ವಕ್ಫ್ ವಿರುದ್ಧ ವಿಜಯೇಂದ್ರ ಕರೆ ನೀಡಿದ ಪ್ರತಿಭಟನೆಯಲ್ಲೂ ನಾನು ಭಾಗಿಯಾಗಿದ್ದೆ: ಪ್ರತಾಪ್ ಸಿಂಹ

|

Updated on: Nov 30, 2024 | 6:28 PM

ದಕ್ಷಿಣ ಕರ್ನಾಟಕದಲ್ಲಿ ರೈತರ ಭೂಮಿಯನ್ನು ಕಬಳಿಸುವ ಪ್ರಯತ್ನ ವಕ್ಫ್ ಮಾಡುತ್ತಿಲ್ಲ, ಆದರೆ ಸರ್ಕಾರೀ ಭೂಮಿಗಳ ಮೇಲೆ ಕಣ್ಣು ಹಾಕಿದೆ, ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲೂ 22ರಂದು ರಾಜ್ಯದಾದ್ಯಂತ ಹೋರಾಟಕ್ಕೆ ಕರೆ ನೀಡಿದಾಗ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವಕ್ಫ್ ವಿರುದ್ಧ ಹೋರಾಟ ನಡೆಯಿತು, ಮೈಸೂರು ಜಿಲ್ಲೆಯಲ್ಲಿ ನಡೆದ ಹೋರಾಟದಲ್ಲಿ ತಾನು ಭಾಗಿಯಾಗಿದ್ದೆ ಎಂದು ಪ್ರತಾಪ್ ಹೇಳಿದರು.

ಬಾಗಲಕೋಟೆ: ಬನಹಟ್ಟಿಯಿಂದ ತೇರದಾಳ ತೆರಳುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದಲ್ಲಿ ಹಿರಿಯ ಮತ್ತು ಅನುಭವಿ ರಾಜಕಾರಣಿಯಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ವಕ್ಫ್ ನಿಂದ ರೈತರ ಭೂಮಿಗಳನ್ನು ಉಳಿಸಲು ಹೋರಾಟ ನಡೆಸಲಾಗುತ್ತಿದೆಯೇ ಹೊರತು ಬಣಗಳ ನಡುವೆ ನಡೆಯುವ ಹೋರಾಟ ಇದಲ್ಲ ಎಂದು ಹೇಳಿದರು. ಬಿಜೆಪಿಯಲ್ಲಿ ಎಲ್ಲರೂ ಕಾರ್ಯಕರ್ತರು, ಬಣಗಳು ಉಂಟಾಗುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕೇವಲ ವಕ್ಫ್ ಭೂಕಬಳಿಕೆ ವಿರುದ್ಧ ನಮ್ಮ ಹೋರಾಟ ಬೇರೆ ಯಾರ ವಿರುದ್ಧವೂ ಅಲ್ಲ: ಬಸನಗೌಡ ಯತ್ನಾಳ್