋ ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇಂದು (ಆಗಸ್ಟ್ 10) ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಇರುವ ಪೂರ್ಣಿಮಾ ಪ್ಯಾಲೇಸ್ನಲ್ಲಿ ರಿಸೆಪ್ಷನ್ ನಡೆಯುತ್ತಿದೆ. ಸಾವಿರಾರು ಜನರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಸಿನಿಮಾ, ರಾಜಕೀಯ, ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಬಂದು ಆಶೀರ್ವಾದ ಮಾಡುತ್ತಿದ್ದಾರೆ. ಅಥಿತಿಗಳಿಗಾಗಿ ಬರೋಬ್ಬರಿ 180 ಬಗೆಯ ಆಹಾರ ಸಿದ್ಧ ಪಡಿಸಲಾಗಿದೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ನಾಳೆ (ಆಗಸ್ಟ್ 11) ತರುಣ್ ಸುಧೀರ್ ಹಾಗೂ ಸೋನಲ್ ಮಾಂತೆರೋ ಮದುವೆ ನಡೆಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.