AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದಿ ರೈಸ್ ಆಫ್ ಅಶೋಕ’ ಚಿತ್ರಕ್ಕಾಗಿ 2 ವರ್ಷ ಗಡ್ಡ ಬಿಟ್ಟುಕೊಂಡು ಕಾದ ಕಲಾವಿದರು

‘ದಿ ರೈಸ್ ಆಫ್ ಅಶೋಕ’ ಚಿತ್ರಕ್ಕಾಗಿ 2 ವರ್ಷ ಗಡ್ಡ ಬಿಟ್ಟುಕೊಂಡು ಕಾದ ಕಲಾವಿದರು

ಮದನ್​ ಕುಮಾರ್​
|

Updated on: Nov 27, 2025 | 9:46 PM

Share

‘ದಿ ರೈಸ್ ಆಫ್ ಅಶೋಕ’ ಸಿನಿಮಾದಲ್ಲಿ ನಟ ಸತೀಶ್ ನೀನಾಸಂ ಅವರು ಅಭಿನಯಿಸಿದ್ದಾರೆ. ಈ ಸಿನಿಮಾ ಮಾಡಲು ಸಿಕ್ಕಾಪಟ್ಟೆ ಕಷ್ಟಪಟ್ಟಿರುವುದಾಗಿ ಅವರು ಹೇಳಿದ್ದಾರೆ. ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರು ಆ ಬಗ್ಗೆ ಮಾತನಾಡಿದರು. ಸಿನಿಮಾ ಮಾಡಲು ಸಹಕರಿಸಿದ ಎಲ್ಲರಿಗೂ ಅವರು ಧನ್ಯವಾದ ಅರ್ಪಿಸಿದರು.

‘ದಿ ರೈಸ್ ಆಫ್ ಅಶೋಕ’ (The Rise of Ashoka) ಸಿನಿಮಾದಲ್ಲಿ ನಟ ಸತೀಶ್ ನೀನಾಸಂ ಅವರು ಅಭಿನಯಿಸಿದ್ದಾರೆ. ಈ ಸಿನಿಮಾ ಮಾಡಲು ಸಿಕ್ಕಾಪಟ್ಟೆ ಕಷ್ಟಪಟ್ಟಿರುವುದಾಗಿ ಅವರು ಹೇಳಿದ್ದಾರೆ. ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರು ಆ ಬಗ್ಗೆ ಮಾತನಾಡಿದರು. ಸಿನಿಮಾ ಮಾಡಲು ಸಹಕರಿಸಿದ ಎಲ್ಲರಿಗೂ ಅವರು ಧನ್ಯವಾದ ಅರ್ಪಿಸಿದರು. ‘ಎರಡು ವರ್ಷಗಳ ಕಾಲ ಈ ಸಿನಿಮಾಗಾಗಿ ನಮ್ಮ ಕಲಾವಿದರು ಗಡ್ಡ ಬಿಟ್ಟಿದ್ದರು. ಅದು ಸುಲಭ ಅಲ್ಲ. ಸಿನಿಮಾದಲ್ಲಿನ ಒಂದು ಶಾಟ್​ಗೋಸ್ಕರ ನೂರಾರು ಜನರು ತಲೆ ಬೋಳಿಸಿಕೊಂಡಿದ್ದಾರೆ. ಸಂಬಳಕ್ಕಾಗಿ ಯಾರೂ ಕೆಲಸ ಮಾಡಿಲ್ಲ. ಕೊಟ್ಟಿದ್ದು ತೆಗೆದುಕೊಂಡಿದ್ದಾರೆ. ಪ್ರತಿಯೊಬ್ಬರು ಕೂಡ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಈ ಸಿನಿಮಾ ಗೆಲ್ಲುತ್ತೆ ಎಂಬ ನಂಬಿಕೆ ನನಗೆ ಇದೆ. ನಾನು ಬದುಕಿ ಇರುವವರೆಗೂ ಗುಣಮಟ್ಟದ ಸಿನಿಮಾಗಳನ್ನು ಕೊಡುತ್ತೇನೆ. ನನ್ನ ಸಿನಿಮಾ ಜರ್ನಿಯನ್ನು ಬೇರೆ ಬೇರೆ ರಾಜ್ಯಗಳಿಗೂ ವಿಸ್ತರಿಸುತ್ತೇನೆ’ ಎಂದು ಸತೀಶ್ ನೀನಾಸಂ (Sathish Ninasam) ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.