ಟೊಯೊಟಾ ಇನ್ನೋವಾ ಕ್ರಿಸ್ಟಾ ಲಿಮಿಟೆಡ್ ಆವೃತ್ತಿ ಕಾರು ಹೊಸ ಫೀಚರ್​​​ಗಳೊಂದಿಗೆ ಲಾಂಚ್ ಆಗಿದೆ, ಬೆಲೆ ರೂ. 17.18 ಲಕ್ಷ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 21, 2021 | 8:04 PM

ಟಿಕೆಎಮ್ ಸಂಸ್ಥೆಯು ಇದುವರೆಗೆ ಇನ್ನೋವಾ ಮಾನಿಕರ್ ಮತ್ತು ಹೊಸ ತಲೆಮಾರಿನ ಇನ್ನೋವಾ ಕ್ರಿಸ್ಟಾ ಸೇರಿದಂತೆ ಒಟ್ಟು 9 ಲಕ್ಷ ಯುನಿಟ್​ಗಳನ್ನು ಮಾರಿದೆಯಂತೆ.

ಈ ಬಾರಿಯ ಹಬ್ಬದ ಸೀಸನನ್ನು ಮತ್ತಷ್ಟು ರೋಚಕ, ಸ್ಮರಣೀಯ ಮತ್ತು ಆನಂದಮಯಗೊಳಿಸಲು ಟೊಯೊಟಾ ಕಿರ್ಲೋಸ್ಕರ್ ಮೋಟರ್ಸ್ ಸಂಸ್ಥೆಯು (ಟಿಕೆಎಮ್) ಟೊಯೊಟಾ ಇನ್ನೋವಾ ಕ್ರಿಸ್ಟಾ ಲಿಮಿಟೆಡ್ ಆವೃತ್ತಿಯನ್ನು 6 ಹೊಸ ಫೀಚರ್ ಗಳೊಂದಿಗೆ ಬಿಡುಗಡೆ ಮಾಡಿದೆ. ಇದರ ಬೆಲೆ ಆರಂಭದಲ್ಲೇ ಹೇಳಿಬಿಡ್ತೀವಿ, ದೆಹಲಿಯಲ್ಲಿ ಎಕ್ಸ್ ಶೋ ರೂಂ ಬೆಲೆ ರೂ. 17.18 ಲಕ್ಷಗಳಂತೆ. ಟೊಯೊಟಾ ಇನ್ನೋವಾ ಕ್ರಿಸ್ಟಾ, ಇನ್ನೋವಾ ಕ್ರಿಸ್ಟಾ ಜಿಕ್ಸ್ ಟ್ರಿಮ್ಸ್ಗೆ ಆಡ್-ಆನ್ ಪ್ಯಾಕ್ ಆಗಿದ್ದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಪ್ಷನ್ಗಳಲ್ಲಿ ಲಭ್ಯವಾಗಲಿದೆ. ಟೊಯೊಟಾ ಇನ್ನೋವಾ ಕ್ರಿಸ್ಟಾ 7 ಮತ್ತು 8 ಸೀಟುಗಳೊಂದಿಗೆ ಬಂದಿದ್ದು ನಿಮಗೆ ಕೊಳ್ಳುವ ಇಚ್ಛೆ ಇದ್ದರೆ ಯಾವ ಕಾರಣಕ್ಕೂ ತಡಮಾಡಬೇಡಿ. ಯಾಕೆ ಗೊತ್ತಾ? ಟೋಯೊಟಾ ಕಂಪನಿಯ ಡೀಲರ್ ಗಳಲ್ಲಿ ಸ್ಟಾಕ್ ಮುಗಿಯುವರೆಗೆ ಮಾತ್ರ ಕಾರು ಸಿಗುತ್ತದೆ, ಅಮೇಲೆ ಇಲ್ಲ.

ಲಿಮಿಟೆಡ್ ಎಡಿಶನ್ ಅಂಗವಾಗಿ ಸೀಮಿತ ಸಂಖ್ಯೆಯ ಕಾರುಗಳನ್ನು ಮಾತ್ರ ಕಂಪನಿ ಉತ್ಪಾದಿಸಿದೆ. ಅಂದಹಾಗೆ, ಟಿಕೆಎಮ್ ಸಂಸ್ಥೆಯು ಇದುವರೆಗೆ ಇನ್ನೋವಾ ಮಾನಿಕರ್ ಮತ್ತು ಹೊಸ ತಲೆಮಾರಿನ ಇನ್ನೋವಾ ಕ್ರಿಸ್ಟಾ ಸೇರಿದಂತೆ ಒಟ್ಟು 9 ಲಕ್ಷ ಯುನಿಟ್​ಗಳನ್ನು ಮಾರಿದೆಯಂತೆ.

ಹೊಸ ಸೀಮಿತ ಆವೃತ್ತಿ ಪ್ಯಾಕ್ ಇನ್ನೋವಾ ಕ್ರಿಸ್ಟಾದಲ್ಲಿ 360 ಡಿಗ್ರಿ ಕೆಮೆರಾ, ಹೆಡ್ಸ್ ಅಪ್ ಡಿಸ್ಪ್ಲೇ, ಟೈರ್-ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್), ವೈರ್‌ಲೆಸ್ ಚಾರ್ಜರ್, ಏರ್ ಐಯಾನೈಜರ್ ಮತ್ತು ಡೋರ್-ಎಡ್ಜ್ ಆಂಬಿಯೆಂಟ್ ಲೈಟಿಂಗ್‌ನಂತಹ ವೈಶಿಷ್ಟ್ಯಗಳನ್ನು ಸೇರಿವೆ. ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಮುಂತಾದ ಹೊಸ ಡಿಸ್ಪ್ಲೇ, ಏಳು ಏರ್‌ಬ್ಯಾಗ್‌ಗಳು, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ಇಕೋ ಮತ್ತು ಪವರ್ ಡ್ರೈವ್ ಮೋಡ್‌ಗಳಂಥ ಎಮ್ ಪಿ ವಿಯಲ್ಲಿ ಈಗಾಗಲೇ 16-ಕಲರ್ ಆಯ್ಕೆಗಳ ಸೌಲಭ್ಯ ನೀಡಲಾಗಿದೆ.

ಇದನ್ನೂ ಓದಿ:   Viral Video: ಅನಾರೋಗ್ಯದಿಂದ ಚೇತರಿಸಿಕೊಂಡ ಮಗನನ್ನು ಕಂಡು ಕುಣಿದು ಕುಪ್ಪಳಿಸಿದ ಅಪ್ಪ; ಹೃದಯಸ್ಪರ್ಶಿ ವಿಡಿಯೋವಿದು