Biriyani Vending Machine: ಎಟಿಎಮ್ ಕಿಯಾಸ್ಕ್ನಿಂದ ನೀವು ಹಣ ಪಡೆದಿರಬಹುದು, ಆದರೆ ಬಿರಿಯಾನಿ? ಒಮ್ಮೆ ಚೆನೈಗೆ ಹೋಗಿ!
ಬಿರಿಯಾನಿಗೆ ಹಣ ಪಾವತಿಸಲು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡಬಹುದು ಇಲ್ಲವೇ ಯುಪಿಐ ಪೇಮೆಂಟ್ ಌಪ್ ಗಳ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪೇ ಮಾಡಬಹುದು. ಪೇಮೆಂಟ್ ಆದ ಕೂಡಲೇ ಮಶೀನ್ ಕಾರ್ಯಾರಂಭಗೊಳ್ಳುತ್ತದೆ ಮತ್ತು ಮುಂದಿನ 4 ನಿಮಿಷಗಳಲ್ಲಿ ಬಿರಿಯಾನಿ ನಿಮ್ಮ ಕೈ ಸೇರುತ್ತದೆ.
ಚೆನೈ: ಎಟಿಎಮ್ (ATM) ಮಶೀನ್ ಮುಂದೆ ನಿಂತು ಅದರಲ್ಲಿ ಕಾರ್ಡ್ ಹಾಕಿದರೆ ದುಡ್ಡು ಬರುತ್ತದೆ. ಎಟಿಎಮ್ ನಂತೆ ಕಾಣುವ ಮಶೀನೊಂದರಿಂದ ಬಿಸಿ ಬಿಸಿ ಬಿರಿಯಾನಿ ಪ್ಯಾಕೆಟ್ (biriyani packet) ಹೊರಬರುವ ಬಗ್ಗೆ ಈ ಮೊದಲು ಕೇಳಿದ್ದೀರಾ ಅಥವಾ ಎಲ್ಲಾದರೂ ನೋಡಿದ್ದೀರಾ? ಚೆನೈನಲ್ಲಿ ಅಂಥದೊಂದು ಯಂತ್ರ (machine) ವಿನ್ಯಾಸಗೊಂಡು ಕಾರ್ಯನಿರ್ವಹಿಸುತ್ತಿದೆ ಮಾರಾಯ್ರೇ. ಎಲ್ಲ ಮಹಾನಗರಗಳಂತೆ ಚೆನೈ ಕೂಡ ಬಿರಿಯಾನಿಗಳಿಗೆ ರುಂಬಾ ಫೇಮಸ್ಸು. ನಗರದಲ್ಲಿ ವಿವಿಧ ಬಗೆಯ ಬಿರಿಯಾನಿಗಳು ಲಭ್ಯ. ಚೆನೈ ನಿವಾಸಿಗಳ ಬಿರಿಯಾನಿ ಪ್ರೇಮ ಚೆನ್ನಾಗಿ ಅರ್ಥಮಾಡಿಕೊಂಡಿರುವ ವ್ಯಾಪಾರಿಯೊಬ್ಬರು ಅದನ್ನು ಅವರಿಗೆ ತಲುಪಿಸಲು ಒಂದು ಹೊಸ ತಂತ್ರಜ್ಞಾನವನ್ನು ಅಳವಡಿಸಿದ್ದಾರೆ. ನಗರದ ಕೊಲತ್ತೂರು ಪ್ರದೇಶದಲ್ಲಿ ಅವರು ಅಳವಡಿಸಿರುವ ಎಟಿಎಮ್-ಶೈಲಿಯ ಮಶೀನ್ ಭಾರತದ ಪ್ರಪ್ರಥಮ ಮಾನವರಹಿತ ಟೇಕ್ ಆವೇ ಬಿರಿಯಾನಿ ಶಾಪ್ ಎಂದು ಹೇಳಲಾಗುತ್ತಿದೆ.
‘ನಾನು ಕೊಲತ್ತೂರು ಪ್ರದೇಶದ ನಿವಾಸಿಯಾಗಿದ್ದೇನೆ. ಮೊದಲೆಲ್ಲ ನಾವು ಬಿರಿಯಾನಿಗಾಗಿ ಒಂದು ದಿನ ಮೊದಲು ಆರ್ಡರ್ ಮಾಡುತ್ತಿದ್ದೆವು. ಅದರೆ ಈ ಮಾನವರಹಿತ ಮಶೀನ್ ಇನ್ಸ್ ಸ್ಟಾಲ್ ಆದ ನಂತರ ಆರ್ಡರ್ ಮಾಡಿದ ತಕ್ಷಣ ಬಿರಿಯಾನಿ ನಮ್ಮ ಕೈಗೆ ಸಿಗುತ್ತಿದೆ. ಈ ಪ್ರಯೋಗ ಯಶ ಕಂಡಿದೆ, ಇಂಥ ಮಶೀನನ್ನು ಬೇರೆಲ್ಲೂ ನಾನು ನೋಡಿಲ್ಲ. ನಮಗಿದು ಹೊಚ್ಚ ಹೊಸತು ಮತ್ತು ಉಪಯೋಗಕಾರಿಯೂ ಆಗಿದೆ. ನಮಗೆ ಬೇಕಾಗಿರುವ ಬಿರಿಯಾನಿ ತಕ್ಷಣವೇ ಸಿಗುತ್ತದೆ,’ ಎಂದು ಇಲ್ಲಿನ ನಿವಾಸಿ ಬಾಲಚಂದ್ರನ್ ಹೇಳುತ್ತಾರೆ.
ಇದನ್ನೂ ಓದಿ: ಕಾಂತಿಯುತ ಮತ್ತು ಆರೋಗ್ಯಕರ ತ್ವಚೆಗಾಗಿ ತುಳಸಿ ಎಲೆಗಳನ್ನು ಈ ರೀತಿಯಾಗಿ ಬಳಸಿ
ಇಲ್ಲಿ ನೀವು ಮಾಡಬೇಕಿರುವುದು ಇಷ್ಟೇ, 32 ಇಂಚಿನ ಸ್ಕ್ರೀನ್ ಮೇಲೆ ಕಾಣಿಸುವ ಮೆನುನಿಂದ ನಿಮಗಿಷ್ಟವಾಗುವ ಬಿರಿಯಾನಿಯನ್ನು ಆಯ್ಕೆ ಮಾಡಿಕೊಂಡು ಅದರ ಮೇಲೆ ಕ್ಲಿಕ್ ಮಾಡಿದರೆ ಸಾಕು, ನೀವು ಬಯಸಿದ ಬಿಸಿ ಬಿಸಿ ಬಿರಿಯಾನಿ 4 ನಿಮಿಷಗಳಲ್ಲಿ ನಿಮ್ಮ ಕೈಗೆ ಬರುತ್ತದೆ. ಇದನ್ನು ನಡೆಸುವ ವ್ಯಾಪಾರಿ ಅಂಗಡಿಗೆ ‘ಭಾಯಿ ವೀಟು ಕಲ್ಯಾಣಂ’ ಅಂತ ಹೆಸರಿಟ್ಟಿದ್ದಾರೆ. ಮುಸ್ಲಿಂ ಸಮುದಾಯದ ಮದುವೆ ಸಮಾರಂಭಗಳಲ್ಲಿ ತಯಾರಿಸಲಾಗುವ ಬಿರಿಯಾನಿಯನ್ನು ಇದು ಸೂಚಿಸುತ್ತದೆ.
‘ಚಿಕನ್ ಬಿರಿಯಾನಿ ತೆಗೆದುಕೊಳ್ಳಲು ನಾನಿಲ್ಲಿ ಬಂದಿರುವೆ. ಇಲ್ಲಿ ಸಿಗುವ ಬಿರಿಯಾನಿ ರುಚಿಯಾಗಿರುತ್ತದೆ, ಈ ಐಡಿಯಾ ನೂತನವಾಗಿದೆ ಮತ್ತು ಜನರಿಗೆ ಬಹಳ ಪ್ರಯೋಜನಕಾರಿಯಾಗಿದೆ,’ ಎಂದು ವಿದ್ಯಾರ್ಥಿನಿಯಾಗಿರುವ ದೀಕ್ಷಿತಾ ಹೇಳುತ್ತಾರೆ.
ಬಿರಿಯಾನಿಗೆ ಹಣ ಪಾವತಿಸಲು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡಬಹುದು ಇಲ್ಲವೇ ಯುಪಿಐ ಪೇಮೆಂಟ್ ಌಪ್ ಗಳ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪೇ ಮಾಡಬಹುದು. ಪೇಮೆಂಟ್ ಆದ ಕೂಡಲೇ ಮಶೀನ್ ಕಾರ್ಯಾರಂಭಗೊಳ್ಳುತ್ತದೆ ಮತ್ತು ಮುಂದಿನ 4 ನಿಮಿಷಗಳಲ್ಲಿ ಬಿರಿಯಾನಿ ನಿಮ್ಮ ಕೈ ಸೇರುತ್ತದೆ. ಬಿರಿಯಾನಿಯನ್ನು ಹಾಟ್ ಟಿನ್ ಬಾಕ್ಸ್ ನಲ್ಲಿ ಪ್ಯಾಕ್ ಮಾಡಲಾಗಿರುತ್ತದೆ. ಬಿರಿಯಾನಿಯೊಂದಿಗೆ ರೈತ ಮತ್ತು ಬದನೆಕಾಯಿ ಶೇರ್ವಾ ಸಿಗುತ್ತದೆ.
ಇದನ್ನೂ ಓದಿ: Pathaan: 50 ದಿನ ಪೂರೈಸಿದ ‘ಪಠಾಣ್’; 20 ದೇಶದಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿದೆ ಶಾರುಖ್ ಸಿನಿಮಾ
‘ಇದೊಂದು ಅದ್ಭುತವಾದ ಐಡಿಯಾ, ವರ್ಷಗಳಿಂದ ಇಂಥದೊಂದು ವ್ಯವಸ್ಥೆಗಾಗಿ ನಾವು ಹಪಹಪಿಸುತ್ತಿದ್ದೆವು. ಜನ ಬಂದು ಸಾಲಲ್ಲಿ ನಿಂತು ಮಶೀನ್ ಮೂಲಕ ತಮಗೆ ಬೇಕಿರುವ ಬಿರಿಯಾನಿ ಪಡೆದುಕೊಳ್ಳುತ್ತಾರೆ,’ ಎಂದು ಚೆನೈಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿರುವ ರಘು ಹೇಳುತ್ತಾರೆ.
ನೀವೇನಾದರೂ ಚೆನೈಯಲ್ಲಿದ್ದರೆ, ಅಥವಾ ನಗರಕ್ಕೆ ಬೇಟಿ ನೀಡುವ ಯೋಚನೆಯಿದ್ದರೆ, ಕೊಲತ್ತೂರ್ ಗೆ ಹೋಗಿ ವೆಂಡಿಂಗ್ ಮಶೀನ್ ಮೂಲಕ ಸರಬರಾಜಾಗುವ ಬಿರಿಯಾನಿ ತಿಂದು ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ