‘100’ ಚಿತ್ರದ ವಿಶೇಷವೇನು?; ಕುತೂಹಲಕರ ಮಾಹಿತಿಗಳನ್ನು ಹಂಚಿಕೊಂಡ ರಮೇಶ್ ಅರವಿಂದ್

‘100’ ಚಿತ್ರದ ವಿಶೇಷವೇನು?; ಕುತೂಹಲಕರ ಮಾಹಿತಿಗಳನ್ನು ಹಂಚಿಕೊಂಡ ರಮೇಶ್ ಅರವಿಂದ್

TV9 Web
| Updated By: shivaprasad.hs

Updated on: Nov 10, 2021 | 3:14 PM

Ramesh Aravind: ನಟ ರಮೇಶ್ ಅರವಿಂದ್ ನಿರ್ದೇಶನಕ್ಕೆ ‘100’ ಚಿತ್ರದ ಮುಖಾಂತರ ಕಮ್​ಬ್ಯಾಕ್ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಚಿತ್ರದ ಕುರಿತು ಕುತೂಹಲಕರ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಹುಬ್ಬಳ್ಳಿ: ರಮೇಶ್ ಅರವಿಂದ್ (Ramesh Aravind) ನಟಿಸಿ ನಿರ್ದೇಶಿಸಿರುವ ‘100’ ಚಲನಚಿತ್ರ ನವೆಂಬರ್ 19ರಂದು ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ರಮೇಶ್ ಅರವಿಂದ್ ಚಿತ್ರದ ಕುರಿತು ಮಾತನಾಡಿ, ಕುತೂಹಲಕರ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ತಂತ್ರಜ್ಞಾನ ಹೆಚ್ಚಿದಂತೆಯೇ ಸೈಬರ್ ಕ್ರೈಂಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಮೊಬೈಲ್ ಕೈಗೆ ಬಂದ ನಂತರ ಪ್ರತಿಯೊಬ್ಬರೂ ಬೇರೆ ಬೇರೆ ಲೋಕದಲ್ಲಿ ಇದ್ದಂತೆ ಭಾಸವಾಗುತ್ತಿದೆ. ವ್ಯಕ್ತಿ ವ್ಯಕ್ತಿಗಳ ನಡುವೆ ಗೋಡೆ ನಿರ್ಮಿಸಿದಂತಾಗಿದೆ. ಇಂತಹ ಲೋಕದಲ್ಲಿ ಸೈಬರ್ ವಂಚನೆಗಳೂ ಹೆಚ್ಚಳವಾಗಿವೆ. ಸಾಮಾಜಿಕ ಜಾಲತಾಣದಿಂದ ವಂಚನೆಗೆ ಒಳಗಾದ ಮಧ್ಯಮ ವರ್ಗದ ಹೋರಾಟದ ರೂಪವಾಗಿ 100 ಚಿತ್ರ ಹೊರಹೊಮ್ಮಿದೆ. ಆ್ಯಕ್ಷನ್, ಥ್ರಿಲ್ಲರ್ ಸಿನೆಮಾ ಇದಾಗಿದ್ದು, ಕುಟುಂಬ ಸಮೇತರಾಗಿ ನೋಡುವಂತಹ ಸಿನೆಮಾ ‘100’ ಎಂದು ರಮೇಶ್ ಅರವಿಂದ್ ಹೇಳಿದ್ದಾರೆ.

ಒಟ್ಟು ಸಿನಿಮಾದಲ್ಲಿ 4 ಹಾಡುಗಳಿವೆ. ಶ್ರೀರಂಗಪಟ್ಟಣ ಸೇರಿದಂತೆ ಬೆಂಗಳೂರಿನಲ್ಲಿ ಹಾಡಿನ ಚಿತ್ರೀಕರಣ ಮಾಡಿದ್ದೇವೆ. ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. ಅವರ ಕೆಜಿಎಫ್ ಸಿನಿಮಾ ಸಂಗೀತ ನೋಡಿ ಬಹಳ ಖುಷಿಯಾಗಿತ್ತು. ಹಾಗಾಗಿ ಅವರೆ ನಮ್ಮ ಚಿತ್ರಕ್ಕೆ ಸರಿಯಾದ ಆಯ್ಕೆ ಅಂದುಕೊಂಡೆ. ಅದ್ಭುತವಾದ ಸಂಗೀತವನ್ನ ನಮ್ಮ ಚಿತ್ರಕ್ಕೆ ಅವರು ನೀಡಿದ್ದಾರೆ. ಸೋಶಿಯಲ್ ಮೀಡಿಯಾ ಬಗ್ಗೆ ಇರುವ ಕತೆ ಇದು. ಮೊಬೈಲ್ ನಿಂದ ಏನೆಲ್ಲ ನಡೆಯುತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಮೊಬೈಲ್ ನಿಂದ ಒದ್ದಾಡುವ ಒಂದು ಕುಟುಂಬದ ಕತೆ ಇದು. ಇನ್ಸ್ಪೆಕ್ಟರ್ ವಿಷ್ಣು ಎನ್ನುವ ಪಾತ್ರವನ್ನ ನಾನು ಮಾಡಿದ್ದೇನೆ. ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ. ಕತೆ ಎಲ್ಲರನ್ನು ಹಿಡಿದಿಡಲಿದೆ ಎನ್ನುವ ನಂಬಿಕೆ ನಮಗಿದೆ ಎಂದು ರಮೇಶ್ ಅರವಿಂದ್ ಹೇಳಿದ್ದಾರೆ.

ರಾಜ್ಯದ 120 ಚಿತ್ರಮಂದಿರಗಳಲ್ಲಿ ‘100’ ಚಿತ್ರವು ಏಕ ಕಾಲಕ್ಕೆ ಚಿತ್ರ ಬಿಡುಗಡೆಯಾಗಲಿದೆ. ಮೊದಲು ಕನ್ನಡದಲ್ಲಿ ತೆರೆಗೆ ಬರಲಿದೆ. ಶೀಘ್ರವೇ ತೆಲುಗು ಅವತರಣಿಕೆಯೂ ಬಿಡುಗಡೆಗೊಳ್ಳಲಿದೆ ಎಂದು ಹುಬ್ಬಳ್ಳಿಯಲ್ಲಿ ರಮೇಶ್ ಅರವಿಂದ್ ಮಾಹಿತಿ ನೀಡಿದ್ದಾರೆ. ಎಂ.ರಮೇಶ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ರಚಿತಾ ರಾಮ್, ಪ್ರಕಾಶ್ ಬೆಳವಾಡಿ, ಶೋಭರಾಜ್, ರಾಜು ತಾಳಿಕೋಟೆ ಮೊದಲಾದವರು ಬಣ್ಣಹಚ್ಚಿದ್ದಾರೆ.

ಇದನ್ನೂ ಓದಿ:

‘100’ ಚಿತ್ರದಲ್ಲಿ ಸೈಬರ್​ ಕ್ರೈಂ ಕಥೆ; ತೆರೆ ಹಿಂದೆಯೂ, ತೆರೆ ಮೇಲೂ ರಮೇಶ್​ ಅರವಿಂದ್​ ಕಸುಬುದಾರಿಕೆ

ನೋಟು ಅಮಾನ್ಯೀಕರಣ ಬಳಿಕ ಮಾಜಿ ಸಿಎಂ ಮಾಡಿದ್ದೇನು?: ದೇವೇಂದ್ರ ಫಡ್ನವೀಸ್​ ವಿರುದ್ಧ ಗಂಭೀರ ಆರೋಪ ಮಾಡಿದ ನವಾಬ್​ ಮಲ್ಲಿಕ್