Video: ಲಿಫ್ಟ್​ ಬಾಗಿಲಲ್ಲಿ ಕೈ ಸಿಲುಕಿ ಒದ್ದಾಡಿದ ಮಗು

Updated on: Mar 15, 2026 | 7:14 AM

ಲಿಫ್ಟ್​ನಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವಾಗ ತುಂಬಾ ಜಾಗೃತೆಯಾಗಿರಬೇಕು. ಲಿಫ್ಟ್​​ನಿಂದ ಹೊರ ಬರಬೇಕು ಎನ್ನುವಾಗ ಅಜ್ಜಿಯ ಕೈಲಿದ್ದ ಮಗುವಿನ ಕೈ ಲಿಫ್ಟ್​ ಬಾಗಿಲಲ್ಲಿ ಸಿಲುಕಿ ಒದ್ದಾಡಿರುವ ಘಟನೆ ಪುಣೆಯಲ್ಲಿ ನಡೆದಿದೆ. ತಾಯಿ ಮತ್ತು ಅಜ್ಜಿ ಇಬ್ಬರು ಮಕ್ಕಳನ್ನು ಎತ್ತಿಕೊಂಡು ಲಿಫ್ಟ್ ಹತ್ತಿದ್ದಾರೆ, ಇನ್ನೇನು ಇಳಿಯಬೇಕು ಎನ್ನುವಷ್ಟರಲ್ಲಿ ಮಗುವಿನ ಕೈ ಲಿಫ್ಟ್ ಬಾಗಿಲೊಳಗೆ ಸಿಲುಕಿದೆ.

ಪುಣೆ, ಮಾರ್ಚ್​ 15: ಲಿಫ್ಟ್​ನಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವಾಗ ತುಂಬಾ ಜಾಗೃತೆಯಾಗಿರಬೇಕು. ಲಿಫ್ಟ್​​ನಿಂದ ಹೊರ ಬರಬೇಕು ಎನ್ನುವಾಗ ಅಜ್ಜಿಯ ಕೈಲಿದ್ದ ಮಗುವಿನ ಕೈ ಲಿಫ್ಟ್​ ಬಾಗಿಲಲ್ಲಿ ಸಿಲುಕಿ ಒದ್ದಾಡಿರುವ ಘಟನೆ ಪುಣೆಯಲ್ಲಿ ನಡೆದಿದೆ. ತಾಯಿ ಮತ್ತು ಅಜ್ಜಿ ಇಬ್ಬರು ಮಕ್ಕಳನ್ನು ಎತ್ತಿಕೊಂಡು ಲಿಫ್ಟ್ ಹತ್ತಿದ್ದಾರೆ, ಇನ್ನೇನು ಇಳಿಯಬೇಕು ಎನ್ನುವಷ್ಟರಲ್ಲಿ ಮಗುವಿನ ಕೈ ಲಿಫ್ಟ್ ಬಾಗಿಲೊಳಗೆ ಸಿಲುಕಿದೆ. ಲಿಫ್ಟ್​ನಲ್ಲಿದ್ದವರು ಹರಸಾಹಸ ಪಟ್ಟು ಅಂತೂ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವರು ದಿನಗಳ ಹಿಂದೆ ಇಂಥದ್ದೇ ಘಟನೆ ನಡೆದಿತ್ತು. ವ್ಯಕ್ತಿಯೊಬ್ಬರು ಇನ್ನೇನು ಲಿಫ್ಟ್​ ಇಳಿಯಬೇಕು ಎನ್ನುವಷ್ಟರಲ್ಲಿ ಬಾಗಿಲು ತೆಗೆದಾಕ್ಷಣ ಲಿಫ್ಟ್​ ಕೆಳಗೆ ಹೋಗಿತ್ತು, ವ್ಯಕ್ತಿ ನೇರವಾಗಿ ಕೆಳಗೆ ಬಿದ್ದಿದ್ದರು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More