ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿ ಬನಶಂಕರಿ ಜಾತ್ರೆಗೆ ಪಾದಯಾತ್ರೆ ಹೊರಟ ಸಾವಿರಾರು ಭಕ್ತರು; ವಿಡಿಯೋ ನೊಡಿ

| Updated By: preethi shettigar

Updated on: Jan 15, 2022 | 2:07 PM

ಒಂದು ತಿಂಗಳು ಕಾಲ ನಡೆಯುವ ಈ ಜಾತ್ರೆಯಲ್ಲಿ ಲಕ್ಷಾಂತರ ಜನರು ಸೇರುವ ಕಾರಣಕ್ಕೆ ಜಿಲ್ಲಾಡಳಿತ ಜಾತ್ರೆ ರದ್ದು ಮಾಡಿದೆ. ಆದರೂ ಸಾವಿರಾರು ಭಕ್ತರು ಜಾತ್ರೆಗೆ ಪ್ರತಿವರ್ಷದಂತೆ ಪಾದಯಾತ್ರೆ ಮೂಲಕ ಆಗಮಿಸಿದ್ದಾರೆ.

ಬಾಗಲಕೋಟೆ: ವೀಕೆಂಡ್ ಕರ್ಫ್ಯೂ (Weekend curfew) ಉಲ್ಲಂಘಿಸಿ ಬನಶಂಕರಿ ಜಾತ್ರೆಗೆ ಪಾದಯಾತ್ರೆ ಮೂಲಕ ಭಕ್ತರು ತೆರಳಿದ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್‌ನಲ್ಲಿ ನಡೆದಿದೆ. ಇಳಕಲ್ ನಗರದಿಂದ ಹೂಲಗೇರಿ, ಬಂಡರಗಲ್, ಕಾಟಾಪುರ, ದಮ್ಮೂರು, ಗುಡೂರು, ಪಟ್ಟದಕಲ್, ಶಿವಯೋಗ ಮಂದಿರ, ಬನಶಂಕರಿವರೆಗೂ ಪಾದಯಾತ್ರೆ ಮಾಡಿದ್ದಾರೆ. ಜ.17ರಂದು ಬನದ ಹುಣ್ಣಿಮೆ ದಿನ ನಡೆಯುವ ಜಾತ್ರೆಗೆ ಭಕ್ತರ ದಂಡು ಆಗಮಿಸಿದೆ. ಮಾಸ್ಕ್, ಸಾಮಾಜಿಕ ಅಂತರ, ಸಾನಿಟೈಜಿಂಗ್ ಎಲ್ಲವನ್ನೂ ನಿರ್ಲಕ್ಷಿಸಲಾಗಿದೆ.

ಬನಶಂಕರಿ ಜಾತ್ರೆಗಾಗಿ ಇಳಕಲ್ ನಗರದಿಂದ ಬಾದಾಮಿಯ ಬನಶಂಕರಿವರೆಗೆ ಪಾದಯಾತ್ರೆ ನಡೆಸಿದ್ದಾರೆ. ಮಕ್ಕಳಿಂದ ವೃದ್ಧರವರೆಗೂ ಸಾವಿರಾರು ಜನರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಮಾರ್ಗ ಮಧ್ಯ ಅಲ್ಲಲ್ಲಿ ಭಕ್ತರಿಂದ ಪಾದಯಾತ್ರಿಗಳಿಗೆ ಉಚಿತ ಪ್ರಸಾದ ವ್ಯವಸ್ಥೆ ಕೂಡ ಮಾಡಲಾಗಿತ್ತು. ಅಂದಾಜು 50 ರಿಂದ 55 ಕಿ.ಮೀ.ಪಾದಯಾತ್ರೆ‌ ಮೂಲಕ ಬನಶಂಕರಿ ಜಾತ್ರೆಗೆ ಹೊರಟಿದ್ದಾರೆ.

ಒಂದು ತಿಂಗಳು ಕಾಲ ನಡೆಯುವ ಈ ಜಾತ್ರೆಯಲ್ಲಿ ಲಕ್ಷಾಂತರ ಜನರು ಸೇರುವ ಕಾರಣಕ್ಕೆ ಜಿಲ್ಲಾಡಳಿತ ಜಾತ್ರೆ ರದ್ದು ಮಾಡಿದೆ. ಆದರೂ ಸಾವಿರಾರು ಭಕ್ತರು ಜಾತ್ರೆಗೆ ಪ್ರತಿವರ್ಷದಂತೆ ಪಾದಯಾತ್ರೆ ಮೂಲಕ ಆಗಮಿಸಿದ್ದಾರೆ.

ಇದನ್ನೂ ಓದಿ:
Mekedatu Padyatra: ಕೈ ಮೇಕೆದಾಟು ಪಾದಯಾತ್ರೆ ಮೊಟುಕಿಗೆ ಕಾರಣ ಯಾರು? ಇದರಿಂದ ಪಕ್ಷಕ್ಕೆ ಮುಖಭಂಗ ಆಗಿಲ್ಲವೇ?

ವೀಕೆಂಡ್ ಕರ್ಪ್ಯೂನಿಂದ ವ್ಯಾಪಾರ ವಿಲ್ಲದೆ ಅಜ್ಜಿಯ ಪರದಾಟ; ಟಿವಿ9 ವರದಿ ಕಂಡು ಸಹಾಯಕ್ಕೆ ಮುಂದಾದ ಬಳ್ಳಾರಿ ನಿವಾಸಿ