ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಹುಲಿ, ಕರಡಿ; ವಿಡಿಯೋ ನೋಡಿ
ವೀರನ ಹೊಸಹಳ್ಳಿ ಸಫಾರಿಯಲ್ಲಿ ಕಾಣಿಸಿದ ಹುಲಿ ಮತ್ತು ಕರಡಿಯ ದೃಶ್ಯವನ್ನು ಪ್ರವಾಸಿಗರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಬಿಂದಾಸ್ ವಾಕಿಂಗ್ ಮಾಡುತ್ತಿದ್ದ ಹುಲಿ ಮತ್ತು ಮರ ಹತ್ತಲು ಪ್ರಯತ್ನಿಸುತ್ತಿದ್ದ ಕರಡಿಯ ವಿಡಿಯೋ ಸದ್ಯ ವೈರಲ್ ಆಗಿದೆ.
ಮೈಸೂರು: ವೀಕೆಂಡ್ನಲ್ಲಿ ಸಫಾರಿಗೆ ಹೋಗುವುದು ಇತ್ತೀಚೆಗೆ ಟ್ರೆಂಡ್ ಆಗಿದೆ. ಇದಕ್ಕೆ ಅನುಗುಣವಾಗಿ ಸಫಾರಿ ವೇಳೆಯಲ್ಲಿ ಪ್ರಾಣಿಗಳು ಕಾಣಿಸಿಕೊಳ್ಳತ್ತಿದ್ದು, ಪ್ರಾಣಿ ಪ್ರಿಯರಿಗೆ ಮತ್ತಷ್ಟು ಖುಷಿ ನೀಡುತ್ತಿದೆ. ಹೀಗೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ವೀರನ ಹೊಸಹಳ್ಳಿ ಬಳಿಯ ನಾಗರಹೊಳೆ ಅರಣ್ಯ ಪ್ರದೇಶಕ್ಕೂ ಕೂಡ ಅನೇಕರು ಸಫಾರಿಗೆ ಬರುತ್ತಾರೆ. ಇಂದು (ಡಿಸೆಂಬರ್ 11) ಸಫಾರಿ ವೇಳೆಯಲ್ಲಿ ಪ್ರವಾಸಿಗರಿಗೆ ಹುಲಿ ಮತ್ತು ಕರಡಿ ಕಾಣಿಸಿಕೊಂಡಿದೆ.
ವೀರನ ಹೊಸಹಳ್ಳಿ ಸಫಾರಿಯಲ್ಲಿ ಕಾಣಿಸಿದ ಹುಲಿ ಮತ್ತು ಕರಡಿಯ ದೃಶ್ಯವನ್ನು ಪ್ರವಾಸಿಗರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಬಿಂದಾಸ್ ವಾಕಿಂಗ್ ಮಾಡುತ್ತಿದ್ದ ಹುಲಿ ಮತ್ತು ಮರ ಹತ್ತಲು ಪ್ರಯತ್ನಿಸುತ್ತಿದ್ದ ಕರಡಿಯ ವಿಡಿಯೋ ಸದ್ಯ ವೈರಲ್ ಆಗಿದೆ. ಈ ವಿಡಿಯೋದ ಕೊನೆಯಲ್ಲಿ ಪ್ರವಾಸಿಗರನ್ನು ಕಂಡು ಕರಡಿ ಓಡಿ ಹೋದ ದೃಶ್ಯ ಕೂಡ ನೀವು ಗಮನಿಸಬಹದು.
ಇದನ್ನೂ ಓದಿ:
ಮೈಸೂರು: ವೀಕೆಂಡ್ ಸಫಾರಿ; ಮರ ಹತ್ತಲು ಯತ್ನಿಸುತ್ತಿದ್ದ ಹುಲಿ ವಿಡಿಯೋ ಸೆರೆ