ದಾವಣಗೆರೆ: ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ನಾಳೆ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಗೆ ಭೇಟಿ ನೀಡಿದ ಬಳಿಕ ದಾವಣಗೆರೆಗೆ (Davanagere) ತೆರಳಲಿದ್ದಾರೆ. ರಾಜ್ಯದ ವಾಣಿಜ್ಯ ನಗರಿ ಎಂದು ಕರೆಸಿಕೊಳ್ಳುವ ದಾವಣಗೆರೆಯಲ್ಲಿ ಪ್ರಧಾನಿಯವರ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರ್ಜರಿಯಾಗಿ ನಡೆದಿವೆ. ಟಿವಿ9 ಕನ್ನಡ ವಾಹಿನಿ ಜಿಲ್ಲಾ ವರದಿಗಾರರು ಅಡುಗೆ-ಊಟ-ತಿಂಡಿಯ ಬಗ್ಗೆ ಒಂದು ವಾಕ್ ಥ್ರೂ ಮಾಡಿ ಕಳಿಸಿದ್ದಾರೆ. ನಾಳೆ ಬೇರೆ ಬೇರೆ ಊರುಗಳಿಂದ ಬರುವ ಸುಮಾರು 10 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡುವುದು ಸಾಮಾನ್ಯ ಕೆಲಸವಲ್ಲ. ಬೆಳಗಿನ ತಿಂಡಿಗೆ ಚೌಚೌ ಭಾತ್ ಮತ್ತು ಮಧ್ಯಾಹ್ನದ ಊಟಕ್ಕೆ ಪಾಯಸ, ಅನ್ನ-ಸಾಂಬಾರು, ಪಲ್ಯಗಳು, ಮೊಸರನ್ನ ಜೊತೆ ಹಪ್ಪಳಗಳ ತಯಾರಿ ಮಾಡಲಾಗುತ್ತಿದೆ. ನಮ್ಮ ವರದಿಗಾರರು ಹೇಳುವಂತೆ ಅಡುಗೆಗೆಂದೇ ಒಂದು ಸಾವಿರ ಬಾಣಸಿಗರನ್ನು (cooks) ನಿಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗಾಗಿ 1,000 ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ