ಕೇರಳದ ಕಲಾವಿದನ ಕೈಯಲ್ಲಿ ಅರಳಿದ ಪ್ರಧಾನಿ ಮೋದಿ ಭವ್ಯ ಪ್ರತಿಮೆ

|

Updated on: Jul 03, 2024 | 8:25 AM

ಕೇರಳದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸುಂದರ ಪ್ರತಿಮೆ ನಿರ್ಮಾಣವಾಗಿದೆ. ಕೇರಳದ ಕಲಾವಿದ ರವೀಂದ್ರನ್ ಶಿಲ್ಪಸಾಲಾ ಎಂಬುವವರು ಪ್ರಧಾನಿ ನರೇಂದ್ರ ಮೋದಿ(Narendra Modi) ಯವರ ಪ್ರತಿಮೆಯನ್ನು ಕೆತ್ತಿದ್ದಾರೆ. ಈ ಭವ್ಯ ಪ್ರತಿಮೆಯನ್ನು ತೇಗದ ಮರದಲ್ಲಿ ಕೆತ್ತಲಾಗಿದ್ದು, 6.5 ಅಡಿಯಷ್ಟು ಎತ್ತರವಿದೆ.

ಕೇರಳದ ಕಲಾವಿದ ರವೀಂದ್ರನ್ ಶಿಲ್ಪಸಾಲಾ ಎಂಬುವವರು ಪ್ರಧಾನಿ ನರೇಂದ್ರ ಮೋದಿ(Narendra Modi) ಯವರ ಪ್ರತಿಮೆಯನ್ನು ಕೆತ್ತಿದ್ದಾರೆ. ಈ ಭವ್ಯ ಪ್ರತಿಮೆಯನ್ನು ತೇಗದ ಮರದಲ್ಲಿ ಕೆತ್ತಲಾಗಿದ್ದು, 6.5 ಅಡಿಯಷ್ಟು ಎತ್ತರವಿದೆ. ಕೇರಳದ ತ್ರಿಶೂರ್ ಜಿಲ್ಲೆಯ ಕೊಡುಂಗಲ್ಲೂರು ಮೂಲದ ಶಿಲ್ಪಿ ಈ ಪ್ರತಿಮೆಯ ಕೆತ್ತನೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಬಾರಿ ಈ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜಯ ಸಾಧಿಸಿ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿದ್ದಾರೆ. ಎನ್​ಡಿಎ ಸರ್ಕಾರವು ಬಹುಮತ ಪಡೆದು ಸರ್ಕಾರವನ್ನು ರಚಿಸಿತು. ಕೇರಳದಿಂದ ಸುರೇಶ್​ ಗೋಪಿ ಮಾತ್ರ ಗೆಲುವು ಸಾಧಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮೇಣದ ಪ್ರತಿಮೆಗಳು ಲಂಡನ್, ಹಾಂಕ್ ಕಾಂಗ್, ಸಿಂಗಪೂರ್ ಹಾಗೂ ಬ್ಯಾಂಗ್ಕಾಕ್ ನಲ್ಲಿರುವ ಮೇಡಮ್‌ ಟುಸ್ಸಾಡ್ಸ್‌ ಮ್ಯೂಸಿಯಂನಲ್ಲಿ ಇದೆ.
ಖುರ್ತಾ ಧರಿಸಿ, ನಮಸ್ಕಾರ ಮಾಡುತ್ತಿರುವ ಭಂಗಿಯಲ್ಲಿ ಪ್ರಧಾನಿ ಮೋದಿ ಅವರ ಮೇಣದ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿತ್ತು. ಮೋದಿ ಅವರ ಮೇಣದ ಪ್ರತಿಮೆ ನಿರ್ಮಾಣಕ್ಕೆ 1 .8 ಮಿಲಿಯನ್ ಹಾಂಕ್ ಕಾಂಗ್ ಡಾಲರ್ ಖರ್ಚಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ