ಸಿದ್ದರಾಮಯ್ಯ ಮತ್ತು ಶಿವಕುಮಾರ್ ಸಮ್ಮುಖ ಕಾಂಗ್ರೆಸ್ ಪಕ್ಷ ಸೇರಿದ ಮೂವರು ಜೆಡಿಎಸ್ ನಾಯಕರು
ಜೆಡಿಎಸ್ ಪಕ್ಷದ ಮೂವರು ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಪ್ರಮುಖ ನಾಯಕರು ಪಕ್ಷ ಸೇರಲಿದ್ದಾರೆ ಎಂದು ನಿನ್ನೆ ಶಿವಕುಮಾರ್ ಹೇಳಿದ್ದರು, ಆದರೆ ಸೇರಿದವರು ಮಾಜಿ ಶಾಸಕರು. ನಾಯಕರು ಯಾವುದೇ ಪಕ್ಷದವರಾಗಿರಲಿ, ಜನರಿಗೆ ಬೇಡವಾದ ಬಳಿಕವೇ ಮಾಜಿಗಳಾಗೋದು!
ಬೆಂಗಳೂರು: ಅತ್ತ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿವೈ ವಿಜಯೇಂದ್ರರ ಪದಗ್ರಹಣ ಸಮಾರಂಭ ಅದ್ದೂರಿಯಿಂದ ನಡೆದರೆ ಇತ್ತ ಕೆಪಿಸಿಸಿ ಕಚೇರಿಯಲ್ಲಿ (KPCC office) ಜೆಡಿಎಸ್ ಪಕ್ಷದ ಮೂವರು ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಡಿಸಿ ಗೌರಿಶಂಕರ (DC Gourishankar), ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಆರ್ ಮಂಜುನಾಥ (R Manjunath) ಹಾಗೂ ಬೊಮ್ಮನಹಳ್ಳಿ ಕ್ಷೇತ್ರದ ನಾಯಕ ಮತ್ತು 2018 ರಲ್ಲಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಟಿ ಆರ್ ಬಸವರಾಜ (TR Basavaraj) ತಮ್ಮ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷ ಸೇರಿದರು. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಪಕ್ಷದ ಶಾಲು ಹೊದಿಸಿ ಮತ್ತು ಧ್ವಜವನ್ನು ನೀಡಿ ಮೂವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ವೇದಿಕೆಯ ಮೇಲೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರನ್ನು ಸಹ ನೋಡಬಹುದು. ಪ್ರಮುಖ ನಾಯಕರು ಪಕ್ಷ ಸೇರಲಿದ್ದಾರೆ ಎಂದು ನಿನ್ನೆ ಶಿವಕುಮಾರ್ ಹೇಳಿದ್ದರು, ಆದರೆ ಸೇರಿದವರು ಮಾಜಿ ಶಾಸಕರು. ನಾಯಕರು ಯಾವುದೇ ಪಕ್ಷದವರಾಗಿರಲಿ, ಜನರಿಗೆ ಬೇಡವಾದ ಬಳಿಕವೇ ಮಾಜಿಗಳಾಗೋದು!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ