ನೋಟು ಅಮಾನ್ಯೀಕರಣ ಬಳಿಕ ಮಾಜಿ ಸಿಎಂ ಮಾಡಿದ್ದೇನು?: ದೇವೇಂದ್ರ ಫಡ್ನವೀಸ್​ ವಿರುದ್ಧ ಗಂಭೀರ ಆರೋಪ ಮಾಡಿದ ನವಾಬ್​ ಮಲ್ಲಿಕ್

ದೇವೇಂದ್ರ ಫಡ್ನವೀಸ್​ ಕ್ರಿಮಿನಲ್​ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ ನವಾಬ್​ ಮಲ್ಲಿಕ್​, ದೇವೇಂದ್ರ ಫಡ್ನವೀಸ್​ ಮುಖ್ಯಮಂತ್ರಿಯಾಗಿದ್ದಾಗ ನಿರ್ಮಾಣ ಕಾರ್ಮಿಕರ ಮಂಡಳಿಗೆ ಮುನ್ನಾ ಯಾದವ್​ನನ್ನು ಅಧ್ಯಕ್ಷನನ್ನಾಗಿ ನೇಮಕ ಮಾಡಿದರು ಎಂದು ಹೇಳಿದರು.

ನೋಟು ಅಮಾನ್ಯೀಕರಣ ಬಳಿಕ ಮಾಜಿ ಸಿಎಂ ಮಾಡಿದ್ದೇನು?: ದೇವೇಂದ್ರ ಫಡ್ನವೀಸ್​ ವಿರುದ್ಧ ಗಂಭೀರ ಆರೋಪ ಮಾಡಿದ ನವಾಬ್​ ಮಲ್ಲಿಕ್
ನವಾಬ್​ ಮಲ್ಲಿಕ್​​
Follow us
TV9 Web
| Updated By: Lakshmi Hegde

Updated on: Nov 10, 2021 | 1:52 PM

ಮಹಾರಾಷ್ಟ್ರ ಸಚಿವ, ಎನ್​ಸಿಪಿ ನಾಯಕ ನವಾಬ್​ ಮಲ್ಲಿಕ್ (Nawab Malik) ​​ಗೆ ಭೂಗತ ಜಗತ್ತಿನೊಟ್ಟಿಗೆ ನಂಟಿದೆ. ಅವರು ಭೂಗತ ಪಾತಕಿಗಳೊಟ್ಟಿಗೆ ಆಸ್ತಿ ವ್ಯವಹಾರ ನಡೆಸಿದ್ದಾರೆ ಎಂದು ನಿನ್ನೆ ಸಾಕ್ಷಿ ಸಮೇತ ಬಹಿರಂಗ ಪಡಿಸಿದ್ದ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್​ಗೆ ಇಂದು ನವಾಬ್​ ಮಲ್ಲಿಕ್​ ತಿರುಗೇಟು ನೀಡಿದ್ದಾರೆ. ನಿನ್ನೆ ಫಡ್ನವೀಸ್​ ಸುದ್ದಿಗೋಷ್ಠಿಯ ಬೆನ್ನಲ್ಲೇ ಮಾತನಾಡಿದ್ದ ನವಾಬ್​ ಮಲ್ಲಿಕ್​, ನಾನು ದೇವೇಂದ್ರ ಫಡ್ನವೀಸ್(Devendra Fadnavis)​ಗೆ ಸಂಬಂಧಪಟ್ಟಂತೆ ಒಂದು ಹೈಡ್ರೋಜನ್​ ಬಾಂಬ್​ ಸ್ಫೋಟಿಸುತ್ತೇನೆ ಎಂದಿದ್ದರು. ಅದರಂತೆ ಇಂದು ಫಡ್ನವೀಸ್​​ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ಭೂಗತ ಪಾತಕಿ ದಾವೂದ್​ ಇಬ್ರಾಹಿಂ ಆಪ್ತ ರಿಯಾಜ್​ ಭಾಟಿಯೊಂದಿಗೆ ಫಡ್ನವೀಸ್​ಗೆ ನಂಟಿದೆ ಎಂದು ಆರೋಪ ಮಾಡಿರುವ ನವಾಬ್​ ಮಲ್ಲಿಕ್​, ದಾವೂದ್​ ಜತೆಗೆ ನಂಟಿರುವ ರಿಯಾಜ್​ ಭಾಟಿ ನಕಲಿ ಪಾಸ್​ಪೋರ್ಟ್​ ಜತೆ 2015ರಲ್ಲಿ ಸಿಕ್ಕಿಬಿದ್ದಿದ್ದ. ಆದರೆ ಸಿಕ್ಕಿಬಿದ್ದ ಎರಡೇ ದಿನಕ್ಕೆ ಆತನನ್ನು ಬಿಡಲಾಯಿತು. ಅವನು ಅದಕ್ಕೂ ಮೊದಲು ಬಿಜೆಪಿಗೆ ಸಂಬಂಧಪಟ್ಟ ಹಲವು ಕಾರ್ಯಕ್ರಮದಲ್ಲಿ ಆತ ಕಾಣಿಸಿಕೊಂಡಿದ್ದ. ದೇವೇಂದ್ರ ಫಡ್ನವೀಸ್​ ಜತೆಗೂ ಆತ ಕಾಣಿಸಿಕೊಂಡಿದ್ದಾನೆ ಎಂದು ನವಾಬ್​ ಮಲ್ಲಿಕ್​ ಹೇಳಿದರು. ಇದೆಲ್ಲ ಆಗಿದ್ದು ಬಿಜೆಪಿ ಸರ್ಕಾರವಿದ್ದಾಗ ಎಂದೂ ಆರೋಪ ಮಾಡಿದರು. ನನಗೆ ಈಗ ನಾನು ಮಾಡುತ್ತಿರುವ ಆರೋಪದಲ್ಲಿ ಪ್ರಧಾನಿಯವರ ಹೆಸರನ್ನು ಎಳೆದು ತರಲು ಇಷ್ಟವಿಲ್ಲ. ಆದರೂ ಈ ರಿಯಾಜ್​ ಭಾಟಿ ಪ್ರಧಾನಿ ಮೋದಿ ಪಾಲ್ಗೊಂಡ ಸಮಾರಂಭದಲ್ಲೂ ಕಾಣಿಸಿಕೊಂಡಿದ್ದ. ಪ್ರಧಾನಿಯವರೊಂದಿಗೆ ಈತ ನಿಂತಿರುವ ಫೋಟೋಗಳು ಇವೆ ಎಂದೂ ನವಾಬ್​ ಮಲ್ಲಿಕ್​ ಹೇಳಿದರು. ಇನ್ನು ದೇವೇಂದ್ರ ಫಡ್ನವೀಸ್​ ಅವರು ಈ ರಿಯಾಜ್​ ಜತೆ ಇರುವ ಫೋಟೋಗಳನ್ನೂ ಕೂಡ ನವಾಬ್​ ಮಲ್ಲಿಕ್​ ಬಿಡುಗಡೆ ಮಾಡಿದ್ದಾರೆ.

ದೇವೇಂದ್ರ ಫಡ್ನವೀಸ್​ ಕ್ರಿಮಿನಲ್​ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ದೇವೇಂದ್ರ ಫಡ್ನವೀಸ್​ ಮುಖ್ಯಮಂತ್ರಿಯಾಗಿದ್ದಾಗ ನಿರ್ಮಾಣ ಕಾರ್ಮಿಕರ ಮಂಡಳಿಗೆ ಮುನ್ನಾ ಯಾದವ್​ನನ್ನು ಅಧ್ಯಕ್ಷನನ್ನಾಗಿ ನೇಮಕ ಮಾಡಿದರು. ಆತ ನಾಗಪುರದ ನಟೋರಿಯಸ್​ ಕ್ರಿಮಿನಲ್​ ಎಂಬುದು ಎಲ್ಲರಿಗೂ ಗೊತ್ತು. ಅಷ್ಟೇ ಅಲ್ಲ, ಬಾಂಗ್ಲಾದೇಶೀಯರ ಅಕ್ರಮ ವಲಸೆಯಲ್ಲಿ ಆರೋಪಿಯಾಗಿದ್ದ ಹೈದರ್​ ಆಜಮ್​​ನನ್ನು ಮೌಲಾನಾ ಆಜಾದ್​ ಫೈನಾನ್ಸ್​ ಕಾರ್ಪೋರೇಶನ್​ಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು ಎಂದು ಹೇಳಿದ್ದಾರೆ.

ಖೋಟಾನೋಟು ಹಗರಣದ ಆರೋಪ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್​ ಮುಖ್ಯಮಂತ್ರಿಯಾಗಿದ್ದಾಗ ಖೋಟಾನೋಟು ದಂಧೆ ವ್ಯಾಪಕವಾಗಿ ನಡೆಯುತ್ತಿತ್ತು. ಆ ನಕಲಿ ಕರೆನ್ಸಿ ದಂಧೆಕೋರರಿಗೆ ಫಡ್ನವೀಸ್​ ರಕ್ಷಣೆ ಒದಗಿಸಿದ್ದರು. 2016ರ ನವೆಂಬರ್​ 8ರಂದು ರಾತ್ರಿ ಪ್ರಧಾನಿ ನರೇಂದ್ರ ಮೋದಿಯವರು ನೋಟು ಅಮಾನ್ಯೀಕರಣವನ್ನು ಘೋಷಿಸಿದರು. ಅದಾದ ಬಳಿಕ ದೇಶದ ವಿವಿಧ ಭಾಗಗಳಲ್ಲಿ ಖೋಟಾನೋಟುಗಳನ್ನು ಜಪ್ತಿ ಮಾಡಲಾಯಿತು. ಆದರೆ ನೋಟು ಅಮಾನ್ಯೀಕರಣವಾಗಿ ಒಂದು ವರ್ಷದವರೆಗೂ ಮಹಾರಾಷ್ಟ್ರದಲ್ಲಿ ಒಂದೇ ಒಂದು ನಕಲಿ ಕರೆನ್ಸಿ ಪ್ರಕರಣ ದಾಖಲಾಗಲಿಲ್ಲ. 2017ರ ಅಕ್ಟೋಬರ್​ 8ರಂದು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಮಹಾರಾಷ್ಟ್ರದಲ್ಲಿ ದಾಳಿ ನಡೆಸಿ ಸುಮಾರು 14.56 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ಜಪ್ತಿ ಮಾಡಿತು. ಆದರೆ ಆ ಕೇಸ್​ ಕೂಡ ನಿಲ್ಲಲಿಲ್ಲ. ಅದನ್ನು ಇದೇ ಫಡ್ನವೀಸ್​ ಮರೆಮಾಚಿದರು. 14 ಕೋಟಿಯ ಬದಲು ಕೇವಲ 8.80 ಲಕ್ಷ ರೂಪಾಯಿ ಮಾತ್ರ ಜಪ್ತಿಯಾಗಿದೆ ಎಂದು ಸಾರ್ವಜನಿಕವಾಗಿ ಹೇಳಿದರು. ಇದೊಂದು ದೊಡ್ಡ ಹಗರಣ ಎಂದು ನವಾಬ್​ ಮಲ್ಲಿಕ್​ ಆರೋಪಿಸಿದರು.

ಇದನ್ನೂ ಓದಿ: ‘ಪುನೀತ್​ ಅಂತಿಮ ದರ್ಶನ ಪಡೆದೆನೋ, ಇಲ್ಲವೋ ಎಂಬುದು ಅವರ ಕುಟುಂಬಕ್ಕೆ ತಿಳಿದಿದೆ’; ಟೀಕಾಕಾರರಿಗೆ ರಾಧಿಕಾ ಪಂಡಿತ್​ ತಿರುಗೇಟು

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್