ಸಮಯಾವಕಾಶ ಕಡಿಮೆ ಸಿಕ್ಕರೂ ವಿಷಯಗಳನ್ನು ಸಮರ್ಥವಾಗಿ ಮಂಡಿಸಿ ಸರ್ಕಾರವನ್ನು ಕಟ್ಟಿಹಾಕಿದ್ದೇವೆ: ಅರ್ ಅಶೋಕ

|

Updated on: Dec 21, 2024 | 4:56 PM

ವೈಯಕ್ತಿಕವಾಗಿ ತಾನು ವಕ್ಫ್ ಭೂಕಬಳಿಕೆ ಬಗ್ಗೆ ಸದನದಲ್ಲಿ ಸುಮಾರು ಎರಡು ತಾಸು ಮಾತಾಡಿದ್ದು, ಹೇಗೆ ಬ್ರಿಟಿಷರ ಕಾಲದಿಂದ ಹಿಂದೂ ದೇವಸ್ಥಾನಗಳ ಜಮೀನು ಮತ್ತು ರೈತರ ಹೊಲಗದ್ದೆಗಳನ್ನು ಮುಸ್ಲಿಂ ಓಲೈಕೆಗಾಗಿ ಕಬಳಿಸಲಾಗುತ್ತಿದೆ ಅನ್ನೋದನ್ನು ದಾಖಲೆಗಳ ಸಮೇತ ಸದನದ ಗಮನಕ್ಕೆ ತಂದು ಸರ್ಕಾರದ ಮುಖಕ್ಕೆ ಕನ್ನಡಿ ಹಿಡಿದಿರುವುದಾಗಿ ಅಶೋಕ ಹೇಳಿದರು.

ಬೆಂಗಳೂರು: ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ವಿಪಕ್ಷ ನಾಯಕ ಆರ್ ಅಶೋಕ ಅವರು ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಸಿಕ್ಕ ಸ್ವಲ್ಪ ಸಮಯವನ್ನೇ ತಮ್ಮ ಪಕ್ಷ ಬಹಳ ಉಪಯುಕ್ತ ಹಾಗೂ ಪ್ರಯೋಜನಕಾರಿಯಾಗಿ ಬಳಸಿಕೊಂಡಿದೆ ಎಂದು ಹೇಳಿದರು. ಹಿರಿಯ ಮುತ್ಸದ್ದಿ ಎಸ್ ಎಂ ಕೃಷ್ಣ ಅವರ ಸಾವು, ಬಸವಣ್ಣನವರ ಫೋಟೋಗೆ ಸಂಬಂಧಿಸಿದ ಚರ್ಚೆ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಅಧಿವೇಶನದ ಸಮಯ ಕಮ್ಮಿಯಾದರೂ ವಕ್ಫ್ ಬೋರ್ಡ್, ಬಾಣಂತಿಯರ ಸಾವು, ಉತ್ತರ ಕರ್ನಾಟದ ಸಮಸ್ಯೆಗಳು ಮತ್ತು ಅನುದಾನ ಬಿಡುಗಡೆಯಲ್ಲಿ ತಾರತಮ್ಯ-ವಿಷಯಗಳ ಮೇಲೆ ಸರ್ಕಾರವನ್ನು ಕಟ್ಟಿಹಾಕುವಲ್ಲಿ ಯಶ ಕಂಡೆವು ಎಂದು ಅಶೋಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರವಿಯನ್ನು ಕಾಡಿನಲ್ಲಿ ಸುತ್ತಿಸುವಾಗ ಪಿಎಫ್​ಐನವರು ದಾಳಿ ಮಾಡಿದ್ದರೆ ಅದಕ್ಕೆ ಹೊಣೆ ಯಾರಾಗುತ್ತಿದ್ದರು? ಅರ್ ಅಶೋಕ