ನನ್ನ ತಂದೆ ಕೇತಗಾನಹಳ್ಳಿಯಲ್ಲಿ ಖರೀದಿಸಿದ್ದು ಅಪ್ಪಟ ಕೃಷಿ ಭೂಮಿ, ವಾಣಿಜ್ಯ ಚಟುವಟಿಕೆ ನಡೆಯುತ್ತಿಲ್ಲ: ನಿಖಿಲ್ ಕುಮಾರಸ್ವಾಮಿ
ಕೇವಲ ಜಿಲ್ಲಾ ಕೇಂದ್ರಗಳಲ್ಲಿ ಮಾತ್ರವಲ್ಲ ಎಲ್ಲ ತಾಲ್ಲೂಕು ಕೇಂದ್ರ, ಹೋಬಳಿ ಮತ್ತು ಬೂತ್ ಮಟ್ಟಗಳಲ್ಲಿ ಸಭೆಗಳನ್ನು ನಡೆಸಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡುವ ಕೆಲಸವನ್ನು ಜೆಡಿಎಸ್ ಮಾಡಲಿದೆ ಎಂದು ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿದರು. ಬಹಳ ದಿನಗಳ ನಂತರ, ನಿಖಿಲ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷನಾಗಿ ಅವರ ಪಟ್ಟಾಭಿಷೇಕ ಕಾರ್ಯಕ್ರಮ ಮೇನಲ್ಲಿ ನಡೆಯುವ ಸಾಧ್ಯತೆ ಇದೆ.
ಹಾಸನ: ನಗರದಲ್ಲಿ ಸುದ್ದಿಗೋಷ್ಠಿಯೊಂದನ್ನು ಉದ್ದೇಶಿಸಿ ಮಾತಾಡಿದ ಜೆಡಿಎಸ್ ಯುವಮುಖಂಡ ನಿಖಿಲ್ ಕುಮಾರಸ್ವಾಮಿ, 1985ರಲ್ಲಿ ತಮ್ಮ ತಂದೆ ಹೆಚ್ ಡಿ ಕುಮಾರಸ್ವಾಮಿಯವರು ಕೇತಗಾನಹಳ್ಳಿಯಲ್ಲಿ ಖರೀದಿಸಿದ ಭೂಮಿಯ ಬಗ್ಗೆ ಮಾತಾಡಿದರು. ಕುಮಾರಸ್ವಾಮಿಯವರು ಖರೀದಿಸಿದ ಜಮೀನಿಗೆ ಸಂಬಂಧಿಸಿದಂತೆ ಕಳೆದ 18-20ವರ್ಷಗಳಿಂದ ತಕರಾರು ತಗಾದೆ ನಡೆದೇ ಇದೆ, ಅವರು ರಾಮನಗರದಲ್ಲಿ ಒಂದು ನೆಲೆಕಂಡುಕೊಳ್ಳುವ ದೃಷ್ಟಿಯಿಂದ ಜಮೀಬು ಖರೀದಿಸಿದ್ದರು, ಅದು ಅಪ್ಪಟ ಕೃಷಿ ಭೂಮಿ, ಅಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ ಯಾವುದೇ ಕಟ್ಟಡ ನಿರ್ಮಿಸಿಲ್ಲ ಎಂದು ನಿಖಿಲ್ ಹೇಳಿದರು. ಕುಮಾರಸ್ವಾಮಿಯವರು ರಾಜಕೀಯಕ್ಕೆ ಬರುವ ಮೊದಲೇ ಅಂದರೆ ಅವರು ಸಿನಿಮಾ ಉದ್ಯಮದಲ್ಲಿ ಡಿಸ್ಟ್ರಿಬ್ಯೂಟರ್ ಆಗಿದ್ದಾಗ ಖರೀದಿಸಿದ ಜಮೀನು ಅದು, ಅದಕ್ಕೆ ಸಂಬಂಧಿಸಿದಂತೆ ಕೋರ್ಟ್ ಕೆಲ ಆದೇಶಗಳನ್ನು ನೀಡಿದೆ, ತಾವು ಕಾನೂನಾತ್ಮಕ ಹೋರಾಟ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹೆಚ್ಡಿಕೆ ವಿರುದ್ಧ ಭೂ ಒತ್ತುವರಿ ಆರೋಪ: ಕೋರ್ಟ್ ತರಾಟೆ ಬೆನ್ನಲ್ಲೇ ಸರ್ವೇ ಕಾರ್ಯ ಆರಂಭ