ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು? ಇಲ್ಲಿದೆ ವಿವರ
ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ವಾರಾಹಿ ಪಂಜುರ್ಲಿ ದೈವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಆ ಸಂದರ್ಭದಲ್ಲಿ ಏನೆಲ್ಲ ನಡೆಯಿತು ಎಂಬುದನ್ನು ದೈವಸ್ಥಾನದ ಗೌರವಾಧ್ಯಕ್ಷರಾದ ರವಿ ಪ್ರಸನ್ನ ಅವರು ವಿವರಿಸಿದ್ದಾರೆ. ಪತ್ನಿ ಹಾಗೂ ಮಕ್ಕಳ ಜೊತೆ ಬಂದು ರಿಷಬ್ ಶೆಟ್ಟಿ ಅವರು ದೈವದ ನೇಮೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.
ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿರುವ ರಿಷಬ್ ಶೆಟ್ಟಿ (Rishab Shetty) ಅವರು ಮಂಗಳೂರಿನ ಬಾರೆಬೈಲ್ನ ವಾರಾಹಿ ಪಂಜುರ್ಲಿ (Panjurli) ದೈವಸ್ಥಾನಕ್ಕೆ ಬಂದಿದ್ದಾರೆ. ಆ ಕುರಿತು ದೈವಸ್ಥಾನದ ಗೌರವಾಧ್ಯಕ್ಷ ರವಿ ಪ್ರಸನ್ನ ಮಾತನಾಡಿದ್ದಾರೆ. ‘ನಮ್ಮ ಆಹ್ವಾನದ ಮೇರೆಗೆ ರಿಷಬ್ ಶೆಟ್ಟಿ ಅವರು ಬಂದಿದ್ದಾರೆ. ಪಂಜುರ್ಲಿ ಎಂದರೆ ಅವರಿಗೆ ಆತ್ಮೀಯತೆ. ಯಾವುದಕ್ಕೂ ಗಡಿಬಿಡಿ ಮಾಡಬೇಡಿ ಅಂತ ಹೇಳಿದರು. ದೈವಸ್ಥಾನದ ಎದುರು ಪ್ರಸಾದ ನೀಡಲು ಅವರನ್ನು ಕರೆದೆವು. ಎಲ್ಲರೂ ಪ್ರಸಾದ ಸ್ವೀಕರಿಸಿದರು. ಮಗನ ಹುಟ್ಟುಹಬ್ಬ ಆದ್ದರಿಂದ ಸಂತೋಷದಲ್ಲಿ ಇದ್ದರು. ಪ್ರಸಾದದ ಸಂದರ್ಭದಲ್ಲಿ ಏನಾದರೂ ಹೇಳುವುದು ಇದೆಯಾ ಎಂದು ದೈವ ಕೇಳಿತು. ಒಳ್ಳೆಯದು ಮಾಡುತ್ತೇನೆ ಅಂತ ದೈವ ಹೇಳಿದೆ’ ಎಂದಿದ್ದಾರೆ ರವಿ ಪ್ರಸನ್ನ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.