ದರ್ಶನ್ ಸಂಪೂರ್ಣವಾಗಿ ದೋಷಮುಕ್ತರಾದರೆ ಸಂತೋಷ ಆದರೆ ಸತ್ಯ ಸಾಯಬಾರದು: ಸಾರಾ ಗೋವಿಂದು
ಪರಭಾಷಾ ಚಿತ್ರಗಳ ಹಾವಳಿ ಬಗ್ಗೆ ಮಾತಾಡಿದ ಅವರು, ‘ಪುಷ್ಟಾ 2’ ರಾಜ್ಯದ 350 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ, ಇದು ನಿಜಕ್ಕೂ ಬಹಳ ಗಂಭೀರವಾದ ವಿಷಯ, ನಮ್ಮ ಹೋರಾಟಕ್ಕೆ ನ್ಯಾಯಾಲಯದ ಅದೇಶ ತಡೆಯೊಡ್ಡುತ್ತಿದೆ, ಅದಷ್ಟು ಬೇಗ ನಾವು ರಾಜ್ಯ ಸರ್ಕಾರದ ಜೊತೆ ಮಾತಾಡಬೇಕಿದೆ ಮತ್ತು ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಗೋವಿಂದು ಹೇಳಿದರು.
ಬೆಂಗಳೂರು: ಚಿತ್ರನಟ ದರ್ಶನ್ ತೂಗುದೀಪ ಅವರಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೇಲ್ ಸಿಕ್ಕಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಮತ್ತು ಕನ್ನಡ ಪರ ಹೋರಾಟಗಾರ ಸಾ ರಾ ಗೋವಿಂದು ನ್ಯಾಯಾಲಯದ ನಿರ್ಣಯವನ್ನು ಸ್ವಾಗತಿಸಿದರು. ನಾವೆಲ್ಲ ಸಂವಿಧಾನಕ್ಕೆ ಬದ್ಧರಾಗಿ ನಡೆಯುವಂಥವರು, ನ್ಯಾಯಾಲಯ ಏನೇ ತೀರ್ಪು ನೀಡಿದದರೂ ಸ್ವಾಗತಿಸುತ್ತೇನೆ, ಮುಂದೊಂದು ದಿನ ಅವರು ದೋಷಮುಕ್ತರಾಗಿ ಹೊರಬಂದರೆ ಖುಷಿಪಡುತ್ತೇನೆ, ಅದರೆ ಸತ್ಯ ಮಾತ್ರ ಸಾಯಬಾರದು ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Renukaswamy case: ಜಾಮೀನು ಸಿಕ್ಕರೂ ದರ್ಶನ್ಗಿಲ್ಲ ನೆಮ್ಮದಿ.. ಮತ್ತೆ ಜೈಲು ಸೇರೋ ಭೀತಿ!
Latest Videos