Makara Jyothi: ಮಳೆಯ ಭೀತಿಯ ನಡುವೆಯೂ ಶಬರಿಮಲೆಯ ಬೆಟ್ಟದಲ್ಲಿ ಮಕರ ಜ್ಯೋತಿ ದರ್ಶನ
ಇಂದು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆದ ಅಭೂತಪೂರ್ವ ಜನದಟ್ಟಣೆಯ ನಡುವೆಯೂ, ಬೆಟ್ಟದ ದೇವಾಲಯದಲ್ಲಿ ನಡೆದ ಮಕರವಿಳಕ್ಕು ಉತ್ಸವದಲ್ಲಿ ಭಕ್ತರು ಭಾಗವಹಿಸಿದ್ದರು. ಪವಿತ್ರ ಮಕರ ಜ್ಯೋತಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಯಾತ್ರಿಕರು ಈ ಆಚರಣೆಗೆ ಧಾವಿಸಿದರು. ಪವಿತ್ರ ಜ್ಯೋತಿಯನ್ನು ಬೆಳಗಿಸುವ ಸಾಂಪ್ರದಾಯಿಕ ಸ್ಥಳವಾದ ಪೊನ್ನಂಬಲಮೇಡು ಬೆಟ್ಟದ ಮೇಲಿರುವ ಮಕರ ಜ್ಯೋತಿಯನ್ನು ಕಣ್ತುಂಬಿಕೊಂಡರು.
ಶಬರಿಮಲೆ, ಜನವರಿ 14: ಪ್ರತಿ ವರ್ಷ ಲಕ್ಷಾಂತರ ಭಕ್ತರು ಶಬರಿಮಲೆಯ (Sabarimala) ಪೊನ್ನಂಬಲಮೇಡು ಬೆಟ್ಟದಲ್ಲಿ ಕಾಣುವ ಪವಿತ್ರವಾದ ಮಕರ ಜ್ಯೋತಿಯನ್ನು ವೀಕ್ಷಿಸಲು ಕಾಯುತ್ತಿರುತ್ತಾರೆ. ಇಂದು ಮಳೆಯ ಆತಂಕದ ನಡುವೆಯೇ ಮಕರ ಜ್ಯೋತಿಯ ದರ್ಶನಕ್ಕಾಗಿ ಭಕ್ತರು ಕಾಯುತ್ತಿದ್ದರು. ಕೊನೆಗೂ ಇಂದು ಸಂಜೆ 6.45ಕ್ಕೆ ಶಬರಿಮಲೆಯಿಂದ 8 ಕಿ.ಮೀ. ದೂರದಲ್ಲಿರುವ ಪೊನ್ನಂಬಲಮೇಡು ಬೆಟ್ಟದಲ್ಲಿ ಮಕರ ಜ್ಯೋತಿಯ ದರ್ಶನವಾಗಿದೆ.
ಅಯ್ಯಪ್ಪ ಸ್ವಾಮಿ ಭಕ್ತರು ಕೈಜೋಡಿಸಿ, ಸ್ವಾಮಿ ಶರಣಂ ಅಯ್ಯಪ್ಪ ಎಂದು ಪಠಿಸುತ್ತಾ ಮಕರ ಜ್ಯೋತಿಯನ್ನು ವೀಕ್ಷಿಸಿದರು. ಈ ವೇಳೆ ನಕ್ಷತ್ರವು ಆಕಾಶದಲ್ಲಿ ಬೆಳಗಿ ಭಕ್ತರಿಗೆ ಆಶೀರ್ವಾದವನ್ನು ತಂದಿತು. ಆಕಾಶದಲ್ಲಿ ಬೇರೆ ಯಾವುದೇ ನಕ್ಷತ್ರಗಳಿಲ್ಲದೆ ಉತ್ರಮ ನಕ್ಷತ್ರದ ದರ್ಶನವನ್ನು ಪಡೆದ ಭಕ್ತರು ಧನ್ಯರಾದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Jan 14, 2026 07:20 PM