ಕುರಿಹುಂಡಿ ಜನರಿಗೆ ಪದೇಪದೆ ಕಾಟ ಕೊಡುತ್ತಿದ್ದ ಚಿರತೆಯನ್ನು ಅರಣ್ಯ ಸಿಬ್ಬಂದಿ ಬೋನಿಟ್ಟು ಸೆರೆಹಿಡಿದರು
ಚಿರತೆಗಳು ಕಾಡಿನಿಂದ ನಾಡಿಗೆ ಬರುತ್ತಿರುವ ಪ್ರಸಂಗಗಳೇ ಜಾಸ್ತಿಯಾಗುತ್ತಿವೆ. ಅವು ಸಾಕುಪ್ರಾಣಿಗಳ ಮೇಲೆ ದಾಳಿ ಮಾಡಿ ಅವುಗಳನ್ನು ತಿನ್ನುವುದು, ಮನುಷ್ಯರ ಮೇಲೆ ಆಕ್ರಮಣ ನಡೆಸುವುದು ಹೆಚ್ಚುತ್ತಿದೆ.
ವನ್ಯಜೀವಿಗಳು ಜನವಸತಿ ಪ್ರದೇಶಗಳಿಗೆ ಲಗ್ಗೆಯಿಟ್ಟು ಕಾಟ ಕೊಡುವ ವಿಷಯ ಹೊಸದೇನಲ್ಲ. ಹುಲಿ, ಚಿರತೆ, ಆನೆಗಳು ಆಗಾಗ ಊರುಗಳಿಗೆ ಬಂದು ಜನರಲ್ಲಿ ಭೀತಿ ಹುಟ್ಟಿಸುತ್ತಿವೆ. ಆದರೆ, ನಾವು ಅವುಗಳನ್ನು ದೂರುವಂತಿಲ್ಲ. ನಮ್ಮ ಸ್ವಾರ್ಥಕ್ಕಾಗಿ, ವಾಸಕ್ಕಾಗಿ ಕಾಡುಗಳನ್ನು ಅತಿಕ್ರಮಿಸಿ ಅವುಗಳ ನೈಸರ್ಗಿಕ ವಾಸಸ್ಥಾನಗಳನ್ನು ಕಿರಿದು ಮಾಡುತ್ತಿರುವುದರಿಂದ ಅವು ನಮ್ಮ ವಾಸಸ್ಥಾನಗಳ ಕಡೆ ಬರುತ್ತಿವೆ. ಅದು ಸಹಜ ತಾನೆ? ಪರಿಸರವಾದಿಗಳು, ವನ್ಯಜೀವಿ ಪ್ರೇಮಿಗಳನ್ನು ಕಾಡುಗಳನ್ನು ಕಡಿಯಬೇಡಿ ಅಂತ ಗೋಗರೆದು ಎಚ್ಚರಿಸಿದರೂ ಯಾರಿಗಿದೆ ಕಾಳಜಿ?
ಚಿರತೆಗಳು ಕಾಡಿನಿಂದ ನಾಡಿಗೆ ಬರುತ್ತಿರುವ ಪ್ರಸಂಗಗಳೇ ಜಾಸ್ತಿಯಾಗುತ್ತಿವೆ. ಅವು ಸಾಕುಪ್ರಾಣಿಗಳ ಮೇಲೆ ದಾಳಿ ಮಾಡಿ ಅವುಗಳನ್ನು ತಿನ್ನುವುದು, ಮನುಷ್ಯರ ಮೇಲೆ ಆಕ್ರಮಣ ನಡೆಸುವುದು ಹೆಚ್ಚುತ್ತಿದೆ. ಮಾನವರನ್ನು ಕೊಂದು ತಿಂದಿರುವ ಉದಾಹರಣೆಗಳೂ ಸಾಕಷ್ಟಿವೆ.
ಇಲ್ಲೊಂದು ಚಿರತೆಯನ್ನು ಸೆರೆಹಿಡಿಯಲಾಗಿದೆ. ಘಟನೆ ನಡೆದಿರೋದು ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕುರಿಹುಂಡಿ ಗ್ರಾಮದಲ್ಲಿ. ಬಸವರಾಜಪ್ಪ ಹೆಸರಿನ ರೈತರ ಜಮೀನಿನಲ್ಲಿ ಚಿರತೆಯನ್ನು ಬೋನಿಟ್ಟು ಸೆರೆಹಿಡಿಯಲಾಗಿದೆ. ವನ್ಯಜೀವಿಯ ಜಾಸ್ತಿಯಾಗಿದೆ ಎಂದು ಕುರಿಹುಂಡಿ ನಿವಾಸಿಗಳು ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ ನಂತರ ಸಿಬ್ಬಂದಿ ಈ ಉಪಾಯ ಮಾಡಿ ಸೆರೆಹಿಡಿದಿದೆ.
ಬೋನಲ್ಲಿ ಚಿರತೆ ಆತಂಕದಲ್ಲಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಜನ ಬೋನಿನ ಹತ್ತಿರ ಹೋದಾಗ ಗರ್ಜಿಸುತ್ತದೆ. ಕಾಡಿನಲ್ಲಿ ಸ್ವಚ್ಛಂದವಾಗಿ ಓಡಾಡುವ ಪ್ರಾಣಿ ಹೀಗೆ 4X6 ಅಡಿ ಬೋನಿನಲ್ಲಿ ಸಿಕ್ಕಿಕೊಂಡಾಗ ಅದಕ್ಕೆ ಆಗೋದು ಸಹಜವೇ.