ಶಕ್ತಿ ಯೋಜನೆ: ಒಂದೇ ಆಧಾರ್ ಕಾರ್ಡಲ್ಲಿ ಮೂವರು ಪ್ರಯಾಣಿಸಿ ಸಿಕ್ಹಾಕಿಕೊಂಡ ಮಹಿಳೆಯರು!

ಅರುಣ್​ ಕುಮಾರ್​ ಬೆಳ್ಳಿ

Updated on: Oct 21, 2024 | 6:13 PM

ಸರ್ಕಾರದ ಗ್ಯಾರಂಟಿ ಯೋಜನೆಗಳು ದುರುಪಯೋಗುವಾಗುತ್ತಿರೋದು, ಜನ ದುರ್ಬಳಕೆ ಮಾಡಿಕೊಳ್ಳುತ್ತಿರೋದು ಹೊಸತೇನಲ್ಲ. ಶಕ್ತಿ ಯೋಜನೆಯಡಿ ಮಹಿಳೆಯರು ಬಸ್ಸಲ್ಲಿ ಉಚಿತವಾಗಿ ಪ್ರಯಾಣಿಸಬೇಕಾದರೆ ಗುರುತಿನ ಚೀಟಿಯಾಗಿ ಆಧಾರ್ ಕಾರ್ಡ್ ಕಂಡಕ್ಟರ್ ಗೆ ತೋರಿಸಿದರೆ ಸಾಕು, ಈ ಮಹಿಳೆಯರಲ್ಲಿ ಅದೂ ಕೂಡ ಇಲ್ಲ ಅಂದರೆ ಹೇಗೆ ಸ್ವಾಮಿ?

ಬಾಗಲಕೋಟೆ: ಇದು ಜಿಲ್ಲೆಯ ಲೋಕಾಪುರದಲ್ಲಿ ನಡೆದಿರುವ ಘಟನೆ. ವಿಷಯವೇನೆಂದರೆ, ಮೂವರು ಬುರ್ಖಾಧಾರಿ ಮಹಿಳೆಯರು ಒಂದೇ ಆಧಾರ್​ ಕಾರ್ಡ್​ ಬಳಸಿ ಕೆಎಸ್ಸಾರ್ಟಿಸಿ ಬಸ್ಸಲ್ಲಿ ಪ್ರಯಾಣ ಮಾಡುವಾಗ ಟಿಕೆಟ್ ಚೆಕ್ ಮಾಡುವ ಅಧಿಕಾರಿಯ ಕೈಯಲ್ಲಿ ಸಿಕ್ಹಾಕಿಕೊಂಡಿದ್ದಾರೆ. ಐದೈದು ನೂರು ರೂ ದಂಡ ಕಟ್ಟಿ ಇಲ್ಲದಿದ್ದರೆ ಪೊಲೀಸ್ ಸ್ಟೇಷನ್ ಗೆ ನಡೆಯಿರಿ ಎಂದು ಅಧಿಕಾರಿ ಹೇಳುತ್ತಿದ್ದಾರೆ. ನಮ್ಮಲ್ಲಿ ಅಷ್ಟೆಲ್ಲ ಹಣವಿಲ್ಲ ದಯವಿಟ್ಟು ಬಿಟ್ಟುಬಿಡಿ ಎಂದು ಮಹಿಳೆಯರು ಗೋಗರೆಯುತ್ತಿದ್ದಾರೆ. ಮಹಿಳೆಯರನ್ನು ಬಸ್ಸಿಂದ ಕೆಳಗಿಳಿಸಿದರೆಂಬ ಮಾಹಿತಿ ಇದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಗ್ಯಾರಂಟಿ ಯೋಜನೆಯಿಂದ ಹಣ ಕೊರತೆ? ಮುರ್ಡೇಶ್ವರ, ಗೋಕರ್ಣದ ಲೈಫ್ ಗಾರ್ಡ್ಸ್​ಗಳಿಗೆ ಕೊಟ್ಟಿಲ್ಲ ಮೂಲ ಸಲಕರಣೆ     

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.