ಬೆಲೆ ಕುಸಿತದಿಂದ ಕೋಪಗೊಂಡು ರಸ್ತೆಗೆ 25 ಕ್ವಿಂಟಾಲ್ ಟೊಮ್ಯಾಟೋ ಸುರಿದು ಪ್ರತಿಭಟಿಸಿದ ರೈತರು

Updated on: Mar 25, 2026 | 10:52 PM

ಕೋಪಗೊಂಡ ರೈತರು 25 ಕ್ವಿಂಟಾಲ್ ಟೊಮ್ಯಾಟೊ ಹಣ್ಣನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದರು. ರೈತರು ಮಾರುಕಟ್ಟೆಯಲ್ಲಿ ನ್ಯಾಯಯುತ ಬೆಲೆ ಸಿಗದ ಕಾರಣದಿಂದಾಗಿ ತಮ್ಮ ಬೆಳೆಯನ್ನು ನಾಶಪಡಿಸಿ ಪ್ರತಿಭಟಿಸಿದ ಘಟನೆ ನಡೆದಿದೆ. ಆ ರೈತ ಸುಮಾರು 1 ಎಕರೆ ಭೂಮಿಯಲ್ಲಿ ಟೊಮ್ಯಾಟೊ ಕೃಷಿ ಮಾಡಿದ್ದರು. ಅದಕ್ಕಾಗಿ ಸುಮಾರು 40,000 ರಿಂದ 45,000 ರೂ.ಗಳನ್ನು ಖರ್ಚು ಮಾಡಿದ್ದರು. ಆದರೆ, ಖರ್ಚು ಮಾಡಿದಷ್ಟು ಹಣ ವಾಪಾಸ್ ಸಿಗಲಿಲ್ಲ.

ಮುಂಬೈ, ಮಾರ್ಚ್ 25: ಮಹಾರಾಷ್ಟ್ರದ ಜಲ್ನಾದಲ್ಲಿ ಟೊಮ್ಯಾಟೊ ಬೆಲೆ (Tomato Price) ಕುಸಿತವಾಗಿದೆ. ಇದರಿಂದ ಕೋಪಗೊಂಡ ರೈತರು 25 ಕ್ವಿಂಟಾಲ್ ಟೊಮ್ಯಾಟೊ ಹಣ್ಣನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದರು. ರೈತರು ಮಾರುಕಟ್ಟೆಯಲ್ಲಿ ನ್ಯಾಯಯುತ ಬೆಲೆ ಸಿಗದ ಕಾರಣದಿಂದಾಗಿ ತಮ್ಮ ಬೆಳೆಯನ್ನು ನಾಶಪಡಿಸಿ ಪ್ರತಿಭಟಿಸಿದ ಘಟನೆ ನಡೆದಿದೆ. ಆ ರೈತ ಸುಮಾರು 1 ಎಕರೆ ಭೂಮಿಯಲ್ಲಿ ಟೊಮ್ಯಾಟೊ ಕೃಷಿ ಮಾಡಿದ್ದರು. ಅದಕ್ಕಾಗಿ ಸುಮಾರು 40,000 ರಿಂದ 45,000 ರೂ.ಗಳನ್ನು ಖರ್ಚು ಮಾಡಿದ್ದರು. ಆದರೆ, ಖರ್ಚು ಮಾಡಿದಷ್ಟು ಹಣ ವಾಪಾಸ್ ಸಿಗಲಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More