Telegram New Update: ಇನ್ಮುಂದೆ ಟೆಲಿಗ್ರಾಮ್​ನಲ್ಲಿ ಒಂದೇ ಸಲ 1000 ಮಂದಿಗೆ ವಿಡಿಯೋ ಕರೆ ಮಾಡ್ಬಹುದು

ಇನ್ನು ವೀಡಿಯೋ ಕರೆಗಳಿಗೆ ಧ್ವನಿಯೊಂದಿಗೆ ಸ್ಕ್ರೀನ್ ಶೇರಿಂಗ್ ಕೂಡ ಮಾಡಬಹುದು. ಈ ಎಲ್ಲಾ ಆಯ್ಕೆಗಳು ಲಭ್ಯವಾಗಬೇಕಿದ್ದರೆ ಟೆಲಿಗ್ರಾಮ್​ನ ಇತ್ತೀಚಿನ ಅಪ್​ಡೇಟ್ ಹೊಂದಿರಬೇಕಾಗುತ್ತದೆ.

Telegram New Update: ಇನ್ಮುಂದೆ ಟೆಲಿಗ್ರಾಮ್​ನಲ್ಲಿ ಒಂದೇ ಸಲ 1000 ಮಂದಿಗೆ ವಿಡಿಯೋ ಕರೆ ಮಾಡ್ಬಹುದು
telegram
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 02, 2021 | 2:58 PM

ಜನಪ್ರಿಯ ಮೆಸೇಜಿಂಗ್ ಆ್ಯಪ್ ಟೆಲಿಗ್ರಾಮ್ ತನ್ನ ಪ್ಲಾಟ್‌ಫಾರ್ಮ್​ನಲ್ಲಿ ಹೊಸ ಅಪ್‌ಡೇಟ್ ಅನ್ನು ಪರಿಚಯಿಸಿದೆ. ಈ ಅಪ್​ಡೇಟ್​ನೊಂದಿಗೆ ಹಲವು ಹೊಸ ಫೀಚರ್‌ಗಳು ಬಳಕೆದಾರರಿಗೆ ಲಭ್ಯವಾಗಲಿದೆ. ಹೊಸ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ ಇನ್ಮುಂದೆ ನಿಮ್ಮ ಖಾತೆಯಲ್ಲಿರುವ 1000 ಗೆಳೆಯರಿಗೆ ಗ್ರೂಪ್​ ವೀಡಿಯೊ ಕರೆ ಮಾಡಬಹುದು. ಅಂದರೆ ಫಾಲೋವರ್ಸ್ ಪಟ್ಟಿಯಲ್ಲಿರುವ 1000 ಮಂದಿಯನ್ನು ಏಕಕಾಲಕ್ಕೆ ಒಂದೇ ವಿಡಿಯೋ ಕಾಲ್​ ಮೂಲಕ ಸಂಪರ್ಕಿಸಬಹುದು.

ಇದರ ಜೊತೆಗೆ ಟೆಲಿಗ್ರಾಮ್‌ ಬಳಕೆದಾರರು ಸ್ನ್ಯಾಪ್‌ಚಾಟ್‌ನಂತಹ ಉತ್ತಮ ಗುಣಮಟ್ಟದ ‘ವಿಡಿಯೋ ಸಂದೇಶಗಳನ್ನು’ ರೆಕಾರ್ಡ್ ಮಾಡಬಹುದು. ಅಲ್ಲದೆ, ಬಳಕೆದಾರರು 0.5 ಅಥವಾ 2x ವೇಗದಲ್ಲಿ ಸಾಮಾನ್ಯ ವೀಡಿಯೊಗಳನ್ನು ವೀಕ್ಷಿಸಬಹುದು. ಈ ಹೊಸ ಆಯ್ಕೆಯಿಂದ ಇನ್ಮುಂದೆ ಇದರಿಂದ ದೀರ್ಘಾವಧಿಯ ವಿಡಿಯೋಗಳನ್ನು ಕೆಲವೇ ನಿಮಿಷಗಳಲ್ಲಿ ನೋಡಿ ಮುಗಿಸಬಹುದು.

ಇನ್ನು ವೀಡಿಯೋ ಕರೆಗಳಿಗೆ ಧ್ವನಿಯೊಂದಿಗೆ ಸ್ಕ್ರೀನ್ ಶೇರಿಂಗ್ ಕೂಡ ಮಾಡಬಹುದು. ಈ ಎಲ್ಲಾ ಆಯ್ಕೆಗಳು ಲಭ್ಯವಾಗಬೇಕಿದ್ದರೆ ಟೆಲಿಗ್ರಾಮ್​ನ ಇತ್ತೀಚಿನ ಅಪ್​ಡೇಟ್ ಹೊಂದಿರಬೇಕಾಗುತ್ತದೆ. ಇಲ್ಲಿ ಮತ್ತೊಂದು ವಿಶೇಷ ಎಂದರೆ ನೀವು ವೀಡಿಯೊ ಕರೆಗಳನ್ನು ಮಾಡುವಾಗ 30 ಜನರನ್ನು ಡಿಸ್​ಪ್ಲೇನಲ್ಲಿ ವೀಕ್ಷಿಸಬಹುದು. ಇದರ ಜೊತೆಗೆ ವೀಡಿಯೋ ಚಾಟ್​ನಲ್ಲಿ ಒಳಗೊಂಡಿರುವ ಸಾವಿರಾರು ಮಂದಿಯನ್ನು ಸ್ಟ್ರೀಮಿಂಗ್ ಮೂಲಕ ವೀಕ್ಷಿಸಬಹುದಾಗಿದೆ.

ಬಳಕೆದಾರರು ಈ ಮಿನಿ ವಿಡಿಯೋ ಸಂದೇಶಗಳನ್ನು ರೆಸಲ್ಯೂಶನ್ ನಲ್ಲಿ ರೆಕಾರ್ಡ್ ಮಾಡಬಹುದು ಮತ್ತು ಕಳುಹಿಸಬಹುದು. ವೀಡಿಯೊ ಸಂದೇಶವನ್ನು ರೆಕಾರ್ಡ್ ಮಾಡಲು, ಧ್ವನಿ ಸಂದೇಶ ರೆಕಾರ್ಡಿಂಗ್‌ನಿಂದ ವೀಡಿಯೊಗೆ ಬದಲಾಯಿಸಲು ಸಂದೇಶ ಪಟ್ಟಿಯಲ್ಲಿರುವ ಮೈಕ್ರೊಫೋನ್ ಐಕಾನ್ ಅನ್ನು ಟ್ಯಾಪ್ ಮಾಡಿ. ರೆಕಾರ್ಡ್ ಮಾಡಲು ಒತ್ತಿ ಹಿಡಿದುಕೊಳ್ಳಿ, ನಂತರ ಹಿಂತಿರುಗಿ ಕ್ಯಾಮರಾ ಐಕಾನ್ ಟ್ಯಾಪ್ ಮಾಡಿ. ನೀವು ರೆಕಾರ್ಡ್ ಮಾಡುವಾಗ ನಿಮ್ಮ ಆಡಿಯೋ ಪ್ಲೇ ಆಗುತ್ತಿರುವುದನ್ನು ಟೆಲಿಗ್ರಾಮ್ ತಿಳಿಸಲಿದೆ. ಹಾಗೆಯೇ ನಿಮ್ಮ ಹಿಂಬದಿಯ ಕ್ಯಾಮೆರಾದೊಂದಿಗೆ ರೆಕಾರ್ಡಿಂಗ್ ಮಾಡುವುದರಿಂದ ಜೂಮ್ ಇನ್ ಮಾಡಲು ಮತ್ತು ದೂರದಲ್ಲಿರುವ ವಸ್ತುಗಳನ್ನು ಸೆರೆಹಿಡಿಯಲು ಕೂಡ ಸಾಧ್ಯವಾಗುತ್ತದೆ.

ಇದನ್ನೂ ಓದಿ: ಕಡಿಮೆ ಬೆಲೆಯ ಪವರ್​ಫುಲ್ ಪವರ್ ಬ್ಯಾಂಕ್: ಮೊಬೈಲ್, ಲ್ಯಾಪ್​ಟಾಪ್​ನ್ನು ಚಾರ್ಜ್​ ಮಾಡಬಹುದು

ಇದನ್ನೂ ಓದಿ: Viral Story: ಒಂದು ಕೆ.ಜಿ ಮಾಂಸ ಖರೀದಿಸಿದ್ರೆ ಒಂದು ಲೀಟರ್ ಪೆಟ್ರೋಲ್ ಉಚಿತ

ಇದನ್ನೂ ಓದಿ: LICಯ ವಿಶೇಷ ಯೋಜನೆ: 200 ರೂ. ಹೂಡಿಕೆ ಮಾಡಿ, 28 ಲಕ್ಷ ರೂ. ಪಡೆಯಿರಿ

(Telegram New Update: Improves Group Video Calls With Up to 1,000 People)

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್