Loading video

ಬಳ್ಳಾರಿ ಕ್ಷೇತ್ರದಿಂದ ಮೂರು ಹೆಸರುಗಳನ್ನು ರಾಷ್ಟ್ರೀಯ ನಾಯಕರಿಗೆ ಕಳಿಸಲಾಗಿದೆ, ಅದರಲ್ಲಿ ನನ್ನ ಹೆಸರೂ ಇದೆ: ಬಿ ಶ್ರೀರಾಮುಲು

Updated on: Mar 11, 2024 | 6:02 PM

ಲೋಕಸಭಾ ಚುನಾವಣೆಗೆ ಬಳ್ಳಾರಿ ಕ್ಷೇತ್ರದ ಟಿಕೆಟ್ ನಿಮಗೆ ಸಿಗಲಿದೆಯೇ ಅಂತ ಕೇಳಿದಾಗ ಅವರು, ವಿಷಯ ಹಾಗಲ್ಲ; ಬಳ್ಳಾರಿಯಿಂದ ಮೂರು ಹೆಸರುಗಳನ್ನು ಕಳಿಸಲಾಗಿದೆ ಅದರಲ್ಲಿ ತನ್ನದೂ ಹೆಸರು ಸೇರಿದೆ, ಟಿಕೆಟ್ ಸಿಗುತ್ತೋ ಬಿಡುತ್ತೋ ಸೆಕಂಡರಿ, ಅದು ಯಾರಿಗೇ ಸಿಕ್ಕರೂ ಪಕ್ಷಕ್ಕಾಗಿ ಮತ್ತು ದೇಶಕ್ಕಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ರಾಯಚೂರು: ಸಂವಿಧಾನ ಬದಲಾಯಿಸುತ್ತೇವೆ ಅಂತ ಸಂಸದ ಅನಂತಕುಮಾರ್ ಹೆಗಡೆ ಹೇಳಿದ್ದು ಅವರ ವೈಯಕ್ತಿಕ ವಿಚಾರವಾಗಿರುವುದರಿಂದ ಅದರಿಂದ ಪಕ್ಷಕ್ಕೆ ಹಾನಿಯಾಗುವುದಿಲ್ಲ ಎಂದು ಮಾಜಿ ಶಾಸಕ ಬಿ ಶ್ರೀರಾಮುಲು (B Sriramulu) ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶ್ರೀರಾಮುಲು, ಹೆಗಡೆಯವರ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ರಾಜ್ಯದ ಮುಖ್ಯಮಂತ್ತಿ ಸಿದ್ದರಾಮಯ್ಯನವರು (Siddaramaiah) ಜನರ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ, ಯಾಕೆಂದರೆ ದೇಶದ ಪ್ರಧಾನ ಮಂತ್ರಿಯಾಗಿರುವ ನರೇಂದ್ರ ಮೋದಿಯವರು (PM Narendra Modi) ಸಂವಿಧಾನ ಮತ್ತು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಎಷ್ಟು ಗೌರವಿಸುತ್ತಾರೆ ಅಂತ ಎಲ್ಲರಿಗೂ ಗೊತ್ತಿದೆ, ಬಿಜೆಪಿ ನಾಯಕರಿಗೆ ಸಂವಿಧಾನವು ಭಗವದ್ಗೀತೆಯಷ್ಟೇ ಪವಿತ್ರವಾಗಿದೆ ಎಂದು ಶ್ರೀ ರಾಮುಲು ಹೇಳಿದರು. ಲೋಕಸಭಾ ಚುನಾವಣೆಗೆ ಬಳ್ಳಾರಿ ಕ್ಷೇತ್ರದ ಟಿಕೆಟ್ ನಿಮಗೆ ಸಿಗಲಿದೆಯೇ ಅಂತ ಕೇಳಿದಾಗ ಅವರು, ವಿಷಯ ಹಾಗಲ್ಲ; ಬಳ್ಳಾರಿಯಿಂದ ಮೂರು ಹೆಸರುಗಳನ್ನು ಕಳಿಸಲಾಗಿದೆ ಅದರಲ್ಲಿ ತನ್ನದೂ ಹೆಸರು ಸೇರಿದೆ, ಟಿಕೆಟ್ ಸಿಗುತ್ತೋ ಬಿಡುತ್ತೋ ಸೆಕಂಡರಿ, ಅದು ಯಾರಿಗೇ ಸಿಕ್ಕರೂ ಪಕ್ಷಕ್ಕಾಗಿ ಮತ್ತು ದೇಶಕ್ಕಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸಂವಿಧಾನ ಬದಲಾವಣೆ ಹೇಳಿಕೆ: ಮುಜುಗರ ತಾಳಲಾರದೇ ಮಾಧ್ಯಮಗಳ ವಿರುದ್ಧ ನಾಲಗೆ ಹರಿಬಿಟ್ಟ ಅನಂತಕುಮಾರ್ ಹೆಗಡೆ