ಲಂಚ ಸ್ವೀಕರಿಸುತ್ತಿದ್ದ ಬಳ್ಳಾರಿ ಕೇಂದ್ರ ಪುರಾತತ್ವ ಇಲಾಖೆಯ ಮೂವರು ಅಧಿಕಾರಿಗಳು ಸಿಬಿಐ ಬಲೆಗೆ
ಪುರಾತತ್ವ ಇಲಾಖೆಯಿಂದ ಎನ್ ಓ ಸಿ ನೀಡಲು ಅಧಿಕಾರಿಗಳು ರೂ. 1,50,000 ಗಳಿಗೆ ಬೇಡಿಕೆಯಿಟ್ಟಿದ್ದರು ಎಂದು ಸಾಮಾಜಿಕ ಹೋರಾಟಗಾರ ರಾಜಶೇಖರ್ ಮುಲಾಲಿ ಕೇಂದ್ರ ತನಿಖಾ ದಳಕ್ಕೆ ದೂರು ನೀಡಿದ್ದರು.
ಬಳ್ಳಾರಿ: ಭ್ರಷ್ಟಾಚಾರ (corruption) ನಮ್ಮ ವ್ಯವಸ್ಥೆಯಲ್ಲಿ ಅದೆಷ್ಟು ಆಳವಾಗಿ ಬೇರೂರಿದೆಯೆಂದರೆ ಅದನ್ನು ಕಿತ್ತೊಗೆಯುವುದು ಅಸಾಧ್ಯವೆನಿಸುತ್ತದೆ ಮಾರಾಯ್ರೇ. ಪುರಾತತ್ವ ಇಲಾಖೆ (Archeological department) ಕೇಂದ್ರ ಸರ್ಕಾರದ ಅಧೀನಕೊಳ್ಳಪಡುತ್ತದೆ. ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ಲಂಚ ತೆಗೆದುಕೊಳ್ಳುವುದಿಲ್ಲ ಎಂಬ ಭಾವನೆ ಜನಸಾಮಾನ್ಯರಲ್ಲಿದೆ. ಆದರೆ ಬಳ್ಳಾರಿಯಲ್ಲಿ ಪುರಾತತ್ವ ಇಲಾಖೆ ಕಚೇರಿಯ ಮುವರು ಅಧಿಕಾರಿಗಳು ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳನ್ನು ಪ್ರಶಾಂತ್ ರೆಡ್ಡಿ (Prashant Reddy), ಯೋಗೀಶ್ (Yogeesh), ಮೊಹ್ಮದ್ ಗೌಸ್ (Mohmmad Ghouse) ಎಂದು ಗುರುತಿಸಲಾಗಿದೆ. ಪುರಾತತ್ವ ಇಲಾಖೆಯಿಂದ ಎನ್ ಓ ಸಿ ನೀಡಲು ಅಧಿಕಾರಿಗಳು ರೂ. 1,50,000 ಗಳಿಗೆ ಬೇಡಿಕೆಯಿಟ್ಟಿದ್ದರು ಎಂದು ಸಾಮಾಜಿಕ ಹೋರಾಟಗಾರ ರಾಜಶೇಖರ್ ಮುಲಾಲಿ ಕೇಂದ್ರ ತನಿಖಾ ದಳಕ್ಕೆ ದೂರು ನೀಡಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

