ದೇವನಹಳ್ಳಿ ಬಳಿ ನಡೆಯುತ್ತಿದ್ದ ಬಾಲ್ಯವಿವಾಹವನ್ನು ತಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳು

Updated on: Jun 20, 2025 | 10:48 AM

ಬಾಲ್ಯ ವಿವಾಹ ಒಂದು ಸಾಮಾಜಿಕ ಪಿಡುಗು ಮತ್ತು ಅದನ್ನು ತಡೆಯಲು ದಶಕಗಳಿಂದ ಪ್ರಯತ್ನಗಳು ನಡೆಯುತ್ತಿದ್ದರೂ ಭಾರತೀಯರು ಇನ್ನೂ ಎಚ್ಚೆತ್ತುಕೊಂಡಿಲ್ಲ. ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ಪ್ರಕಾರ 18 ವರ್ಷ ತುಂಬದ ಯುವತಿಗೆ ಮದುವೆ ಮಾಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ವಿವಾಹದಲ್ಲಿ ಭಾಗಿಯಾಗುವವರು ಮತ್ತು ಪ್ರೋತ್ಸಾಹಿಸುವವರು ಸಹ ಶಿಕ್ಷೆ ಎದುರಿಸಬೇಕಾಗುತ್ತದೆ.

ದೇವನಹಳ್ಳಿ, ಜೂನ್ 20: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ದೇವನಹಳ್ಳಿ ಬೆಂಗಳೂರು ನಗರದಿಂದ (Bengaluru City) ಬಹಳ ದೂರವಿಲ್ಲ. ಆದಾಗ್ಯೂ ಜನರಿಗೆ ಕಾನೂನು ಮತ್ತು ನಿಯಮಗಳ ಬಗ್ಗೆ ಭಯವಿಲ್ಲ. ತಾಲೂಕಿನ ವಿಜಯಪುರ ಪಟ್ಟಣದಲ್ಲಿರುವ ಚನ್ನಪ್ಪ ಸುಬ್ಬಮ್ಮ ಕಲ್ಯಾಣ ಮಂಟಪದಲ್ಲಿ ನಿನ್ನೆ ಮದುವೆಯೊಂದು ನಡೆಯುತಿತ್ತು, ಅದರೆ ಇದು ಸಾಮಾನ್ಯ ವಧು-ವರ ನಡುವೆ ನಡೆಯುವ ವಿವಾಹವಾಗಿರಲಿಲ್ಲ. ವಧು ಅಪ್ರಾಪ್ತೆಯಾಗಿದ್ದು ಅವಳಿಗಿನ್ನೂ ಮದುವೆ ವಯಸ್ಸಾಗಿಲ್ಲ. ವಿಷಯ ಗೊತ್ತಾಗುತ್ತಿದ್ದಂತೆಯೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳು ದಾಳಿ ನಡೆಸಿ ಮದುವೆಯನ್ನು ನಿಲ್ಲಿಸಿದ್ದಾರೆ.

ಇದನ್ನೂ ಓದಿ:  ಸರ್ಜಾಪುರ: ಪೋಷಕರಿಗೆ ಹೇಳದೆ ಬಾಲಕಿಗೆ ಬಾಲ್ಯ ವಿವಾಹ ಮಾಡಿದ ದೊಡ್ಡಪ್ಪ; ಠಾಣೆ ಮೆಟ್ಟಿಲೇರಿದ ತಾಯಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ