ಸೌಂದರ್ಯ ಮತ್ತು ದೇಹಸಿರಿಯ ಅಪರೂಪದ ಮಿಶ್ರಣ ಜಾಕ್ವೆಲಿನ್ ಫರ್ನಾಂಡಿಸ್​​ಗೆ ರೋಮಾನ್ಸ್ ಬಗ್ಗೆ ಯೋಚಿಸಲು ಪುರುಸೊತ್ತಿಲ್ಲ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 24, 2021 | 8:33 PM

ಜಾಕ್ವೆಲಿನ್ ಸೌಂದರ್ಯಕ್ಕೆ ಅರಸಿಕನೂ ಮಾರುಹೋಗುತ್ತಾನೆ. ಸೌಂದರ್ಯದ ಖನಿ ಮತ್ತು ಮಾದಕ ಮೈಮಾಟದ ಬೆಡಗಿ ತನ್ನ ಫಿಗರ್ ಕಾಯ್ದುಕೊಳ್ಳಲು ಬಹಳ ಕಸರತ್ತು ಮಾಡುತ್ತಾರೆ.

ಜಾಕ್ವೆಲಿನ್ ಫರ್ನಾಂಡಿಸ್ ಅವರ ಕುರಿತು ಒಂದು ಗುಕ್ಕಿನಲ್ಲಿ ಹೇಳುವುದು ಬಹಳ ಕಷ್ಟ ಮಾರಾಯ್ರೇ. ಯಾಕೆ ಗೊತ್ತಾ? ಅಸಲಿಗೆ ಈಕೆ ಶ್ರೀಲಂಕಾದವರು, ಹುಟ್ಟಿದ್ದು ಬಹ್ರೇನ್ನಲ್ಲಿ, ಓದಿದ್ದು ಆಸ್ಟ್ರೇಲಿಯ, ಕರ್ಮಭೂಮಿ ಭಾರತ! 2009 ರಲ್ಲಿ ಭಾರತಕ್ಕೆ ಬರುವ ಮೊದಲು ಸಮೂಹ ಮಾಧ್ಯಮ ವ್ಯಾಸಂಗ ಮಾಡಿರುವ ಜಾಕ್ವೆಲಿನ್ ಶ್ರೀಲಂಕಾದ ಟಿವಿ ಚ್ಯಾನೆಲೊಂದರಲ್ಲಿ ವರದಿಗಾರ್ತಿಯಾಗಿ ಕೆಲಸ ಮಾಡಿದ್ದರು. ಕಳೆದ 10-12 ವರ್ಷಗಳಿಂದ ಬಾಲಿವುಡ್ನಲ್ಲಿ ಬ್ಯುಸಿ ನಟಿಯಾಗಿರುವ ಈಕೆ ಸುಮಾರು 35 ಚಿತ್ರಗಳಲ್ಲಿ ನಟಿಸಿದ್ದಾರೆ. ಇದರಲ್ಲಿ ಸುದೀಪ್ ಅಭಿನಯದ ‘ವಿಕ್ರಾಂತ ರೋಣ’ ಕನ್ನಡ ಚಿತ್ರವೂ ಸೇರಿದೆ.

ಜಾಕ್ವೆಲಿನ್ ಸೌಂದರ್ಯಕ್ಕೆ ಅರಸಿಕನೂ ಮಾರುಹೋಗುತ್ತಾನೆ. ಸೌಂದರ್ಯದ ಖನಿ ಮತ್ತು ಮಾದಕ ಮೈಮಾಟದ ಬೆಡಗಿ ತನ್ನ ಫಿಗರ್ ಕಾಯ್ದುಕೊಳ್ಳಲು ಬಹಳ ಕಸರತ್ತು ಮಾಡುತ್ತಾರೆ. ಸೊಬಗಿನ ದೇಹಸಿರಿ ಮತ್ತು ಮತ್ತೇರಿಸುವ ರೂಪ ಈಕೆಯಲ್ಲಿ ಮೇಳೈಸಿವೆ. ಜಾಕ್ವೆಲಿನ್ ಸಾಂಪ್ರದಾಯಿಕ ಉಡುಗೆಗಳಲ್ಲಿ ಎಷ್ಟು ಆಕರ್ಷಕಳಾಗಿ ಕಾಣುತ್ತಾರೋ ವೆಸ್ಟರ್ನ್ ಔಟ್ಫಿಟ್ನಲ್ಲಿ ಅಷ್ಟೇ ಸೆಕ್ಸೀಯಾಗಿ ಕಾಣುತ್ತಾರೆ. ಜಾಕ್ವೆಲಿನ್ ತನ್ನ ವಿಶಿಷ್ಟ ಉಡುಗೆಳಿಂದ ಗುರುತಿಸಿಕೊಳ್ಳುತ್ತಾರೆ ಮತ್ತು ಗಮನಸೆಳೆಯುತ್ತಾರೆ. ಈಕೆ ಗ್ಲಾಮರ್ ಗೊಂಬೆ ಅನ್ನೋದು ಸುಳ್ಳಲ್ಲ.

36 ವರ್ಷ ವಯಸ್ಸಿನ ಜಾಕ್ವೆಲಿನ್ ವೈಯಕ್ತಿಕ ಬದುಕು ಕುರಿತು ಸಾಕಷ್ಟು ಗಾಸಿಪ್​ಗಳಿವೆ. ಹಾಗೆ ನೋಡಿದರೆ ಈಕೆ ಬಹ್ರೇನಿನ ರಾಜಕುಮಾರಿಯಾಗಿ ಮೆರೆಯಬೇಕಿತ್ತು. ಆ ದೇಶದ ರಾಜಕುಮಾರ ಹಸನ್ ಬಿನ್ ರಾಶಿದ್ ಅಲ್ ಖಲೀಫಾ ಜೊತೆ ಈಕೆ ಗಾಢವಾದ ರಿಲೇಶನ್​ಶಿಪ್​​ನಲ್ಲಿದ್ದರು. ಇದು ಸುಮಾರು ಒಂದು ದಶಕದಷ್ಟು ಹಿಂದಿನ ಮಾತು. ಆದರೆ, ಸುಲ್ತಾನನಿಂದ 2011 ರಲ್ಲಿ ಬೇರ್ಪಟ್ಟ ಬಳಿಕ ಈಕೆ ಹೌಸ್​ಫುಲ್ 2 ಚಿತ್ರದ ಶೂಟಿಂಗ್ ನಡೆಯುತ್ತಿದ್ದ ಸಮಯದಲ್ಲಿ ಅದರ ನಿರ್ದೇಶಕ ಸಾಜಿದ್ ಖಾನ್ನ ಪ್ರೇಮಪಾಶದಲ್ಲಿ ಸಿಲುಕಿದರು.

ಸಾಜಿದ್ ಗೆ ಹೆಂಗಸರ ಖಯಾಲಿ ಜಾಸ್ತಿ. ಮೀ ಟೂ ಅಭಿಯಾನ ನಡೆಯುತ್ತಿದ್ದಾಗ ಅನೇಕ ನಟಿಯರು ಸಾಜಿದ್ ವಿರುದ್ಧ ಲೈಂಗಿಕ ಕಿರಿಕುಳದ ಆರೋಪ ಹೊರಿಸಿದ್ದರು. ಸಾಜಿದ್ ನೊಂದಿಗೆ 2 ವರ್ಷಗಳ ಕಾಲ ಓಡಾಡಿದ ಜಾಕ್ವೆಲಿನ್ 2013 ರಲ್ಲಿ ಬೇರ್ಪಟ್ಟರು.

ಈಕೆಯನ್ನು ಮದುವೆಯಾಗಲು ಬಾಲಿವುಡ್ ನಟರು, ನಿರ್ಮಾಪಕ-ನಿರ್ದೇಶಕರು, ಉದ್ಯಮಿಗಳು ತುದಿಗಾಲಲ್ಲಿ ನಿಂತಿದ್ದಾರೆ, ಆದರೆ ಜಾಕ್ವೆಲಿನ್ ಮಾತ್ರ ಯಾರಿಗೂ ಕಾಳು ಹಾಕುತ್ತಿಲ್ಲ. ಈಕೆ ಕೈಯಲ್ಲಿ ಈಗ 5 ಸಿನಿಮಾಗಳಿಗೆ. ಹಾಗಾಗಿ ರೋಮಾನ್ಸ್ ಬಗ್ಗೆ ಯೋಚಿಸಲು ಪುರುಸೊತ್ತಿಲ್ಲ ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ:  Viral Video: ಸೀರೆಯುಟ್ಟ ಮಹಿಳೆಗೆ ದೆಹಲಿಯ ರೆಸ್ಟೋರೆಂಟ್​ನಲ್ಲಿ ನೋ ಎಂಟ್ರಿ; ವೈರಲ್ ವಿಡಿಯೋಗೆ ಭಾರೀ ವಿರೋಧ