ಮಂಡ್ಯ: ಜಿಲ್ಲೆಯ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ (N Cheluvarayaswamy) ಇಂದು ಮಂಡ್ಯ ನಗರದಲ್ಲಿ ಸುದ್ದಿಗೋಷ್ಟಿಯೊಂದನ್ನು ನಡೆಸಿ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ರಸ್ತೆಯಲ್ಲಿ (Bengaluru-Mysuru Expressway) ಶ್ರೀರಂಗಪಟ್ಟಣದ ಬಳಿ ಇರುವ ಲೋಪದೋಶಗಳನ್ನು ವಿವರಿಸಿದರು. ಆ ಭಾಗದಲ್ಲಿ ರೆಸ್ಟ್ ರೂಮಿಲ್ಲ, ಅಂಬ್ಯುಲೆನ್ಸ್ ಮತ್ತು ಕ್ರೇನ್ ಗಳ ವ್ವವಸ್ಥೆ ಇಲ್ಲ-ಮೊದಲಾದ ಸಮಸ್ಯೆಗಳನ್ನು ಉಲ್ಲೇಖಿಸಿ ಅವುಗಳನ್ನು ಸರಿಪಡಿಸದ ಹೊರತು ಟೋಲ್ ಸಂಗ್ರಹಿಸುವಂತಿಲ್ಲ ಎಂದು ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಪತ್ರ ಬರೆಯಲು ಇವತ್ತು ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆಯೆಂದು ಸಚಿವ ಹೇಳಿದರು. ಇಲ್ಲಿ ಒಂದು ಗಮ್ಮತ್ತನ್ನು ಗಮನಿಸಿ. ಸಚಿವ ಮಾತಾಡುವಾಗ ಅವರ ಹಿಂದೆ ಕುಳಿತಿರುವ ಪ್ರಾಯಶಃ ಅಧಿಕಾರಿ ಇರಬಹುದು, ಅವರಿಗೆ ತಾನು ಕೆಮೆರಾದ ಫ್ರೇಮ್ ನಲ್ಲಿದ್ದೇನೆ ಅನ್ನೋ ಪರಿವೆಯೇ ಇಲ್ಲದೆ ಏನನ್ನೋ ತಿನ್ನುತ್ತಾ ಕೂತಿದ್ದಾರೆ. ಕೊನೆಗೆ ಒಬ್ಬ ಪತ್ರಕರ್ತ ಅವರಿಗೆ ಸೂಚ್ಯವಾಗಿ ಹೇಳುತ್ತಾರೆ. ಕೂಡಲೇ ಅವರಿಗೆ ತಪ್ಪಿನ ಅರಿವಾಗಿ ತಟ್ಟೆ ಹಿಡಿದುಕೊಂಡೇ ಅಲ್ಲಿಂದ ಎದ್ದು ಹೋಗುತ್ತಾರೆ. ಈ ಪಾಪಿ ಕಣ್ಣುಗಳಿಂದ ನಾವು ಏನೆಲ್ಲ ನೋಡಬೇಕಾಗಿದೆ ಯಪ್ಪೋ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
.