ಪೂರ್ಣಾವಧಿಗೆ ನೀವೇ ಮುಖ್ಯಮಂತ್ರಿಯಾ ಅಂತ ಕೇಳಿದ ಪ್ರಶ್ನೆಯನ್ನು ಸಿದ್ದರಾಮಯ್ಯ ಚಾಕ್ಯಚಕ್ಯತೆಯಿಂದ ತೇಲಿಸಿಬಿಟ್ಟರು!

ಪೂರ್ಣಾವಧಿಗೆ ನೀವೇ ಮುಖ್ಯಮಂತ್ರಿಯಾ ಅಂತ ಕೇಳಿದ ಪ್ರಶ್ನೆಯನ್ನು ಸಿದ್ದರಾಮಯ್ಯ ಚಾಕ್ಯಚಕ್ಯತೆಯಿಂದ ತೇಲಿಸಿಬಿಟ್ಟರು!

ಅರುಣ್​ ಕುಮಾರ್​ ಬೆಳ್ಳಿ
|

Updated on:Nov 02, 2023 | 4:17 PM

ಅಲ್ಲಾ ಸಾರ್ ನೀವು ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿರುತ್ತೀರಾ ಅಥವಾ ಎರಡೂವರೆ ವರ್ಷಗಳ ಬಳಿಕ ಬೇರೆಯವರು ಬರುತ್ತಾರಾ ಅಂತ ಪತ್ರಕರ್ತರೊಬ್ಬರು ಕೇಳಿದಾಗ, ಎರಡೂವರೆ ವರ್ಷಗಳ ಬಳಿಕ ಸಿಎಂ ಬದಲಾವಣೆ ಅಂತ ನಿನಗೆ ಯಾರಾದರೂ ಹೇಳಿದ್ದಾರಾ? ಸುಂಸುಮ್ನೆ ಏನೆಲ್ಲ ಹುಟ್ಟಿಸಿಕೊಂಡು ಹೇಳ್ತೀರಲ್ಲ ಅಂತ ಹೇಳುತ್ತಾ ವಿಷಯವನ್ನೇ ತೇಲಿಸಿಬಿಡುತ್ತಾರೆ!

ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಟ್ರಿಕ್ಕಿ ಪ್ರಶ್ನೆಗಳನ್ನು ಟ್ರಿಕ್ಕಿಯಾಗೇ ಉತ್ತರ ನೀಡುತ್ತಾರೆ. ಇಂದು ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಸತೀಶ್ ಜಾರಕಿಹೊಳಿ (Satish Jarkiholi) ದುಬೈ ಪ್ರವಾಸದ (Dubai trip) ಬಗ್ಗೆ ಕೇಳಿದಾಗ, ಅವರು ತಮ್ಮ ಖರ್ಚಿನಲ್ಲಿ ಹೋಗುತ್ತಿದ್ದಾರೆ, ಸರ್ಕಾರದಿಂದ ಯಾರನ್ನೂ ಕಳಿಸುತ್ತಿಲ್ಲ ಎಂದರು. ನಂತರ ಐದು ವರ್ಷಗಳ ಕಾಲ ನೀವೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೀರಾ ಅಂತ ಕೇಳಿದರೆ, ಡಿಪ್ಲೊಮ್ಯಾಟಿಕ್ ಆಗಿ ಉತ್ತರಿಸಿದ ಅವರು ಜನ ನಮ್ಮನ್ನು 5-ವರ್ಷದ ಅವಧಿಗೆ ಆರಿಸಿ ಕಳಿಸಿದ್ದಾರೆ, ಅಲ್ಲಿಯವರೆಗೆ ಸರ್ಕಾರ ನಡೆಸುತ್ತೇವೆ ಮತ್ತು ಚುನಾವಣೆಯಲ್ಲಿ ಪುನಃ ಗೆದ್ದು 5 ವರ್ಷಗಳ ಕಾಲ ಅಧಿಕಾರದಲ್ಲಿ ಮುಂದುವರಿಯುತ್ತೇವೆ ಅಂತ ಹೇಳಿದರು. ಅಲ್ಲಾ ಸಾರ್ ನೀವು ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿರುತ್ತೀರಾ ಅಥವಾ ಎರಡೂವರೆ ವರ್ಷಗಳ ಬಳಿಕ ಬೇರೆಯವರು ಬರುತ್ತಾರಾ ಅಂತ ಪತ್ರಕರ್ತರೊಬ್ಬರು ಕೇಳಿದಾಗ, ಎರಡೂವರೆ ವರ್ಷಗಳ ಬಳಿಕ ಸಿಎಂ ಬದಲಾವಣೆ ಅಂತ ನಿನಗೆ ಯಾರಾದರೂ ಹೇಳಿದ್ದಾರಾ? ಸುಂಸುಮ್ನೆ ಏನೆಲ್ಲ ಹುಟ್ಟಿಸಿಕೊಂಡು ಹೇಳ್ತೀರಲ್ಲ ಅಂತ ಹೇಳುತ್ತಾ ವಿಷಯವನ್ನೇ ತೇಲಿಸಿಬಿಡುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 02, 2023 04:17 PM