ಏಪ್ರಿಲ್ 18ರಂದು ಪಹಲ್ಗಾಮ್​ನಲ್ಲಿದ್ದ ಹುಬ್ಬಳ್ಳಿ ತಂಡದ ಸದಸ್ಯರೊಬ್ಬರು ಪಹಲ್ಗಾಮ್ ಬಗ್ಗೆ ವಿವರಣೆ ನೀಡುತ್ತಾರೆ

Updated on: Apr 30, 2025 | 7:48 PM

ಪಹಲ್ಗಾಮ್ ಬಹಳ ಸುಂದರವಾದ ಪ್ರದೇಶ, ಅಲ್ಲಿಗೆ ಹೋದವರು ಆಹ್ಲಾದಕರ, ಮನಸ್ಸಿಗೆ ಮುದನೀಡುವ ವಾತಾವರಣದಲ್ಲಿ ಕಳೆದುಹೋಗುತ್ತಾರೆ. ಅದರೆ ಉಗ್ರರು ಅಂತ ಮನೋಹರ ಸ್ಥಳವನ್ನು ದುಸ್ವಪ್ನದಲ್ಲಿ ಪರಿವರ್ತಿಸಿದ್ದಾರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಮಾಯಕರ ಬಲಿ ತೆಗೆದಕೊಂಡ ಉಗ್ರರನ್ನು ಸುಮ್ಮನೆ ಬಿಡಲಾರರು, ಅವರಿಗೆ ತಕ್ಕ ಪಾಠ ಕಲಿಸದೆ ಬಿಡೋದಿಲ್ಲ ಎಂದು ರಾಜೇಶ್ವರಿ ಹೇಳುತ್ತಾರೆ.

ಹುಬ್ಬಳ್ಳಿ, ಏಪ್ರಿಲ್ 30: ಪಹಲ್ಗಾಮ್ ನಲ್ಲಿ ಏಪ್ರಿಲ್ 22 ರಂದು ಉಗ್ರರ ದಾಳಿ ನಡೆಯುವ ಮೊದಲು ಎಲ್ಲವೂ ನಾರ್ಮಲ್ ಆಗಿತ್ತು, ಉಗ್ರರು ಅಲ್ಲಿಗೆ ಬಂದು ಸಂತೋಷದಿಂದ ಕಾಲ ಕಳೆಯುತ್ತಿದ್ದ ಜನರನ್ನು ಕೊಂದಾರು ಎಂಬ ಯೋಚನೆಯೂ ಬರವುದು ಸಾಧ್ಯವಿರಲಿಲ್ಲ ಎಂದು ಹುಬ್ಬಳ್ಳಿಯ ರಾಜೇಶ್ವರಿ ಕಲ್ಯಾಣ ಶೆಟ್ಟರ್ (Rajeshwari Kalyana Shettar) ಹೇಳುತ್ತಾರೆ. ಬೇರೆಯವರಂತೆ ಇವರು ಮತ್ತು ಸುಮಾರು 45 ಜನ ಜಮ್ಮು ಮತ್ತು ಕಾಶ್ಮೀರ ಪ್ರವಾಸ ತೆರಳಿ ಪಹಲ್ಗಾಮ್ ಗೂ ಹೋಗಿದ್ದರು. ಇವರು ಅಲ್ಲಿಗೆ ಹೋಗಿದ್ದು 18 ರಂದು, ಉಗ್ರರ ದಾಳಿ ನಡೆದಿದ್ದು 22 ರಂದು ಮಧ್ಯಾಹ್ನ. ಸುದ್ದಿ ಕೇಳಿ ತಾವು ಅಲ್ಲಿ ಅನುಭವಿಸಿದ ಸಂತೋಷದ ಕ್ಷಣಗಳೆಲ್ಲ ಕೊಚ್ಚಿಹೋದವು, ಅದರೆ ನಮ್ಮ ಸರ್ಕಾರ ಉಗ್ರರನ್ನು ಸದೆಬಡಿಯುತ್ತದೆ ಎಂದು ರಾಜೇಶ್ವರಿ ಹೇಳುತ್ತಾರೆ.

ಇದನ್ನೂ ಓದಿ:  ಉಗ್ರರು, ಪಾಕಿಸ್ತಾನದ ವಿರುದ್ಧ ಕಾರ್ಯೋನ್ಮುಖರಾಗುವುದಷ್ಟೇ ನಮ್ಮ ಮುಂದಿರುವ ವಿಚಾರ: ಡಾ ಮಂಜುನಾಥ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ