ವೋಟು ಬೇಕಿದ್ದಾಗ ನಿನ್ನ ಕಾಲು ಹಿಡಿದೆ, ಮನೆ ಬೇಕಿದ್ದರೆ ನನ್ನ ಕಾಲು ಹಿಡಿಯಬೇಕು ಅಂತ ಗ್ರಾಮಸ್ಥನಿಗೆ ಜಬರಿದರು ಗ್ರಾ ಪಂ ಅಧ್ಯಕ್ಷ!
ಆ ಭರವಸೆಯನ್ನು ವಸತಿ ವಂಚಿತ ವ್ಯಕ್ತಿ ಅಧ್ಯಕ್ಷರಿಗೆ ನೆನಪು ಮಾಡಿಕೊಟ್ಟಾಗ ಕೆಂಡಾಮಂಡಲರಾಗುವ ಅವರು, ‘ನನಗೆ ವೋಟು ಬೇಕಾಗಿದ್ದಾಗ ನಿನ್ನ ಬಳಿ ಬಂದಿದ್ದೆ, ಅದರೆ ಈಗ ನಿನ್ನ ಸರದಿ, ನೀನು ಬಂದು ನನ್ನ ಕೈಕಾಲು ಹಿಡೀಬೇಕು,’ ಅಂತ ಜೋರು ಧ್ವನಿಯಲ್ಲಿ ಹೇಳುತ್ತಾರೆ
ಅಧಿಕಾರ ನೀಡುವ ಗತ್ತು, ದರ್ಪ, ಅಹಂಕಾರ ಅಂದರೆ ಇದೇ ಇರಬೇಕು ಮಾರಾಯ್ರೇ. ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ (HD Kote) ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಅಣ್ಣೂರು ಗ್ರಾಮ ಪಂಚಾಯಿತಿಯಲ್ಲಿ ವಾರ್ಡ್ ಸಭೆ ನಡೆಯುತ್ತಿದ್ದಾಗ ರೆಕಾರ್ಡ್ ಆಗಿರುವ ಈ ವಿಡಿಯೋ ನೋಡಿ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟೈಗರ್ ಬ್ಲಾಕ್ ನಲ್ಲಿ (Tiger Block) ಸಭೆ ನಡೆಯುವಾಗ ಪಂಚಾಯಿತಿ ಅಧ್ಯಕ್ಷ ಶಿವಸ್ವಾಮಿ ಗೌಡ (Shivaswami Gowda) ಮತ್ತು ಒಬ್ಬ ಗ್ರಾಮಸ್ಥನ ನಡುವೆ ಜಗಳ ಶುರುವಿಟ್ಟುಕೊಂಡಿದೆ. ಗ್ರಾಮದ ನಿವಾಸಿ ಹೆಸರು ನಮಗೆ ಗೊತ್ತಿಲ್ಲ ಅದರೆ ಗೊತ್ತಿರುವ ಸಂಗತಿ ಏನೆಂದರೆ, ಕಳೆದ 15 ವರ್ಷಗಳಿಂದ ಅವರು ಸರ್ಕಾರದ ಒಂದು ವಸತಿ ಯೋಜನೆಯಡಿ ಮನೆಗಾಗಿ ಅವರು ಅರ್ಜಿ ಹಾಕುತ್ತಿದ್ದಾರೆ. ಆದರೆ ಇದುವರೆಗೂ ಅದು ಮಂಜೂರಾಗಿಲ್ಲ. ಪ್ರಾಯಶಃ ಕಳೆದ ಸಲ ಚುನಾವಣೆ ನಡೆದಾಗ ಶಿವಸ್ವಾಮಿ ಗೌಡ ಅವರು ಈ ವ್ಯಕ್ತಿಯ ಮನೆಗೆ ವೋಟು ಕೇಳಲು ಹೋದಾಗ ವಸತಿ ಮಂಜೂರು ಮಾಡುವ ಭರವಸೆ ನೀಡಿದ್ದಾರೆ.
ಆ ಭರವಸೆಯನ್ನು ವಸತಿ ವಂಚಿತ ವ್ಯಕ್ತಿ ಅಧ್ಯಕ್ಷರಿಗೆ ನೆನಪು ಮಾಡಿಕೊಟ್ಟಾಗ ಕೆಂಡಾಮಂಡಲರಾಗುವ ಅವರು, ‘ನನಗೆ ವೋಟು ಬೇಕಾಗಿದ್ದಾಗ ನಿನ್ನ ಬಳಿ ಬಂದಿದ್ದೆ, ಅದರೆ ಈಗ ನಿನ್ನ ಸರದಿ, ನೀನು ಬಂದು ನನ್ನ ಕೈಕಾಲು ಹಿಡೀಬೇಕು,’ ಅಂತ ಜೋರು ಧ್ವನಿಯಲ್ಲಿ ಹೇಳುತ್ತಾರೆ. ಅವರ ದುರ್ವರ್ತನೆ ಮತ್ತು ಸೊಕ್ಕಿನ ಮಾತಿನಿಂದ ವ್ಯಕ್ತಿ ಕುಪಿತನಾಗಿ ತಾನೂ ದಬಾಯಿಸಲು ಆರಂಭಿಸುತ್ತಾರೆ.
ಅವರ ನಡುವೆ ಜಗಳದ ತೀವ್ರತೆ ಹೆಚ್ಚಾದಾಗ ಬೇರೆ ಗ್ರಾಮಸ್ಥರು ಮಧ್ಯಪ್ರವೇಶಿಸಿ ಇಬ್ಬರನ್ನು ಶಾಂತರಾಗಿಸುತ್ತಾರೆ. ಶಿವಸ್ವಾಮಿ ಗೌಡ ಆಡುವ ಮಾತು ಕಿರಿಕಿರಿ ಉಂಟು ಮಾಡುತ್ತದೆ ಮಾರಾಯ್ರೇ.
ಇದನ್ನೂ ಓದಿ: Viral Video: ಹಳ್ಳಿಯ ದಾರಿಯಲ್ಲಿ ಬೈಕ್ನಲ್ಲಿ ಹೋಗುವಾಗ ದಿಢೀರೆಂದು ಎದುರು ಬಂದ ಸಿಂಹಿಣಿ; ಶಾಕಿಂಗ್ ವಿಡಿಯೋ ಇಲ್ಲಿದೆ