ತಿರುಪತಿ ಲಡ್ಡುಗಳಿಗೆ ಶತಮಾನಗಳ ಇತಿಹಾಸವಿದೆ, ಪ್ರಸಾದದ ರೂಪದಲ್ಲಿ ಸಿಗುವ ಲಡ್ಡು ದೇವಸ್ಥಾನದ ಅಡುಗೆ ಕೋಣೆಯಲ್ಲಿ ತಯಾರಾಗುತ್ತದೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 03, 2021 | 6:17 PM

ಪ್ರತಿದಿನ ಬೃಹತ್ ಗಾತ್ರದ ಮೂರು ಲಕ್ಷ ಲಡ್ಡುಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ಹಾಗೆ ನೋಡಿದರೆ, ಮೊದಲೆಲ್ಲ ಬೆಟ್ಟದ ಕೆಳಗಿನ ತಿರುಪತಿ ಶಹರದಲ್ಲಿ ಅಂಗಡಿಗಳನ್ನು ಪ್ರಸಾದದ ಹೆಸರಲ್ಲಿ ಲೋಕಲ್ ಲಡ್ಡುಗಳನ್ನು ಮಾರಾಟ ಮಾಡಲಾಗುತಿತ್ತು.

ತಿರುಪತಿ ವೆಂಕಟೇಶ್ವರ ದೇವಾಸ್ಥಾನ ಕೇವಲ ದಕ್ಷಿಣ ಭಾರತ ಮಾತ್ರವಲ್ಲ, ಇಡೀ ಬಾರತದಲ್ಲೇ ಅದು ಪ್ರಸಿದ್ಧ ಪುಣ್ಯಕ್ಷೇತ್ರ. ಆಂಧ್ರ ಪ್ರದೇಶದ ಚಿತ್ತೂರ್ ಜಿಲೆಯಲ್ಲಿನ ತಿರುಮಲ ಬೆಟ್ಟದ ಮೇಲಿರುವ ತಿರುಪತಿ ದೇನಸ್ಥಾನಕ್ಕೆ ಪ್ರತಿದಿನ ಲಕ್ಷಾಂತರ ಭಕ್ತಾದಿಗಳು ಭೇಟಿ ನೀಡಿ ವೆಂಕಟೇಶ್ವರನ ದರ್ಶನ ಪಡೆದು ಪ್ರಸಾದವನ್ನು ಸ್ವೀಕರಿಸುತ್ತಾರೆ. ಪ್ರಸಾದದ ರೂಪದಲ್ಲಿ ತಿರುಪತಿ ತಿರುಮಲ ದೇವಸ್ಥಾನಂ ಟ್ರಸ್ಟ್ (ಟಿಟಿಡಿ) ಲಡ್ಡುಗಳನ್ನು ಭಕ್ತರಿಗೆ ನೀಡುತ್ತದೆ. ಅಂದಹಾಗೆ, ಇಲ್ಲಿನ ಲಡ್ಡುಗಳಿಗೆ ಶತಮಾನಗಳ ಇತಹಾಸವಿದೆ ಅಂದರೆ ನೀವು ನಂಬುತ್ತೀರಾ? ಟಿ ಟಿ ಡಿ ದಾಖಲೆಗಳ ಪ್ರಕಾರ ಭಕ್ತರಿಗೆ ಲಡ್ಡುವನ್ನು ಪ್ರಸಾದವಾಗಿ ನೀಡುವ ಸಂಪ್ರದಾಯ ಶುರುವಾಗಿದ್ದು ಆಗಸ್ಟ್ 2, 1715 ರಂದು! ಹೌದು ಮುನ್ನೂರಕ್ಕಿಂತ ಹೆಚ್ಚು ವರ್ಷಗಳ ಹಿಂದೆ. ಅಸಲಿಗೆ ಈ ಲಡ್ಡುಗಳನ್ನು ಶ್ರೀವಾರಿ ಲಡ್ಡು ಅಂತ ಹೇಳುತ್ತಾರೆ. ವೆಂಕಟೇಶ್ವರನ ದರ್ಶನವನ್ನು ಅತ್ಯಂತ ನಿಷ್ಠೆ ಮತ್ತು ಭಕ್ತಿ ಭಾವದಿಂದ ಪಡೆಯುವ ಜನ ಅದೇ ಆಸ್ಥೆ ಮತ್ತು ಪೂಜ್ಯಭಾವದಿಂದ ಪ್ರಸಾದವನ್ನೂ ಸ್ವೀಕರಿಸುತ್ತಾರೆ. ಬೆಟ್ಟಕ್ಕೆ ಬಂದ ಭಕ್ತಗಣರಿಗೆಲ್ಲ ಪ್ರಸಾದ ಸಿಗುವಂಥ ವ್ಯವಸ್ಥೆಯನ್ನು ಟಿ ಟಿ ಡಿ ಮಾಡಿದೆ.

ಪ್ರತಿದಿನ ಬೃಹತ್ ಗಾತ್ರದ ಮೂರು ಲಕ್ಷ ಲಡ್ಡುಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ಹಾಗೆ ನೋಡಿದರೆ, ಮೊದಲೆಲ್ಲ ಬೆಟ್ಟದ ಕೆಳಗಿನ ತಿರುಪತಿ ಶಹರದಲ್ಲಿ ಅಂಗಡಿಗಳನ್ನು ಪ್ರಸಾದದ ಹೆಸರಲ್ಲಿ ಲೋಕಲ್ ಲಡ್ಡುಗಳನ್ನು ಮಾರಾಟ ಮಾಡಲಾಗುತಿತ್ತು. ಆದರೆ ಲಡ್ಡುಗಳ ಕಾಳಸಂತೆ ತಪ್ಪಿಸಲು ಟಿ ಟಿ ಡಿ 2008 ರಿಂದ ಲಡ್ಡುಗಳ ಮಾರಾಟವನ್ನು ನಿಷೇಧಿಸಿತು.

2009 ರಲ್ಲಿ ತಿರುಪತಿ ಲಡ್ಡುಗಳಿಗೆ ಜಿಯಾಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್ ಸಿಕ್ಕಿದೆ. ಅದರರ್ಥ ಲಡ್ಡುಗಳನ್ನು ತಯಾರು ಮಾಡಿ ಮಾರಾಟ ಮಾಡುವ ಆಧಿಕಾರ ಟಿ ಟಿ ಡಿಗಿದೆ. ಪ್ರಸಾದದ ಲಡ್ಡುಗಳನ್ನು ಪೋಟು ಎಂದು ಕರೆಸಿಕೊಳ್ಳುವ ದೇವಸ್ಥಾನದ ಅಡುಗೆಕೋಣೆಯಲ್ಲೇ ಶುದ್ಧ ತುಪ್ಪದಲ್ಲಿ ತಯಾರಿಸಲಾಗುತ್ತದೆ.

ಇದನ್ನೂ ಓದಿ: Telegram New Update: ಇನ್ಮುಂದೆ ಟೆಲಿಗ್ರಾಮ್​ನಲ್ಲಿ ಒಂದೇ ಸಲ 1000 ಮಂದಿಗೆ ವಿಡಿಯೋ ಕರೆ ಮಾಡ್ಬಹುದು