ರಸ್ತೆಗುಂಡಿ ಮಾದರಿ ಕೇಕನ್ನು ಗುಂಡಿಯ ಮೇಲಿಟ್ಟು ಕಟ್ ಮಾಡಿ ಪ್ರತಿಭಟನೆ ನಡೆಸಿದ ಪಣತ್ತೂರು ನಿವಾಸಿಗಳು!
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಡಿಕೆ ಶಿವಕುಮಾರ್ ರಸ್ತೆಗುಂಡಿಗಳ ಬಗ್ಗೆ ಮಾತಾಡದಿರುವುದು ಆಶ್ಚರ್ಯ ಹುಟ್ಟಿಸುತ್ತದೆ. ಅಧಿಕಾರಕ್ಕೆ ಬಂದ ಹೊಸತರಲ್ಲಿ ಅವರು ಬೆಂಗಳೂರು ಅಭಿವೃದ್ಧಿಯ ಬಗ್ಗೆ ಜನರಲ್ಲಿ ಹತ್ತು ಹಲವು ಕನಸುಗಳನ್ನು ಹುಟ್ಟಿಸಿದ್ದರು. ಬ್ರ್ಯಾಂಡ್ ಬೆಂಗಳೂರು ಅಂತ ಸಭೆ ನಡೆಸಿ ನಗರದ ಪ್ರತಿಷ್ಠಿರನ್ನು, ಉದ್ಯಮಿ, ಬುದ್ಧಿಜೀವಿಗಳನ್ನು ಕರೆಸಿದ್ದರು. ಇದೆಲ್ಲ ನಡೆದು ವರ್ಷ ಕಳೆದರೂ ರಸ್ತೆಯ ಗುಂಡಿಗಳು ಮುಚ್ಚಿಕೊಳ್ಳದೆ ಅವುಗಳ ಆಳ ಮತ್ತು ವಿಸ್ತಾರ ಹೆಚ್ಚುತ್ತಾ ಸಾಗಿದೆ.
ಬೆಂಗಳೂರು: ನಗರದಲ್ಲಿ ವರ್ಷವಿಡೀ ಮಳೆಯಾಗುತ್ತಿದೆ, ರಸ್ತೆಗುಂಡಿಗಳನ್ನು ಮುಚ್ಚುವುದಾದರೂ ಹೇಗೆ ಅಂತ ಸರ್ಕಾರದ ಒಂದಿಲ್ಲೊಂದು ನೆಪ ಕೇಳಿ ಬೇಸತ್ತಿರುವ ಪಣತ್ತೂರು ಏರಿಯಾದ ಜನ ವಿನೂತನ ಶೈಲಿಯಲ್ಲಿ ರಸ್ತೆಗುಂಡಿಗಳ ವಿರುದ್ಧ ಪ್ರದರ್ಶನ ನಡೆಸಿ ಗಮನ ಸೆಳೆದರು. ಗುಂಡಿಗಳು ಬಿದ್ದು ನಡೆಯಲೂ ಅಗದಂಥ ರಸ್ತೆ ಮಾದರಿಯ ಕೇಕನ್ನು ಮಾಡಿ ಅದನ್ನು ಗುಂಡಿಯ ಮೇಲಿಟ್ಟೇ ಕತ್ತರಿಸಿದರು! ಪಣತ್ತೂರು ಏರಿಯಾದ ಜನರೆಲ್ಲ ರಸ್ತೆಬದಿಯಲ್ಲಿ ಸಾಲಾಗಿ ನಡೆಯುತ್ತ (ಗುಂಡಿಗಳಿಂದಾಗಿ ರಸ್ತೆ ಮೇಲೆ ನಡೆಯಲಾಗಲ್ಲ!) ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: SM Krishna No More: ತಮ್ಮ ರಾಜಕೀಯ ಗುರು ಎಸ್ಎಂ ಕೃಷ್ಣರ ಪಾರ್ಥಿವ ಶರೀರ ಬಿಟ್ಟು ಕದಲಲೊಲ್ಲದ ಶಿವಕುಮಾರ್
Latest Videos