Jaggesh: ರೀಲ್ಸ್​ ಮಾಡ್ತೀರಾ? ಹಾಗಾದ್ರೆ, ಜಗ್ಗೇಶ್​ ಹೇಳಿದ ಈ ಮಾತು ಕೇಳಿ ಸ್ವಲ್ಪ..

| Updated By: ಮದನ್​ ಕುಮಾರ್​

Updated on: Sep 07, 2022 | 6:42 AM

Totapuri Movie: ‘ತೋತಾಪುರಿ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಜಗ್ಗೇಶ್​ ಮಾತನಾಡಿದ್ದಾರೆ. ರೀಲ್ಸ್​ ಮಾಡುವವರ ಸ್ಟೈಲ್​ ಯಾವ ರೀತಿ ಇರುತ್ತದೆ ಎಂಬುದನ್ನು ತಮ್ಮದೇ ರೀತಿಯಲ್ಲಿ ಅವರು ವಿವರಿಸಿದ್ದಾರೆ.

ನಟ ಜಗ್ಗೇಶ್​ (Jaggesh) ಅವರಿಗೆ ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಇದೆ. ಬಣ್ಣದ ಲೋಕದಲ್ಲಿ ಅವರು ಅನೇಕ ಏಳು-ಬೀಳುಗಳನ್ನು ಕಂಡು ಇಲ್ಲಿಯವರೆಗೆ ಬಂದಿದ್ದಾರೆ. ಆರಂಭದ ದಿನಗಳಲ್ಲಿ ಅವರು ಪಟ್ಟ ಕಷ್ಟಗಳು ಒಂದೆರಡಲ್ಲ. ಆದರೆ ಈಗಿನ ಕಾಲದಲ್ಲಿ ಜನರಿಗೆ ಎಲ್ಲವೂ ಸುಲಭ ಆಗಿದೆ. ರೀಲ್ಸ್​ (Reels) ಮಾಡುವವರು ಲಕ್ಷ ಲಕ್ಷ ಫಾಲೋವರ್ಸ್​ ಹೊಂದಿರುತ್ತಾರೆ. ಆ ಬಗ್ಗೆ ‘ತೋತಾಪುರಿ’ (Totapuri Movie) ಚಿತ್ರದ ಸುದ್ದಿಗೋಷ್ಠಿಯಲ್ಲಿ ಜಗ್ಗೇಶ್​ ಮಾತನಾಡಿದ್ದಾರೆ. ರೀಲ್ಸ್​ ಮಾಡುವವರ ಸ್ಟೈಲ್​ ಯಾವ ರೀತಿ ಇದೆ ಎಂಬುದನ್ನು ತಮ್ಮದೇ ರೀತಿಯಲ್ಲಿ ಅವರು ವಿವರಿಸಿದ್ದಾರೆ. ‘ತೋತಾಪುರಿ’ ಸಿನಿಮಾ ಸೆಪ್ಟೆಂಬರ್​ 30ರಂದು ರಿಲೀಸ್​ ಆಗಲಿದೆ. ಈ ಚಿತ್ರದಲ್ಲಿ ಜಗ್ಗೇಶ್​ ಜತೆ ಅತಿದಿ ಪ್ರಭುದೇವ, ಸುಮನ್ ರಂಗನಾಥ್​, ಡಾಲಿ ಧನಂಜಯ್​ ಮುಂತಾದವರು ನಟಿಸಿದ್ದಾರೆ.