ಚಾಮರಾಜನಗರದಲ್ಲಿ ಹುಲಿ ಮರಿಗಳನ್ನು ಸ್ಪರ್ಶಿಸಿದ್ದಕ್ಕೆ ಎನ್​​ಜಿಓ ವಿರುದ್ಧ ಕ್ರಮಕ್ಕೆ ಆಗ್ರಹ

Updated By: ಭಾವನಾ ಹೆಗಡೆ

Updated on: Nov 04, 2025 | 12:13 PM

ಚಾಮರಾಜನಗರದ ಬೇಡುಗೊಳಿ ಎಸ್ಟೇಟ್‌ನಲ್ಲಿ ತಾಯಿಯಿಂದ ಬೇರ್ಪಟ್ಟ 3 ಹುಲಿ ಮರಿಗಳು ಪತ್ತೆಯಾಗಿವೆ. ಅವುಗಳನ್ನು ಸ್ಪರ್ಶಿಸಿ ವಿಡಿಯೋ ಮಾಡಿದ ಪ್ರಕರಣ ಅರಣ್ಯ ಕಾಯ್ದೆ 1972 ಉಲ್ಲಂಘನೆಯಾಗಿದೆ. ಮಾನವ ಸ್ಪರ್ಶದಿಂದ ತಾಯಿ ಹುಲಿ ಮರಿಗಳನ್ನು ತ್ಯಜಿಸುವ ಅಪಾಯವಿದೆ. ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಈ ಕುರಿತು ಅರಣ್ಯ ಸಚಿವರಿಗೆ ದೂರು ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ವನ್ಯಜೀವಿ ಸಂರಕ್ಷಣೆ ಅಗತ್ಯ.

ಚಾಮರಾಜನಗರ, ನವೆಂಬರ್ 4: ಚಾಮರಾಜನಗರ ಜಿಲ್ಲೆಯ ಪುಣಜನೂರು ಅರಣ್ಯ ವ್ಯಾಪ್ತಿಯ ಬೇಡುಗೊಳಿ ಎಸ್ಟೇಟ್‌ನಲ್ಲಿ ತಾಯಿಯಿಂದ ಬೇರ್ಪಟ್ಟ ಮೂರು ಹುಲಿ ಮರಿಗಳು ಅಕ್ಟೋಬರ್ 15ರಂದು ಪತ್ತೆಯಾಗಿದ್ದವು. ಈ ವೇಳೆ ಒಂದು NGOಕ್ಕೆ ಸೇರಿದ ಕೆಲವರು ಹುಲಿ ಮರಿಗಳನ್ನು ಕೈಯಲ್ಲಿ ಹಿಡಿದು ಸ್ಪರ್ಶಿಸಿ, ವೀಡಿಯೋ ಚಿತ್ರೀಕರಿಸಿದ್ದರು. ಆ ದೃಶ್ಯವನ್ನು ಎನ್‌ಜಿಒ ಒಂದು ತನ್ನ ಗ್ರೂಪ್‌ನಲ್ಲಿ ಹಂಚಿಕೊಂಡಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ, ವನ್ಯಜೀವಿಗಳನ್ನು ಸ್ಪರ್ಶಿಸುವುದು ಹಾಗೂ ಅವರೊಂದಿಗೆ ಫೋಟೋ–ವೀಡಿಯೋ ಮಾಡುವುದು ಕಾನೂನುಬಾಹಿರ. ಮನುಷ್ಯ ಸ್ಪರ್ಶವಾದ ನಂತರ ತಾಯಿ ಹುಲಿ ಮರಿಗಳನ್ನು ಸೇರಿಸಿಕೊಳ್ಳುವುದಿಲ್ಲ ಎಂಬ ಕಾರಣವನ್ನು ಉಲ್ಲೇಖಿಸಿ, ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಳ್ಳಿ ಈ ಕಾನೂನು ಉಲ್ಲಂಘನೆ ಕುರಿತು ಅರಣ್ಯ ಸಚಿವರಿಗೆ ಇಮೇಲ್ ಮತ್ತು ಪತ್ರದ ಮೂಲಕ ದೂರು ನೀಡಿ, ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published on: Nov 04, 2025 11:52 AM