ಲೂಟಿ ಹೋಡೆಯೋಕೆ ಸರ್ಕಾರ ಸಿದ್ಧತೆ ಮಾಡ್ತಿದೆ -ಆರ್.ಅಶೋಕ್

| Updated By: ಆಯೇಷಾ ಬಾನು

Updated on: Jul 03, 2024 | 1:30 PM

ಬೆಂಗಳೂರಿನಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಲೂಟಿ ಹೊಡೆಯೋಕೆ ಸರ್ಕಾರ ಸಿದ್ದತೆ ಮಾಡ್ತಿದೆ. ಒಂದಾದ ಮೇಲೊಂದು ಹಗರಣ ನಡೀತಿದೆ. ತೆಲಂಗಾಣ ಹಾಗೂ ಹೈದ್ರಾಬಾದ್ ಲೂಟಿ ಹಣ ಹೋಗಿದೆ ಎಂದಿದ್ದಾರೆ.

ಬೆಂಗಳೂರು, ಜುಲೈ.03: ಲೂಟಿ ಹೋಡೆಯೋಕೆ ಸರ್ಕಾರ (Congress Government) ಸಿದ್ಧತೆ ಮಾಡ್ತಿದೆ ಎಂದು ಬೆಂಗಳೂರಿನಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ (R.Ashok) ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ಸರ್ಕಾರ ಬಂದು ಒಂದು ವರ್ಷ ಆಗಿದೆ. ಲೂಟಿ ಹೊಡೆಯೋಕೆ ಸರ್ಕಾರ ಸಿದ್ದತೆ ಮಾಡ್ತಿದೆ. ಒಂದಾದ ಮೇಲೊಂದು ಹಗರಣ ನಡೀತಿದೆ. ತೆಲಂಗಾಣ ಹಾಗೂ ಹೈದ್ರಾಬಾದ್ ಲೂಟಿ ಹಣ ಹೋಗಿದೆ. ನಾವು ಹೋರಾಟ ಮಾಡಿದ್ದಕ್ಕೆ ಸಚಿವರು ರಾಜೀನಾಮೆ ಕೊಟ್ಟಿದ್ರು. ರಾಜ ಭವನಕ್ಕೆ ಹೋದ್ಮೇಲೆ ಸಚಿವರು ರಾಜೀನಾಮೆ ನೀಡಿದ್ರು. ನಮ್ಮ ಹೋರಾಟವನ್ನ ಹತ್ತಿಕುತ್ತಿದ್ದಾರೆ ಎಂದು ಆರ್.ಅಶೋಕ್ ಕಿಡಿಕಾರಿದ್ದಾರೆ.

ಪ್ರಜಾಪ್ರಭುತ್ವದ‌‌ ಕಗ್ಗೊಲೆ ‌ಮಾಡುತ್ತಿದ್ದಾರೆ. ಕೆಫೆ ಬ್ಲಾಸ್ಟ್ ಮಾಡುವರನ್ನ ಹಿಡಿಯೋಕೆ ಪೊಲೀಸರನ್ನ ಬಿಟ್ಟಿಲ್ಲ. ಆದರೆ ನಮ್ಮನ್ನ ಹಿಡಿಯೋದಕ್ಕೆ ನೂರಾರು ಪೊಲೀಸರನ್ನ ಬಿಟ್ಟಿದ್ದಾರೆ. ಇದರ ವಿರುದ್ಧ ಹೋರಾಟ ಮಾಡುತ್ತೇವೆ. ವಾಲ್ಮೀಕಿ ಬೆನ್ನಲ್ಲೇ ಮುಡಾದಲ್ಲೂ ಹಗರಣ ನಡೆದಿದೆ. ಬದಲಿ ನಿವೇಶನದ ಗೋಲ್ಮಾಲ್ ಆಗಿದೆ. ಕಟಾ ಕಟಾ ಅಂತ ಹಗರಣ ನಡೆದಿದೆ. 80 ಸಾವಿರ ಜನ ಅರ್ಜಿ ಹಾಕಿದವರಿಗೆ ಸೈಟ್ ಇಲ್ಲ. ಬಡವರಿಗೆ ಹಂಚಿಕೆಯಾಗಿರೋ ಸೈಟ್ ದೋಚಿದ್ದಾರೆ. ದೀಪದ ಕೆಳಗೆ ಲೂಟಿ ಮಾಡುತ್ತಿದ್ದಾರೆ. ಸುರ್ಜೇವಾಲ ಬೆಂಗಳೂರಿಗೆ ಬಂದು ಹೋಗಿದ್ರು. ಇಲ್ಲಿನ‌ ಲೂಟಿ ಮಾಡೆಲ್ ದೇಶಕ್ಕೆ ಹಂಚುತ್ತಿದ್ದಾರೆ. ಯಾರ್ಯಾರಿಗೆ ಸೈಟ್ ಅಲಾಟ್ ಆಗಿದೆ, ಅದನ್ನ ರದ್ದು ಮಾಡಬೇಕು. ವಿಧಾನಸಭೆ ಹಾಗೂ ಪರಿಷತ್ ನಲ್ಲೂ ನಾಮ್ಮ ಹೋರಾಟ ಮಾಡುತ್ತೇವೆ. ಸರ್ಕಾರದ ಭ್ರಷ್ಟಾಚಾರ‌ ಜನರ ಮುಂದೆ ಇಡುತ್ತೇವೆ ಎಂದರು.

ಇದನ್ನೂ ಓದಿ: ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಕಲೇಶಪುರ ಬೈಪಾಸ್​ನಲ್ಲಿ ಹಲವೆಡೆ ಭೂ ಕುಸಿತ: ಸಂಚಾರಕ್ಕೆ ಅಡ್ಡಿ

Published on: Jul 03, 2024 01:26 PM