Daily Devotional: ಧಾರ್ಮಿಕ ಕಾರ್ಯಗಳಿಗೆ ಸಹಾಯ ಮಾಡದಿದ್ರೆ ಏನಾಗುತ್ತೆ ಗೊತ್ತಾ?

Updated on: Mar 10, 2026 | 7:12 AM

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಧಾರ್ಮಿಕ ಕಾರ್ಯಗಳಿಗೆ ಸಹಾಯ ಮಾಡದಿದ್ರೆ ಏನಾಗುತ್ತೆ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಧಾರ್ಮಿಕ ಕಾರ್ಯಗಳಿಗೆ ಅಥವಾ ಸಾಮಾಜಿಕ ಸೇವೆಗೆ ಸಹಾಯ ಮಾಡುವ ಭರವಸೆಗಳನ್ನು ನೀಡಿದಾಗ, ಅದನ್ನು ಈಡೇರಿಸದಿರುವುದು ವ್ಯಕ್ತಿಯ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಇದನ್ನು ಸಂಕಲ್ಪ ಭಂಗ ಎಂದು ಕರೆಯಲಾಗುತ್ತದೆ. ದೇವಸ್ಥಾನಗಳಿಗೆ ದೇಣಿಗೆ ನೀಡುವುದಾಗಿ ಅಥವಾ ಶುಭ ಕಾರ್ಯಗಳಿಗೆ ಬೆಂಬಲ ನೀಡುವುದಾಗಿ ಹೇಳಿ, ನಂತರ ಅದನ್ನು ಮರೆತುಬಿಡುವುದು ಅಥವಾ ಪೂರೈಸದಿರುವುದು ಆಧ್ಯಾತ್ಮಿಕವಾಗಿ ಹಾನಿಕರ.

ಬೆಂಗಳೂರು, ಮಾರ್ಚ್​​ 10​​​​​​: ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಧಾರ್ಮಿಕ ಕಾರ್ಯಗಳಿಗೆ ಸಹಾಯ ಮಾಡದಿದ್ರೆ ಏನಾಗುತ್ತೆ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಧಾರ್ಮಿಕ ಕಾರ್ಯಗಳಿಗೆ ಅಥವಾ ಸಾಮಾಜಿಕ ಸೇವೆಗೆ ಸಹಾಯ ಮಾಡುವ ಭರವಸೆಗಳನ್ನು ನೀಡಿದಾಗ, ಅದನ್ನು ಈಡೇರಿಸದಿರುವುದು ವ್ಯಕ್ತಿಯ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಇದನ್ನು ಸಂಕಲ್ಪ ಭಂಗ ಎಂದು ಕರೆಯಲಾಗುತ್ತದೆ. ದೇವಸ್ಥಾನಗಳಿಗೆ ದೇಣಿಗೆ ನೀಡುವುದಾಗಿ ಅಥವಾ ಶುಭ ಕಾರ್ಯಗಳಿಗೆ ಬೆಂಬಲ ನೀಡುವುದಾಗಿ ಹೇಳಿ, ನಂತರ ಅದನ್ನು ಮರೆತುಬಿಡುವುದು ಅಥವಾ ಪೂರೈಸದಿರುವುದು ಆಧ್ಯಾತ್ಮಿಕವಾಗಿ ಹಾನಿಕರ.

ಈ ರೀತಿಯ ವಚನಭಂಗವು ಮಾನಸಿಕ ಅಶಾಂತಿ, ರೋಗರುಜಿನಗಳು ಮತ್ತು ಅಪರಾಧ ಪ್ರಜ್ಞೆಗೆ (ಗಿಲ್ಟಿನೆಸ್) ಕಾರಣವಾಗುತ್ತದೆ. ವ್ಯಕ್ತಿಯ ಆತ್ಮವೇ ಈಡೇರಿಸದ ಭರವಸೆಗಳ ಬಗ್ಗೆ ನೆನಪಿಸುತ್ತಿರುತ್ತದೆ. ಸಣ್ಣ ದೇವಾಲಯಗಳಿಗೆ ಅಥವಾ ಗ್ರಾಮೀಣ ಗುಡಿಗಳಿಗೆ ನೀಡಿದ ಮಾತು ತಪ್ಪಿದಾಗ ಕುಟುಂಬದಲ್ಲಿ ದೈವಾನುಗ್ರಹ ಕಡಿಮೆಯಾಗಬಹುದು. ಇದು ವ್ಯಕ್ತಿಯ ಧನಾತ್ಮಕ ಆಧ್ಯಾತ್ಮಿಕ ಪ್ರಗತಿಗೆ ಅಡ್ಡಿಯಾಗಿ, ಪಂಚಭೂತಗಳ ಅನುಗ್ರಹವನ್ನೂ ಕಡಿಮೆ ಮಾಡಬಹುದು. ಪದೇ ಪದೇ ವಿಘ್ನಗಳು ಎದುರಾಗಿ, ಕುಲದೇವರ ಅನುಗ್ರಹವೂ ಕುಂಠಿತವಾಗಬಹುದು ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.

 

 

Loading...
Unable to load recommendations.
Follow Us