ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ನಡುವೆ ಏರ್ಪಟ್ಟಿರುವ ಮೈತ್ರಿಯಿಂದ ಎರಡೂ ಪಕ್ಷಗಳಿಗೆ ಲಾಭ: ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ
ಮಂಡ್ಯ ಕ್ಷೇತ್ರದ ಬಗ್ಗೆ ನಿರ್ದಿಷ್ಟವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ, ಟಿಕೆಟ್ ಸುಮಲತಾ ಅಂಬರೀಶ್ ಅವರಿಗೆ ಕೊಡಬೇಕೋ ಅಥವಾ ಜೆಡಿಎಸ್ ಗೆ ಬಿಟ್ಟುಕೊಡಬೇಕೋ ಅನ್ನೋದು ಇವತ್ತು ಸಾಯಂಕಾಲ ತೀರ್ಮಾನವಾಗಲಿದೆ, ಯಾವುದನ್ನೂ ತಾನು ಊಹಿಸಿ ಹೇಳಲಾರೆ ಎಂದರು.
ಹುಬ್ಬಳ್ಳಿ: ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಲೋಕಸಭಾ ಚುನಾವಣೆಗಾಗಿ (Lok Sabha polls) ಏರ್ಪಟ್ಟಿರುವ ಮೈತ್ರಿಯಿಂದ ಎರಡೂ ಪಕ್ಷ ಪಕ್ಷಗಳಿಗೆ ಲಾಭವಿದೆ, ಜೆಡಿಎಸ್ ಪ್ರಾಬಲ್ಯ ಹೆಚ್ಚಿರುವ ಕ್ಷೇತ್ರಗಳಲ್ಲಿ ಬಿಜೆಪಿ ತನ್ನದೇ ಆದ ವೋಟ್ ಶೇರ್ ಹೊಂದಿದೆ ಮತ್ತು ಬಿಜೆಪಿ ಬಲಿಷ್ಠವಾಗಿರುವ ಕ್ಷೇತ್ರಗಳಲ್ಲಿ ಜೆಡಿಎಸ್ ಸಹ ಮತಗಳನ್ನು ಹೊಂದಿದೆ, ಹಾಗಾಗಿ ಬಹುಪಾಲು ವೋಟುಗಳು ತಮ್ಮ ಮೈತ್ರಿಗೆ ಸಿಗಲಿರುವುದರಿಂದ ಎಲ್ಲ 28 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಹೇಳಿದರು. ಜೆಡಿಎಸ್ ಪಕ್ಷಕ್ಕೆ ಯಾವ ಕ್ಷೇತ್ರಗಳನ್ನು ಬಿಟ್ಟುಕೊಡಬೇಕೆಂದು ಇನ್ನೂ ತೀರ್ಮಾನವಾಗಿಲ್ಲ, ಇಂದು ಸಂಜೆ ರಾಷ್ಟ್ರೀಯ ನಾಯಕರು ಸಭೆ ನಡೆಸಲಿದ್ದಾರೆ ಮತ್ತು ಸೀಟು ಹೊಂದಾಣಿಕೆ ಸಮಗ್ರ ಚಿತ್ರಣ ಸಭೆಯ ಬಳಿಕ ಸಿಗಲಿದೆ ಎಂದು ಜೋಶಿ ಹೇಳಿದರು. ಮಂಡ್ಯ ಕ್ಷೇತ್ರದ ಬಗ್ಗೆ ನಿರ್ದಿಷ್ಟವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ, ಟಿಕೆಟ್ ಸುಮಲತಾ ಅಂಬರೀಶ್ (Sumalatha Ambareesh) ಅವರಿಗೆ ಕೊಡಬೇಕೋ ಅಥವಾ ಜೆಡಿಎಸ್ ಗೆ ಬಿಟ್ಟುಕೊಡಬೇಕೋ ಅನ್ನೋದು ಇವತ್ತು ಸಾಯಂಕಾಲ ತೀರ್ಮಾನವಾಗಲಿದೆ, ಯಾವುದನ್ನೂ ತಾನು ಊಹಿಸಿ ಹೇಳಲಾರೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಂಡ್ಯ ಕ್ಷೇತ್ರದ ಟಿಕೆಟ್ ಬಿಜೆಪಿ ವರಿಷ್ಠರು ತನಗೆ ಮಾತ್ರ ಮೀಸಲಿಟ್ಟಿದ್ದಾರೆ ಎನ್ನುವಂತಿದೆ ಸುಮಲತಾ ಅಂಬರೀಶ್ ಮಾತಿನ ವರಸೆ