ಅಂತ್ಯಸಂಸ್ಕಾರಕ್ಕೆ ಮುನ್ನ ನಡುವೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಮ್ಮುಖದಲ್ಲಿ ಸಂತೋಷ ಪಾಟೀಲ ಕುಟುಂಬಸ್ಥರ ಕಾದಾಟ

ಶವಯಾತ್ರೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಜನ ಕಿತ್ತಾಡುವುದನ್ನು ನೋಡಿ ಗಾಬರಿಗೊಂಡರು. ಅದಾಗಲೇ ಅತ್ತು ಬಸವಳಿದಿದ್ದ ಮಹಿಳೆಯೊಬ್ಬರು ‘ದಯಮಾಡಿ ಗದ್ಲಾ ಮಾಡ್ ಬ್ಯಾಡ್ರೇ ಯಪ್ಪಾ, ನಿಮ್ಗ ಕೈ ಮುಗ್ದ್ ಕೇಳ್ತೀನ್ರಿ ಯಪ್ಪಾ, ಸಂತೂಗ ಮಣ್ಣ್ ಮಾಡಾಕ ಬಿಡ್ರಿ’ ಅಂತ ಗೋಳಾಡಿದರು.

TV9kannada Web Team

| Edited By: Arun Belly

Apr 14, 2022 | 9:22 PM

ಬೆಳಗಾವಿ: ಎರಡು ದಿನಗಳ ಹಿಂದೆ ಉಡುಪಿಯಲ್ಲಿ ಆತ್ಮಹತ್ಯೆ ಮೂಲಕ ಸಾವಿಗೀಡಾದ ಗುತ್ತಿಗೆದಾರ ಸಂತೋಷ ಪಾಟೀಲ (Santosh Patil) ಅವರ ಅಂತ್ಯಕ್ರಿಯೆ ಗುರುವಾರ ಅವರ ಸ್ವಗ್ರಾಮ ಬಡಸದಲ್ಲಿ (Badasa) ನಡೆಯಿತು. ಆದರೆ ಅದು ಪೂರ್ಣಗೊಳ್ಳುವ ಮೊದಲು ಅವರು ಕುಟುಂಬಸ್ಥರಲ್ಲಿ ಎರಡು ಬಣಗಳು ಉಂಟಾಗಿ ಒಂದು ಅಹಿತಕರ (unpleasant) ಸನ್ನಿವೇಶ ಸೃಷ್ಟಿಯಾಗಿತ್ತು. ಸಂತೋಷ ಅವರ ದೇಹ ಬಡಸ ತಲುಪಿದ ಕೆಲವೇ ನಿಮಿಷಗಳ ಗಲಾಟೆ ಅರಂಭವಾಯಿತು. ಒಂದು ಬಣ ಸಂತೋಷ ಸಾವಿಗೆ ನ್ಯಾಯ ಸಿಗುವವರೆಗೆ ಅಂತ್ಯಸಂಸ್ಕಾರ ನಡೆಸುವುದು ಬೇಡ ಅಂತ ಪಟ್ಟು ಹಿಡಿದರೆ ಮತ್ತೊಂದು ಬಣ ಹಾಗೆಲ್ಲ ಮಾಡಲಾಗದು, ಮೊದಲು ಶವಸಂಸ್ಕಾರ ನೆರವೇರಿಸಿ ಅಮೇಲೆ ನ್ಯಾಯಕ್ಕಾಗಿ ಹೋರಾಡುವ ಎಂದು ಹೇಳಿತು. ಇದೇ ವಿಷಯದ ಮೇಲೆ ವಾದ ವಿವಾದ ಆರಂಭಗೊಂಡು ಅದು ತಳ್ಳಾಟ, ನೂಕಾಟ ಮತ್ತು ಕೊನೆಗೆ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು.

ಶವಯಾತ್ರೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಜನ ಕಿತ್ತಾಡುವುದನ್ನು ನೋಡಿ ಗಾಬರಿಗೊಂಡರು. ಅದಾಗಲೇ ಅತ್ತು ಬಸವಳಿದಿದ್ದ ಮಹಿಳೆಯೊಬ್ಬರು ‘ದಯಮಾಡಿ ಗದ್ಲಾ ಮಾಡ್ ಬ್ಯಾಡ್ರೇ ಯಪ್ಪಾ, ನಿಮ್ಗ ಕೈ ಮುಗ್ದ್ ಕೇಳ್ತೀನ್ರಿ ಯಪ್ಪಾ, ಸಂತೂಗ ಮಣ್ಣ್ ಮಾಡಾಕ ಬಿಡ್ರಿ’ ಅಂತ ಗೋಳಾಡಿದರು.

ಸಂತೋಷ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಹ ಜಗಳ ಶುರು ಹಚ್ಚಿಕೊಂಡಿದ್ದ ಬಣಗಳನ್ನು ಶಾಂತಗೊಳಿಸುವ ಪ್ರಯತ್ನ ಮಾಡಿದರು. ಅವರೊಂದಿಗೆ ಊರ ಜನ ಸಹ ಸೇರಿ ಸಂತೋಷ ಸಂಬಂಧಿಕರನ್ನು ಗದರಿ ಸುಮ್ಮನಾಗಿಸಿದ ಮೇಲೆ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಇದನ್ನೂ ಓದಿ:  ಸಂತೋಷ್‌ ಮನೆಗೆ ಸಚಿವ ನಿರಾಣಿ ಭೇಟಿ: ಪತ್ನಿಗೆ ನೌಕರಿ, ಕಾಮಗಾರಿ ಬಾಕಿ ಬಿಲ್ ಬಿಡುಗಡೆಗೆ ಸರ್ಕಾರದಿಂದ ಕ್ರಮದ ಭರವಸೆ

Follow us on

Click on your DTH Provider to Add TV9 Kannada