ಭಾರತದ ಸಂವಿಧಾನವು ಕೋಟ್ಯಾಂತರ ಭಾರತೀಯರ ಭಾವನೆ ಮತ್ತು ಬದುಕಾಗಿದೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ
ಸಂವಿಧಾನದ ಮೇಲಿನ ಚರ್ಚೆಗೆ ಉತ್ತರ ನೀಡುತ್ತ ಮಾತು ಮುಂದುವರಿಸಿದ ಪ್ರಧಾನ ಮಂತ್ರಿ ಮೋದಿ, ಸಂವಿಧಾನ ಸಭೆಯ ಸದಸ್ಯರಾಗಿದ್ದ ಡಾ ಎಸ್ ರಾಧಾಕೃಷ್ಣನ್ ಅವರು ಆಗ ಹೇಳಿದ್ದನ್ನು ಇವತ್ತು ಸಂಸತ್ತಿನಲ್ಲಿ ಪುನರುಚ್ಛರಿಸಿದರು. ಈ ಮಹಾನ್ ದೇಶಕ್ಕಾಗಿ ಗಣತಂತ್ರದ ವ್ಯವಸ್ಥೆ ಹೊಸತೇನೂ ಅಲ್ಲ, ಯಾಕೆಂದರೆ ಇತಿಹಾಸ ಆರಂಭಗೊಳ್ಳುವ ಮೊದಲಿನ ಅವಧಿಯಿಂದಲೂ ಇದು ಭಾರತದಲ್ಲಿತ್ತು ಎಂದು ಅವರು ಹೇಳಿದ್ದನ್ನು ಪ್ರಧಾನಿ ಮೋದಿ ಉಲ್ಲೇಖಿಸಿದರು.
ದೆಹಲಿ: ಸಂವಿಧಾನದ ಮೇಲಿನ ಚರ್ಚೆಗೆ ಉತ್ತರ ನೀಡುತ್ತ ಮಾತಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಮ್ಮ ಸಂವಿಧಾನ ಜಾರಿಗೆ ಬಂದು 75 ವರ್ಷಗಳು ಸಂದಿವೆ, ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರು ನೀಡಿದ ಸಂವಿಧಾನವು ಕೋಟ್ಯಾಂತರ ಭಾರತೀಯರ ಭಾವನೆ ಮತ್ತು ಬದುಕು ಕೂಡ ಆಗಿದೆ ಎಂದು ಹೇಳಿದರು. ಪ್ರತಿಯೊಬ್ಬ ಭಾರತೀಯ ಸಂವಿಧಾನದ ಬಗ್ಗೆ ಹೆಮ್ಮೆಪಟ್ಟುಕೊಳ್ಳುತ್ತಾನೆ ಮತ್ತು ಪ್ರಜಾಪ್ರಭುತ್ವದ ಹಬ್ಬವನ್ನು ನಾವೆಲ್ಲ ಸಂಭ್ರಮದಿಂದ ಆಚರಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದರು. ಭಾರತವನ್ನು ಪ್ರಜಾಪ್ರಭುತ್ವದ ತಾಯಿ ಎಂದು ಪರಿಗಣಿಸಲಾಗುತ್ತದೆ ಮತ್ತು ಭಾರತದ ಸಂವಿಧಾನವನ್ನು ಬಲಪಡಿಸುವಲ್ಲಿ ಮಹಿಳೆಯರು ಮಹತ್ತರ ಪಾತ್ರ ನಿರ್ವಹಿಸಿದ್ದಾರೆ ಎಂದು ಹೇಳಿದ ಅವರು ಚರ್ಚೆಯಲ್ಲಿ ಭಾಗವಹಿಸಿದ ಎಲ್ಲ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: D Gukesh: ಗುಕೇಶ್ ಸಾಧನೆಯನ್ನು ಕೊಂಡಾಡಿದ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು