ಹನ್ನೊಂದು ದಿನಗಳ ಕಾಲ ನಡೆಯಲಿದೆ ರ‍್ಯಾಲಿ, ವಿವಿಧ ಜಿಲ್ಲೆಗಳ ನೂರಾರು ಯುವಕರು ಭಾಗಿ

|

Updated on: Nov 26, 2024 | 10:31 AM

ಕೊಪ್ಪಳದಲ್ಲಿ ಆರಂಭವಾಗಿರುವ ನೇಮಕಾತಿ ರ‍್ಯಾಲಿಯಲ್ಲಿ ಆಯ್ಕೆಯಾಗುವ ಯುವಕರನ್ನು ಸೇನೆಯ ಬೇರೆ ಬೇರೆ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಮೊದಲ ಸುತ್ತಿನ ಓಟದ ಸ್ಪರ್ಧೆಯಲ್ಲಿ ಕೆಲ ಯುವಕರು ಅರ್ಹತಾ ಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾಗಿ ಹತಾಷೆಯಿಂದ ರ‍್ಯಾಲಿಯಿಂದ ಹೊರಬೀಳುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.

ಕೊಪ್ಪಳ: ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ ರ‍್ಯಾಲಿ ಇಂದಿನಿಂದ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಆರಂಭವಾಗಿದ್ದು ಪ್ರಕ್ರಿಯೆಯು ಡಿಸೆಂಬರ್ 8ರವರೆಗೆ ನಡೆಯಲಿದೆ. ಭಾರತೀಯ ಸೇನೆಯ ಡೆಪ್ಯುಟಿ ಡೈರೆಕ್ಟರ್ ಜನರಲ್ ಆಫ್ ರಿಕ್ರೂಟ್ಮೆಂಟ್ ಬ್ರಿಗೇಡಿಯರ್ ಎಸ್ ಕೆ ಸಿಂಗ್ ಮತ್ತು ಕೊಪ್ಪಳ ಜಿಲ್ಲಾಧಿಕಾರಿ ನಳಿನ್ ಅತುಲ್ ನೇಮಕಾತಿ ರ‍್ಯಾಲಿಗೆ ಚಾಲನೆ ನೀಡಿದರು. ಹನ್ನೊಂದು ದಿನಗಳ ಕಾಲ ನಡೆಯಲಿರುವ ರ‍್ಯಾಲಿಯಲ್ಲಿ ಸೇನೆಗೆ ಸೇರುವ ಅಕಾಂಕ್ಷಿಗಳ ಫಿಟ್ನೆಸ್ ಟೆಸ್ಟ್ ವಿವಿಧ ಹಂತ ಮತ್ತು ಆಯಾಮಗಳಲ್ಲಿ ನಡೆಯಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮಾಜಿ ಅಗ್ನಿವೀರ್‌ಗಳಿಗೆ ಸಿಐಎಸ್ಎಫ್, ಬಿಎಸ್ಎಫ್, ಆರ್​​ಪಿಎಫ್​​ನಲ್ಲಿ ಶೇ10 ಮೀಸಲಾತಿ, ವಯೋಮಿತಿ ಸಡಿಲಿಕೆ