ಜೋಗದ ಸಿರಿ: ಪ್ರವಾಹದಂತೆ ಬಂದು ಜೋಗ ವೈಭವ ಕಣ್ತುಂಬಿಕೊಳ್ಳುತ್ತಿರುವ ಪ್ರವಾಸಿಗರು
ಶಿವಮೊಗ್ಗದಲ್ಲಿರುವ ಜೋಗ ಜಲಪಾತವನ್ನು ನೋಡಲು ಪ್ರವಾಹದಂತೆ ಪ್ರವಾಸಿಗರು ಭೇಟಿ ಕೊಡುತ್ತಿದ್ದಾರೆ. ಸುರಿಯುತ್ತಿರುವ ಮಳೆ, ಬೀಳುತ್ತಿರುವ ಮಂಜಿನ ನಡುವೆ ಪ್ರವಾಸಿಗರ ದಂಡು ಜಲಪಾತವನ್ನು ಕಣ್ತುಂಬಿಕೊಳ್ಳುತ್ತಿದೆ.
ರಾಜನ ಗಾಂಭೀರ್ಯ, ರಾಣಿಯ ತಳುಕು ಬಳುಕು, ಇದರ ಪಕ್ಕದಲ್ಲಿ ಶರವೇಗದಲ್ಲಿ ಧುಮ್ಮಿಕ್ಕುವ ರೋರಲ್, ರಾಕೇಟ್ ಜಲಧಾರೆಯ ಸೌಂದರ್ಯ ನೋಡಲು ಕಣ್ಣುಗಳೆರಡು ಸಾಲದು. ಶಿವಮೊಗ್ಗದ ಸಾಗರ ತಾಲೂಕಿನಲ್ಲಿರುವ ಈ ಜೋಗ ಜಲಪಾತ (Jog Falls)ವು ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದೆ. ಜೀವನದಲ್ಲಿ ಒಮ್ಮೆಯಾದರೂ ಜೋಗ ಜಲಪಾತ ನೋಡಬೇಕು ಎಂಬ ಕವಿ ವಾಣಿಯಂತೆ ಜೋಗದ ಸಿರಿಯನ್ನು ಕಣ್ತುಂಬಿಕೊಳ್ಳಲು ಪ್ರವಾಹದಂತೆ ಪ್ರಾವಾಸಿಗರು ಭೇಟಿ ಕೊಡುತ್ತಿದ್ದಾರೆ. ಸುರಿಯುತ್ತಿರುವ ಮಳೆ, ಬೀಳುತ್ತಿರುವ ಮಂಜಿನ ನಡುವೆ ಪ್ರವಾಸಿಗರ ದಂಡು ಜಲಪಾತವನ್ನು ಕಣ್ತುಂಬಿಕೊಳ್ಳುತ್ತಿದೆ.
ಇದನ್ನೂ ಓದಿ: Karnataka Rain: ಜುಲೈ 14ರವರೆಗೆ ಕರ್ನಾಟಕದಲ್ಲಿ ವ್ಯಾಪಕ ಮಳೆ, ಶಾಲೆಗಳಿಗೆ ರಜೆ; ಕರಾವಳಿಗೆ ರೆಡ್ ಅಲರ್ಟ್ ಘೋಷಣೆ
Published on: Jul 11, 2022 10:16 AM