ದುಬಾರಿ ಪೆಟ್ರೋಲ್​ಗೆ ಹಣ ತೆತ್ತು ಸರ್ಕಾರವನ್ನು ಶಪಿಸುತ್ತಿರುವವರ ಚಿತ್ತ ಈಗ ಜಾಸ್ತಿ ಮೈಲೇಜ್ ನೀಡುವ ಇ-ಸ್ಕೂಟರ್​ಗಳತ್ತ!

TV9 Digital Desk

| Edited By: shruti hegde

Updated on: Nov 11, 2021 | 8:33 AM

ವಾಹನಗಳಿಗೆ ಸಂಬಂಧಿಸಿದಂತೆ ಜನರಿಗೆ ಖುಷಿ ನೀಡುತ್ತಿರುವ ವಿಷಯವೆಂದರೆ, ಒಂದೊಂದಾಗಿ ಲಾಂಚ್ ಅಗುತ್ತಿರುವ ಎಲೆಕ್ಟ್ರಿಕ್ ಬೈಕ್ ಮತ್ತು ಸ್ಕೂಟರ್​​​​ಗಳು.

ರೂ. 110ಕ್ಕೆ ಏರಿದ್ದ ಪೆಟ್ರೋಲ್ ಬೆಲೆಯನ್ನು 10 ರೂ. ಇಳಿಸಿ ರೂ.100ಕ್ಕೆ ತಂದರೆ, ಸಂತೋಷಪಡುತ್ತಾರೆ ಅಂತ ಕೇಂದ್ರ ಸರ್ಕಾರ ಅಂದುಕೊಂಡಿದ್ದು ಸುಳ್ಳಾಗಿದೆ. ಕೇವಲ 3-4 ತಿಂಗಳ ಹಿಂದೆ ಅವರು 90 ರೂ. ಕೊಟ್ಟು ಒಂದು ಲೀಟರ್ ಹಾಕಿಸಿಕೊಳ್ಳುತ್ತಿದ್ದರು. ಹಾಗಿದ್ದ ಮೇಲೆ ಖುಷಿ ಎಲ್ಲಿಂದ ಬಂದೀತು? ವಾಹನಗಳಿಗೆ ಸಂಬಂಧಿಸಿದಂತೆ ಅವರಿಗೆ ಖುಷಿ ನೀಡುತ್ತಿರುವ ವಿಷಯವೆಂದರೆ, ಒಂದೊಂದಾಗಿ ಲಾಂಚ್ ಅಗುತ್ತಿರುವ ಎಲೆಕ್ಟ್ರಿಕ್ ಬೈಕ್ ಮತ್ತು ಸ್ಕೂಟರ್​​​​ಗಳು. ನಾವು ಇ-ಸ್ಕೂಟರ್ಗಳ ಬಗ್ಗೆ ನಿರಂತರವಾಗಿ ಚರ್ಚಿಸುತ್ತಲೇ ಇದ್ದೇವೆ. ಗಮನಾರ್ಹ ಸಂಗತಿಯೇನೆಂದರೆ, ಈ ಸ್ಕೂಟರ್ಗಳು ಪ್ರತಿ ಚಾರ್ಜ್ಗೆ 100 ಕಿಮೀ ಗಳಿಗಿಂತ ಜಾಸ್ತಿ ಓಡುತ್ತವೆ.

ಇಂಥ 5 ಎಲೆಕ್ಟ್ರಿಕ್ ಸ್ಕೂಟರ್ಗಳ ಮಾಹಿತಿಯನ್ನು ನಾವು ನಿಮಗೆ ನೀಡುತ್ತೇವೆ. ಎಥರ್ ಸಂಸ್ಥೆಯ 450 ಎಕ್ಸ್ ಸ್ಕೂಟರ ಬೆಲೆ ರೂ. 1.32 ಲಕ್ಷ, ಇದನ್ನು ಒಮ್ಮೆ ಚಾರ್ಜ್ ಮಾಡಿಸಿ 116 ಕಿಮೀ ಅಂತರವನ್ನು ಕ್ರಮಿಸಬಹುದು. ನಿಮಗೆ ಗೊತ್ತಿರುವಂತೆ ಓಲಾ ಕಂಪನಿಯು ಎರಡು-ಓಲಾ ಎಸ್ 1 ಮತ್ತು ಓಲಾ ಎಸ್ 1 ಪ್ರೊ ಲಾಂಚ್ ಮಾಡಿದ್ದು ಎಸ್ 1, ಒಂದು ಚಾರ್ಜ್ಗೆ 121 ಕಿಮೀ ಓಡಿದರೆ, ಎಸ್ 1 ಪ್ರೊ 181 ಕಿಮೀ ದೂರವನ್ನು ಕ್ರಮಿಸುತ್ತದೆ.

ಜಪಾನಿನ ಒಕಿನಾವಾ ಸ್ಕೂಟರ್ ಅನ್ನು ಒಮ್ಮೆ ಚಾರ್ಜ್ ಮಾಡಿ 139 ಕಿಮೀ ಅಂತರವನ್ನು ಕ್ರಮಿಸಹುದು. ಇ-ಸ್ಕೂಟರ್ಗಳ ಪೈಕಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಹಿರೋ ಇ-ಸ್ಕೂಟರ್ 108 ಕಿಮೀ ಓಡುತ್ತದೆ. ಅಂದಹಾಗೆ, ಇದರ ಎಕ್ಸ್ ಶೋರೂಮ್ ಬೆಲೆ ರೂ. 71,440.

ಇ-ಸ್ಕೂಟರ್ ಗಳಲ್ಲಿ ಅತಿಹೆಚ್ಚು ಮೈಲೇಜ್ ನೀಡುವ ವಾಹನವೆಂದರೆ, ಸಿಂಪಲ್ ಇನ್. ಇದನ್ನು ಒಮ್ಮೆ ಚಾರ್ಜ್ ಮಾಡಿಸಿದರೆ, 236 ಕಿಮೀ ದೂರವನ್ನು ಕ್ರಮಿಸಬಹುದು!

ಇದನ್ನೂ ಓದಿ:   Puneeth Rajkumar: ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ; ಅಪ್ಪು ಜೊತೆ ಹಾಡಿದ ಕೊನೆಯ ವಿಡಿಯೋಗಳಲ್ಲಿ ಒಂದನ್ನು ಹಂಚಿಕೊಂಡ ರಾಘವೇಂದ್ರ ರಾಜಕುಮಾರ್   

Follow us

Click on your DTH Provider to Add TV9 Kannada